ಸಂತ್ರಸ್ತರ ವಿಚಾರದಲ್ಲಿ ರಾಜಕೀಯ ಬೇಡ: ಮಲ್ಲಿಕಾರ್ಜುನ ಲೋಣಿ

| Published : Sep 16 2025, 01:00 AM IST

ಸಂತ್ರಸ್ತರ ವಿಚಾರದಲ್ಲಿ ರಾಜಕೀಯ ಬೇಡ: ಮಲ್ಲಿಕಾರ್ಜುನ ಲೋಣಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಸಿಂದಗಿ ಪಟ್ಟಣದಲ್ಲಿ ವಸತಿ ಕಳೆದುಕೊಂಡು ಬೀದಿಗೆ ಬಿದ್ದಿರುವ 84 ಕುಟುಂಬಗಳಿಗೆ ಆಶ್ರಯ ಒದಗಿಸಲು ಶಾಸಕ ಅಶೋಕ ಮನಗೂಳಿ ಹೋರಾಟ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ನಿರಾಶ್ರಿತರಿಗೆ ಬಿಜೆಪಿಯವರು ತಪ್ಪು ಮಾಹಿತಿ ನೀಡಿ ರಾಜಕೀಯ ಮಾಡಬಾರದು ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸಿಂದಗಿ ಪಟ್ಟಣದಲ್ಲಿ ವಸತಿ ಕಳೆದುಕೊಂಡು ಬೀದಿಗೆ ಬಿದ್ದಿರುವ 84 ಕುಟುಂಬಗಳಿಗೆ ಆಶ್ರಯ ಒದಗಿಸಲು ಶಾಸಕ ಅಶೋಕ ಮನಗೂಳಿ ಹೋರಾಟ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ನಿರಾಶ್ರಿತರಿಗೆ ಬಿಜೆಪಿಯವರು ತಪ್ಪು ಮಾಹಿತಿ ನೀಡಿ ರಾಜಕೀಯ ಮಾಡಬಾರದು ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹೇಳಿದರು.

ನೊಂದ‌ 84 ಕುಟುಂಬಗಳ ಜೊತೆಗೆ ನಮ್ಮ ಪಕ್ಷ, ಶಾಸಕರು, ಸರ್ಕಾರ ಯಾವಾಗಲೂ ಇರುತ್ತದೆ. ಆದರೆ ಬಿಜೆಪಿಯವರು ಇದನ್ನು ರಾಜಕೀಯವಾಗಿ ಬಳಸಿಕೊಂಡು ಸಂತ್ರಸ್ಥರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಯಾರೇ ಸಮಸ್ಯೆಗೆ ಈಡಾದಾಗ ರಾಜಕೀಯ ಬೆರೆಸದೆ ಅವರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಎಲ್ಲರೂ ಸೇರಿ ಮಾಡೋಣ ಎಂದರು.

ಈ ಹಿಂದೆ ಪುರಸಭೆ ಹಕ್ಕುಪತ್ರ ಕೊಟ್ಟ ಜಾಗದಲ್ಲಿ ಕಟುಂಬಗಳು ಕಟ್ಟಡ ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಆದರೆ, ಓರ್ವ ವ್ಯಕ್ತಿ ನ್ಯಾಯಾಲಯದ ಮೊರೆ ಹೋಗಿದ್ದರಿಂದ ನ್ಯಾಯಾಲಯ ಅವರ ಪರವಾಗಿ ತೀರ್ಪು ಕೊಟ್ಟಿದೆ. ಇದರಲ್ಲಿ ಶಾಸಕರ ಅಥವಾ ಸರ್ಕಾರದ ಕೈವಾಡ ಇಲ್ಲ. ಶಾಸಕ ಅಶೋಕ ಮನಗೂಳಿ ಅಲ್ಲಿನ ಸ್ಥಳೀಯ ಸಂಸ್ಥೆಯೊಂದಿಗೆ ಸಭೆ ನಡೆಸಿ, ಪಟ್ಟಣದಲ್ಲಿನ ಖಾಲಿ ನಿವೇಶನ ಅಥವಾ ವಿವಿಧ ವಸತಿ ಯೋಜನೆಗಳಲ್ಲಿ ನಿರಾಶ್ರಿತ 84 ಕುಟುಂಬಗಳಿಗೆ ನಿವೇಶನ ಕೊಡಿಸುವ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳುತ್ತಿದ್ದಾರೆ. ಜೊತೆಗೆ ದಿ.ಎಂ.ಸಿ.ಮನಗೂಳಿ ಫೌಂಡೇಷನ್ ಮೂಲಕ ಪ್ರತಿಯೊಬ್ಬರಿಗೆ ತಲಾ ₹ 25 ಸಾವಿರ ಸಹಾಯಧನ ನೀಡಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ, ಕೃಷ್ಣಾ, ವಸಂತ ಹೊನಮೊಡೆ, ಜಾಕೀರ ಮುಲ್ಲಾ ಉಪಸ್ಥಿತರಿದ್ದರು.