ಬೀರೂರುಪ್ರಧಾನಿ ಮೋದಿಜಿಯವರ ದೂರ ದೃಷ್ಠಿ ಮತ್ತು ಆಶಯದಂತೆ ದೇಶದ ಸಂಪರ್ಕ ಕೊಂಡಿ ಮತ್ತು ಆದಾಯ ನೀಡುವ ರೈಲ್ವೆಯಲ್ಲಿನ ನ್ಯೂನ್ಯತೆಗಳನ್ನು ಗಮನಿಸಿ ಆ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುತ್ತಿದ್ದಾರೆ. ಇಂತಹ ಸಂಧರ್ಭದಲ್ಲಿ ರಾಜಕಾರಣಿಗಳು ಯಾರೇ ಇದ್ದರು ಸಹ ರಾಜಕಾರಣ ಮಾಡಬಾರದು ಎಂದು ನೈರುತ್ಯ ರೈಲ್ವೆ ಹಾಗೂ ಜಲಶಕ್ತಿ ಸಚಿವ ವಿ.ಸೋಮಣ್ಣ ಹೇಳಿದರು.
₹5.14ಕೋಟಿ ರೈಲ್ವೇ ಕೆಳಸೇತುವೆ ಕಾಮಗಾರಿಗೆ ಭೂಮಿ ಪೂಜೆ । ದೇಶದಲ್ಲಿ 13ಸಾವಿರಕ್ಕೂ ಹೆಚ್ಚಿನ ಲೆವೆಲ್ ಕ್ರಾಸ್ ಕಾಮಗಾರಿ ಪೂರ್ಣ
ಕನ್ನಡಪ್ರಭ ವಾರ್ತೆ, ಬೀರೂರುಪ್ರಧಾನಿ ಮೋದಿಜಿಯವರ ದೂರ ದೃಷ್ಠಿ ಮತ್ತು ಆಶಯದಂತೆ ದೇಶದ ಸಂಪರ್ಕ ಕೊಂಡಿ ಮತ್ತು ಆದಾಯ ನೀಡುವ ರೈಲ್ವೆಯಲ್ಲಿನ ನ್ಯೂನ್ಯತೆಗಳನ್ನು ಗಮನಿಸಿ ಆ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುತ್ತಿದ್ದಾರೆ. ಇಂತಹ ಸಂಧರ್ಭದಲ್ಲಿ ರಾಜಕಾರಣಿಗಳು ಯಾರೇ ಇದ್ದರು ಸಹ ರಾಜಕಾರಣ ಮಾಡಬಾರದು ಎಂದು ನೈರುತ್ಯ ರೈಲ್ವೆ ಹಾಗೂ ಜಲಶಕ್ತಿ ಸಚಿವ ವಿ.ಸೋಮಣ್ಣ ಹೇಳಿದರು.ಭಾನುವಾರ ಸಂತೆಕಟ್ಟೆ ಮೇಲ್ಭಾಗದಲ್ಲಿನ ₹5.14ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ಕೆಳ ಸೇತುವೆ ಕಾಮಗಾರಿಗೆ ಅಧಿಕಾರಿಗಳೊಂದಿಗೆ ಭೂಮಿಪೂಜೆ ನೇರವೇರಿಸಿ ಮಾತನಾಡಿ ವಾಹನ ಸವಾರರಿಗೆ ಅಡೆತಡೆ ನೀಡುತ್ತಿದ್ದ ಲೆವೆಲ್ ಕ್ರಾಸ್ ಗಳಲ್ಲಿ ಈ ದೇಶದಲ್ಲಿ 13ಸಾವಿರಕ್ಕೂ ಹೆಚ್ಚಿನ ಲೆವೆಲ್ ಕ್ರಾಸ್ ಕಾಮಗಾರಿ ಪೂರ್ಣವಾದರೆ ಕರ್ನಾಟಕದಲ್ಲಿ 700ಲೆವೆಲ್ ಕ್ರಾಸ್ ಕಾಮಗಾರಿಗಳು ಸುಗಮ ಸಂಚಾರಕ್ಕೆ ಅಣಿಯಾಗಿವೆ.
ದೇಶದಲ್ಲಿ ರೈಲ್ವೆಯೋಜನೆ ಅಭಿವೃದ್ಧಿ ಸಂಕೇತ. ಪ್ರಧಾನಿ ಉತ್ತಮವಾಗಿ ಇದನ್ನು ನಡೆಸುತ್ತಿದ್ದಾರೆ. ಇಡೀ ದೇಶ ಸುತ್ತಾಡಿದರೆ, ಜಮ್ಮು –ಕಾಶ್ಮೀರದಿಂದ ಹಿಡಿದು ಚತ್ತಿಸ್ ಗಡದ ವರೆಗೂ ₹8 ಲಕ್ಷಕೋಟಿ ರೈಲ್ವೆ ಯೋಜನೆ ಕಾಮಗಾರಿಗಳು ನಡೆಯುತ್ತಿವೆ. ಮುಂದಿನ 10ವರ್ಷಗಳಲ್ಲಿ ಯಾವ ಲೆವೆಲ್ ಕ್ರಾಸ್ ಗಳು ಇರುವುದಿಲ್ಲ ಎಂದರು.ಕರ್ನಾಟಕದಲ್ಲಿ ರಾಯದುರ್ಗದಿಂದ ಪಾವಗಡದ ವರೆಗಿನ ಕಾಮಗಾರಿಗೆ 1ಲಕ್ಷದ 65ಕೋಟಿ ಹಣ ಬಿಡುಗಡೆಯಾಗಿದ್ದು ಕಾಮಗಾರಿ ಪೂರ್ಣ ಗೊಳ್ಳುತ್ತಿದೆ. ಮುಂಬರುವ 7 ತಿಂಗಳಲ್ಲಿ ಈ ಊರುಗಳಿಗೆ ರೈಲು ತಲುಪಲಿದೆ ಎಂದು ಮಾಹಿತಿ ನೀಡಿದರು.ಬೀರೂರು ರೈಲ್ವೆ ಜಂಕ್ಷನ್ ಸ್ವಚ್ಛತೆಗೆ ₹ 8ಕೋಟಿ ಬಿಡುಗಡೆ ಮಾಡಿದ್ದು ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಇದರಿಂದ ನಿಲ್ದಾಣ ಸ್ವಚ್ಛತೆ, ದೀಪ, ಪ್ಯಾನ್ ಶೌಚಾಲಯ, ಕೊಠಡಿಗಳು ದುರಸ್ತಿಯಾಗಲಿವೆ. ಈ ರೈಲ್ವೆ ಕೆಳ ಸೇತುವೆ ಕಾಮಗಾರಿಯನ್ನು ಮುಂಬರುವ ಡಿ.26ರ ರೊ ಳಗೆ ಉದ್ಘಾಟನೆಯಾಗಬೇಕೆಂದು ಗುತ್ತಿಗೆದಾರನಿಗೆ ಸೂಚಿಸಿದ ಅವರು, ಈ ನಿಲ್ದಾಣದಲ್ಲಿ ಹೆಚ್ಚಿನ ವಿಶಾಲ ಜಾಗವಿದ್ದರು ಸಹ ಪ್ಲಾಟ್ ಪಾರಂ ಕೊರತೆಯಿಂದ ಕೆಲವು ರೈಲುಗಳು ನಿಲ್ಲುತ್ತಿರಲಿಲ್ಲವೆಂಬುದನ್ನು ಗಮನಿಸಿ, ಹೆಚ್ಚಿನ ಪ್ಲಾಟ್ ಫಾರಂ ನಿರ್ಮಾಣಕ್ಕಾಗಿ ₹ 8.45ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಬೀರೂರು ಜನತೆಯ ಹಲವು ವರ್ಷಗಳ ಕನಸನ್ನು ರೈಲ್ವೆ ಸಚಿವ ವಿ. ಸೋಮಣ್ಣನವರು ನನಸು ಮಾಡಿರುವುದು ಸಂತಸ ತಂದಿದೆ. ಮಾರ್ಗದ ಕ್ಯಾಂಪ್ ಸುತ್ತಮುತ್ತಲ ಸುಮಾರು 7 ವಾರ್ಡಿನ ಜನತೆಗೆ ಈ ಕೆಳ ಸೇತುವೆಯಿಂದ ಅನುಕೂಲವಾಗಲಿದೆ. ಬಿ.ಕೋಡಿಹಳ್ಳಿ ರಸ್ತೆಯಲ್ಲಿ ನಿರ್ಮಾಣ ಮಾಡಿರುವ ಕೆಳಸೇತುವೆ ಕಿರಿದಾಗಿದ್ದು, ಅದನ್ನು ಅಗಲೀಕರಿಸಬೇಕೆಂದು ಮನವಿ ಮಾಡಿದ ಅವರು, ಕಡೂರು ನಿಲ್ದಾಣಕ್ಕೆ ವಂದೆ ಭಾರತ್ ರೈಲು ನಿಲುಗಡೆಗೊಳಿಸಿದರೆ 3ಜಿಲ್ಲೆಯ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಕಡೂರು ರೈಲ್ವೆ ನಿಲ್ದಾಣವನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಪರಿಣಾಮ ಧರ್ಮಸ್ಥಳ ಹಾಗೂ ಮತ್ತಿತರ ಕಡೆ ತೆರಳುವ ಪ್ರಯಾಣಿಕರಿಗೆ ನಿಲ್ದಾಣದ ಮುಂಭಾಗದಲ್ಲಿನ ಮೆಟ್ಟಿಲುಗಳು ಹೈರಾಣಾಗಿಸುತ್ತವೆ ಆದ್ದರಿಂದ ಈ ನಿಲ್ದಾಣ ಕೆಡವಿ ನೂತನ ನಿಲ್ದಾಣ ಮಾಡಿಕೊಡಬೇಕು ಮನವಿ ಮಾಡಿದರು. ನಿಲ್ದಾಣದ ಪಕ್ಕದಲ್ಲಿನ ಲೆವೆಲ್ ಕ್ರಾಸ್ ನಿಂದಾಗಿ ವಾಹನ ಸವಾರರಿಗೆ ಅನಾನುಕೂಲವಾಗಿದೆ. ಈ ಹಿಂದೆ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ರನ್ನು ಭೇಟಿ ಮಾಡಿ ಮೇಲ್ಸೇತುವೆ ನಿರ್ಮಾಣಕ್ಕೆ ಲಿಖಿತ ಅರ್ಜಿ ನೀಡಿದ್ದೆ ಆದರೆ ಕಾಮಗಾರಿಗೆ ಪ್ರಾರಂಭವಾಗದಿರುವುದು ಬೇಸರ ತಂದಿದೆ ಎಂದರು.ಇದಕ್ಕೆ ಉತ್ತರಿಸಿದ ಸಚಿವರು ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಸದ್ಯ₹17ಕೋಟಿ ಬಿಡುಗಡೆಯಾಗಿದೆ. ಶೀಘ್ರ ಕೆಲಸ ಪ್ರಾರಂಭಿಸಲು ಸೂಚಿಸುತ್ತೇನೆ. ಆದರೆ ಅದಕ್ಕೆ ಬೇಕಾದ ಜಾಗ ಸಂಬಂದಪಟ್ಟ ಕಂದಾಯ ಅಧಿಕಾರಿಗಳು ಬಿಡಿಸಿಕೊಡಬೇಕು. ಇನ್ನು ಕಡೂರು ನಿಲ್ದಾಣದ ಬಗ್ಗೆ ಶಾಸಕರು ಗಮನಕ್ಕೆ ತಂದಿದ್ದಾರೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವೇ ಆ ಕಾಮ ಗಾರಿಗೂ ಅನುಮೋದನೆ ನೀಡಲಾಗುವುದು ಎಂದು ಉತ್ತರಿಸಿದರು.ಸಭೆಯಲ್ಲಿ ಮಾಜಿ ಶಾಸಕ ಬೆಳ್ಳಿಪ್ರಕಾಶ್, ಮೈಸೂರಿನ ಡಿ.ಆರ್.ಎಂ ಮಧುಸೂದನ್, ಸಿಪಿಆರ್‌ಒ ಮಂಜುನಾಥ್ ಕಲಮಡಿ, ಬೀರೂರು ದೇವರಾಜ್,ಸುರೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ ಶೆಟ್ಟಿ ಮಾನಿಕ್ ಭಾಷ , ತಹಸೀಲ್ದಾರ್ ಪೂರ್ಣಿಮ ಸೇರಿದಂತೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.-- ಬಾಕ್ಸ್ -ಮೋದಿಗೆ ನೀಡುವ ಗೌರವದಷ್ಟೆ ಕೆಬಿಎಂ ಗೂ ಗೌರವಿಸುವೆಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್ ರವರ ನಡುವಿನ ಅವಿನಾಭಾವ ಸಂಬಂದ ಸುಮಾರು 45 ವರ್ಷಗಳ ಹಿಂದಿನದು. ಅನಾರೋಗ್ಯದ ಸಂದರ್ಭದಲ್ಲಿ ಅವರ ಆರೋಗ್ಯ ವಿಚಾರಿಸಲು ಅವರ ನಿವಾಸಕ್ಕೆ ಬಂದಾಗ ಈ ರೈಲ್ವೆ ಕೆಳಸೇತುವೆ ಬಗ್ಗೆ ಪ್ರಸ್ತಾವನೆ ಇಟ್ಟರು. ಆಗ ನನಗೆ ಇಂತಹ ಕೆಲಸ ಮಾಡಲು ಸಿಕ್ಕ ಸುದಿನ ಎಂದು ತಿಳಿದು ಅಂದೇ ಕಾಮಗಾರಿಗೆ ಅಂಕಿತ ಹಾಕಿದೆ. ರಾಜಕಾರಣದಲ್ಲಿ ನನಗೆ ಗುರುವಿನ ಸಮಾನರಾದ ಅವರಿಗೆ ಪ್ರಧಾನಿ ಮೋದಿಜಿಗೆ ನೀಡುವಷ್ಟೇ ಗೌರವವನ್ನು ಕೆ.ಬಿ.ಮಲ್ಲಿಕಾರ್ಜುನ್ ಅವರಿಗೆ ನೀಡುವೆ. ದೇವರು ಅಂತಹವರಿಗೆ ಇನ್ನಷ್ಟು ಆರೋಗ್ಯ ನೀಡಿದರೆ ಬೀರೂರು ಅಭಿವೃದ್ಧಿಯಾಗಲಿದೆ ಎಂದರು.31 ಬೀರೂರು 1ಬೀರೂರಿನ ಸಂತೆಕಟ್ಟೆ ಮೇಲ್ಭಾಗದಲ್ಲಿನ ₹5.14ಕೋಟಿ ವೆಚ್ಚದಲ್ಲಿ ನಿರ್ಮಣವಾಗುತ್ತಿರುವ ರೈಲ್ವೆ ಕೆಳ ಸೇತುವೆ ಕಾಮಾಗಾರಿಗೆ ನೈರುತ್ಯ ರೈಲ್ವೆ ಹಾಗೂ ಜಲಶಕ್ತಿ ಸಚಿವ ವಿ.ಸೋಮಣ್ಣ ಭೂಮಿ ಪೂಜೆ ನೆರವೇರಿಸಿದರು. ಶಾಸಕ ಕೆ.ಎಸ್.ಆನಂದ್, ಮಾಜಿ ಶಾಸಕ ಬೆಳ್ಳಿಪ್ರಕಾಶ್, ಬೀರೂರು ದೇವರಾಜ್ ಸೇರಿದಂತೆ ಮತ್ತಿತರಿದ್ದರು.