ಸಾರಾಂಶ
ಅರ್ಚಕರ ಗೈರಿನಲ್ಲಿ ತಮ್ಮ ಮನೆಯಲ್ಲಿ ಕೆಲಸ ಮಾಡುವ ಮಹಿಳೆಯಿಂದ ದೇವರ ಪೂಜೆ ಮಾಡಿಸಿದ್ದು, ಗ್ರಾಮಸ್ಥರು ಉಪವಿಭಾಗಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಅರ್ಚಕರ ಗೈರಿನಲ್ಲಿ ತಮ್ಮ ಮನೆಯಲ್ಲಿ ಕೆಲಸ ಮಾಡುವ ಮಹಿಳೆಯಿಂದ ದೇವರ ಪೂಜೆ ಮಾಡಿಸಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವರಹಳ್ಳಿ ಗ್ರಾಮದ ಶ್ರೀ ತಪಸ್ವಿರಾಯಸ್ವಾಮಿ ದೇವಸ್ಥಾನದಲ್ಲಿ ಶನಿವಾರ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.ಸುಮಾರು 1200 ವರ್ಷ ಇತಿಹಾಸವಿರುವ ತಪಸ್ವಿರಾಯಸ್ವಾಮಿ ದೇವಸ್ಥಾನ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು, ದೇವಸ್ಥಾನದ ಅರ್ಚಕ ಶ್ರೀನಿವಾಸಮೂರ್ತಿ ಊರಿನಲ್ಲಿ ಇಲ್ಲದಾಗ ತಮ್ಮ ಮನೆ ಕೆಲಸದಾಕಿ ಕಡೆಯಿಂದ ಗರ್ಭಗುಡಿಯಲ್ಲಿ ದೇವರ ಪೂಜೆ ಮಾಡಿಸುತ್ತಾರೆ. ಅಲ್ಲದೆ ದೇವಸ್ಥಾನದ ಆಸ್ತಿಯನ್ನು ತಮ್ಮ ಹೆಸರಿಗೆ ಪರಭಾರೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ದೇವರಹಳ್ಳಿ ಗ್ರಾಮಸ್ಥರು ಪಾಂಡವಪುರ ಉಪವಿಭಾಗಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
;Resize=(128,128))
;Resize=(128,128))
;Resize=(128,128))