ಯಾವ ಶಾಲೆಯನ್ನೂ ಬಂದ್ ಮಾಡಲ್ಲ- ಸಚಿವ ಮಧು ಬಂಗಾರಪ್ಪ

| Published : Nov 16 2025, 02:30 AM IST

ಯಾವ ಶಾಲೆಯನ್ನೂ ಬಂದ್ ಮಾಡಲ್ಲ- ಸಚಿವ ಮಧು ಬಂಗಾರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ನಾವು ಯಾವ ಸ್ಕೂಲ್‌ಗಳನ್ನೂ ಬಂದ್ ಮಾಡ್ತಿಲ್ಲ, ಯಾರೋ ತಲೆ ಹರಟೆಗಳು ಶಾಲೆ ಬಂದ್ ಮಾಡ್ತಾರೆ ಅಂತ ಹೇಳಿದ್ದಾರೆ. ರಾಜ್ಯದಲ್ಲಿ 6 ಸಾವಿರ ಕೆಪಿಎಸ್‌ಸಿ ಶಾಲೆಗಳನ್ನು ತೆರೆಯುತ್ತೇವೆ ಎಂದು ಹೇಳಿದ್ದು, ಆ ಪ್ರಕ್ರಿಯೆ ನಡೆಸಿದ್ದೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ರಾಣಿಬೆನ್ನೂರು: ನಾವು ಯಾವ ಸ್ಕೂಲ್‌ಗಳನ್ನೂ ಬಂದ್ ಮಾಡ್ತಿಲ್ಲ, ಯಾರೋ ತಲೆ ಹರಟೆಗಳು ಶಾಲೆ ಬಂದ್ ಮಾಡ್ತಾರೆ ಅಂತ ಹೇಳಿದ್ದಾರೆ. ರಾಜ್ಯದಲ್ಲಿ 6 ಸಾವಿರ ಕೆಪಿಎಸ್‌ಸಿ ಶಾಲೆಗಳನ್ನು ತೆರೆಯುತ್ತೇವೆ ಎಂದು ಹೇಳಿದ್ದು, ಆ ಪ್ರಕ್ರಿಯೆ ನಡೆಸಿದ್ದೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಜಿಲ್ಲೆಯ ರಾಣಿಬೆನ್ನೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಪಿಎಸ್‌ಸಿ ಶಾಲೆ ಓಳ್ಳೆಯದು, ಮಕ್ಕಳು ಒಂದೇ ಸ್ಕೂಲ್‌ನಲ್ಲಿ 14 ವರ್ಷ ಕಲಿಯುತ್ತಾರೆ. ಕೆಪಿಎಸ್‌ಸಿ ಶಾಲೆ ತೆರೆಯುವುದರಿಂದ ಸರ್ಕಾರಿ ಶಾಲೆ ಅಷ್ಟೆ ಅಲ್ಲ, ಬೇರೆ ಶಾಲೆಯ ವಿದ್ಯಾರ್ಥಿಗಳು ಬರುತ್ತಾರೆ. ಎಲ್‌ಕೆಜಿಯಿಂದ 12ನೇ ತರಗತಿ ವರೆಗೆ ಶಿಕ್ಷಣ ಕೊಡುತ್ತೇವೆ ಎಂದರು. ಬಿಹಾರ ಚುನಾವಣೆ ಫಲಿತಾಂಶ ಕುರಿತು ಪ್ರತಿಕ್ರಿಯಿಸಿ, ಬಿಹಾರ್ ಚುನಾವಣೆಯಲ್ಲಿ ವಿಭಿನ್ನ ತೀರ್ಮಾನ ಬಂದಿದೆ. ಇದನ್ನು ಬೇರೆ ಬೇರೆ ಆ್ಯಂಗಲ್‌ನಲ್ಲಿ ನೋಡಬೇಕು ಎಂದರು. ರಾಜ್ಯ ನಾಯಕತ್ವ ಬದಲಾವಣೆ ವಿಚಾರ, ಹೈಕಮಾಂಡ್ ನಾಯಕರು ನಮಗೆ ಬಾಯಿ ಮುಚ್ಚಿಕೊಂಡು ಇರಿ ಎಂದು ಹೇಳಿದ್ದು, ಅವರು ಹೇಳಿದ ಹಾಗೆ ನಡೆದುಕೊಂಡು ಹೋಗ್ತೀವಿ ಎಂದರು. ಮುಖ್ಯಮಂತ್ರಿಗಳು ನಮ್ಮ ಬೇಡಿಕೆಗೆ ತಕ್ಕಂತೆ ಅನುದಾನ ಕೊಟ್ಟಿದ್ದಾರೆ. ಕರ್ನಾಟಕಕ್ಕೆ ಬಿಹಾರ್ ಚುನಾವಣೆ ಪಟ್ಟ ಕಟ್ಟಲು ಆಗಲ್ಲ. ರಾಜ್ಯದಲ್ಲಿ ಬಿಜೆಪಿ ಸೋತರೆ ಮೋದಿಯವರು ಸೋತರು ಅನ್ನೋಕೆ ಆಗಲ್ಲ ಎಂದರು.