ಆನೆಗಳ ಬಳಿ ರೀಲ್ಸ್ ಮಾಡೋಕೆ ಅವಕಾಶ ಇಲ್ಲ: ಸಚಿವ ಈಶ್ವರ್ ಖಂಡ್ರೆ

| N/A | Published : Sep 30 2025, 12:00 AM IST / Updated: Sep 30 2025, 01:11 PM IST

Karnataka forest minister Eshwar Khandre
ಆನೆಗಳ ಬಳಿ ರೀಲ್ಸ್ ಮಾಡೋಕೆ ಅವಕಾಶ ಇಲ್ಲ: ಸಚಿವ ಈಶ್ವರ್ ಖಂಡ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ದಸರಾವನ್ನ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ದಸರಾ ವೇಳೆ ಜಂಬೂಸವಾರಿ ಆಕರ್ಷಣೆ. ಗಜಪಡೆಯ 14 ಆನೆಗಳು ಭಾಗಿಯಾಗುತ್ತವೆ. ಆನೆಗಳ ಪಳಗಿಸುವ ಕೆಲಸ ಮಾಡೋದು ಮಾವುತರು, ಕಾವಾಡಿಗರು. ಸ್ವಲ್ಪ ಹೊತ್ತು ಅವರ ಬಳಿ ಕಾಲ ಕಳೆಯಲು ಇಲ್ಲಿಗೆ ಬಂದಿದ್ದೇನೆ ಎಂದು ಅವರು ಹೇಳಿದರು.

 ಮೈಸೂರು :  ಆನೆಗಳ ಬಳಿ ರೀಲ್ಸ್ ಮಾಡೋಕೆ ಅವಕಾಶ ಇಲ್ಲ. ದಸರಾ ಆನೆಗಳು ಹಾಗೂ ಕಾಡಾನೆಗಳಿಗೂ ಇದು ಅನ್ವಯವಾಗುತ್ತದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನೆಗಳಿಗೆ ಕಾಟ ತೊಂದರೆ ಕೊಡುವ ಕೆಲಸ ಆಗಬಾರದು. ಸಾರ್ವಜನಿಕರು ಇಂತಹದರಿಂದ ದೂರ ಇರಬೇಕು. 

ಈಗಾಗಲೇ ಆನೆಗಳ ಬಳಿ ರೀಲ್ಸ್ ಮಾಡಿರುವವರ ಮೇಲೆ ಕ್ರಮ ಆಗಿದೆ ಎಂದರು. 

ದಸರಾವನ್ನ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ದಸರಾ ವೇಳೆ ಜಂಬೂಸವಾರಿ ಆಕರ್ಷಣೆ. ಗಜಪಡೆಯ 14 ಆನೆಗಳು ಭಾಗಿಯಾಗುತ್ತವೆ. ಆನೆಗಳ ಪಳಗಿಸುವ ಕೆಲಸ ಮಾಡೋದು ಮಾವುತರು, ಕಾವಾಡಿಗರು. ಸ್ವಲ್ಪ ಹೊತ್ತು ಅವರ ಬಳಿ ಕಾಲ ಕಳೆಯಲು ಇಲ್ಲಿಗೆ ಬಂದಿದ್ದೇನೆ ಎಂದು ಅವರು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಮಾನವ ಸಂಘರ್ಷಣೆಗಳು ಹೆಚ್ಚಾಗುತ್ತಿವೆ. ಆನೆಗಳನ್ನ ಪಳಗಿಸುವ ಶಕ್ತಿ ಸಾಮರ್ಥ್ಯ ಮಾವುತರು ಕಾವಾಡಿಗರಿಗೆ ರಕ್ತ ಗತವಾಗಿ ಬಂದಿದೆ. ಮಾವುತರು ಕಾವಾಡಿಗರ ಬೇಡಿಕೆ ಈಡೇರಿಸುವ ಭರವಸೆ ಕೊಟ್ಟಿದ್ದೇವೆ. ಅರ್ಜುನ 8 ಬಾರಿ ಚಿನ್ನದ ಅಂಬಾರಿ ಹೊತ್ತು ಎಲ್ಲಾ ಜನರ ಪ್ರೀತಿ ಗಳಿಸಿದ್ದಾನೆ. ಬಳ್ಳೆಯಲ್ಲಿ ಅರ್ಜುನ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಎಸಳೂರಿನಲ್ಲೂ ಅರ್ಜುನ ಸ್ಮಾರಕ ಮಾಡುತ್ತೇವೆ. ನಮ್ಮ ರಾಜ್ಯದಲ್ಲಿ 6395 ಆನೆಗಳಿ ಇವೆ. ಪುಂಡಾನೆಗಳನ್ನ ಸೆರೆ ಹಿಡಿಯಲು ಇತರೆ ರಾಜ್ಯದವರು ನಮ್ಮ ಬಳಿ ಬರ್ತಾರೆ ಎಂದರು.

Read more Articles on