ವಿಜಯಪುರ: ಪೋಷಕರು, ಶಿಕ್ಷಕರೊಂದಿಗೆ ಕೈ ಜೋಡಿಸುವುದರ ಜೊತೆಗೆ, ಮಕ್ಕಳ ಉತ್ತಮ ಭವಿಷ್ಯ ರೂಪಿಸಲು ಸಹಕರಿಸಬೇಕು ಎಂದು ಶಾಲಾಭಿವೃಧ್ಧಿ ಸಮಿತಿ ಉಪಾಧ್ಯಕ್ಷ ಸೈಯದ್ ಎಕ್ಬಾಲ್ ಹೇಳಿದರು.

ವಿಜಯಪುರ: ಪೋಷಕರು, ಶಿಕ್ಷಕರೊಂದಿಗೆ ಕೈ ಜೋಡಿಸುವುದರ ಜೊತೆಗೆ, ಮಕ್ಕಳ ಉತ್ತಮ ಭವಿಷ್ಯ ರೂಪಿಸಲು ಸಹಕರಿಸಬೇಕು ಎಂದು ಶಾಲಾಭಿವೃಧ್ಧಿ ಸಮಿತಿ ಉಪಾಧ್ಯಕ್ಷ ಸೈಯದ್ ಎಕ್ಬಾಲ್ ಹೇಳಿದರು.

ವಿಜಯಪುರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲೆ) ಆವರಣದಲ್ಲಿ ಆಯೋಜಿಸಿದ್ದ ಪೋಷಕರ ಹಾಗೂ ಶಿಕ್ಷಕರ ಮಹಾಸಭೆಯಲ್ಲಿ ಮಾತನಾಡಿದ ಅವರು, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದಷ್ಟೆ, ಅಲ್ಲದೆ,ಅವರನ್ನು ಪ್ರಜ್ಞಾವಂತರನ್ನಾಗಿ ಮಾಡುವುದು ಕೂಡಾ ಪೋಷಕರ ಜವಾಬ್ದಾರಿಯಾಗಿದೆ. ಸರಕಾರವು ಕೊಡುವಂತಹ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳುವುದರ ಮೂಲಕ ಈ ಬಾರಿ ಉತ್ತಮ ಫಲಿತಾಂಶಕ್ಕಾಗಿ ಸಹಕಾರ ನೀಡಬೇಕು ಎಂದು ಹೇಳಿದರು.ಅಲ್ಪಸಂಖ್ಯಾತರು, ತಮ್ಮ ಮಕ್ಕಳ ಪ್ರೌಢಶಿಕ್ಷಣ ಮುಗಿದ ಕೂಡಲೇ ಮುಂದಿನ ವ್ಯಾಸಂಗಕ್ಕೆ ಅವರಿಗೆ ಅವಕಾಶ ಮಾಡಿಕೊಡಬೇಕು. ದುಡಿಮೆಯ ಕಡೆಗೆ ಅವರನ್ನು ಕಳುಹಿಸಬೇಡಿ, ಬಹಳಷ್ಟು ಮಂದಿ ಪೋಷಕರು, ಗ್ಯಾರೇಜ್ ಗಳಿಗೆ, ಪಂಕ್ಚರ್ ಅಂಗಡಿಗಳಲ್ಲಿ ಕೆಲಸಕ್ಕೆ ನೇಮಕ ಮಾಡುತ್ತಾರೆ ಇದು ತಪ್ಪಾಗುತ್ತದೆ ಎಂದು ಹೇಳಿದರು.

ಉಪಪ್ರಾಂಶುಪಾಲರಾದ ಕೋಮಲ ಮಾತನಾಡಿ, ಸರಕಾರದ ನಿರ್ದೇಶನದಂತೆ, ಈ ಬಾರಿ ವಿದ್ಯಾರ್ಥಿಗಳಿಂದ ಉತ್ತಮ ಫಲಿತಾಂಶ ಹೊರತರುವುದಕ್ಕಾಗಿ ನಾವೆಲ್ಲರೂ ಪ್ರಯತ್ನಿಸುತ್ತಿದ್ದೇವೆ. ನಮ್ಮ ಪ್ರಯತ್ನಗಳಿಗೆ ಪೋಷಕರು ಸಾಥ್ ನೀಡಬೇಕು. ಶಿಕ್ಷಕರ ಶ್ರಮಕ್ಕೆ ತಕ್ಕ ಫಲಸಿಗಬೇಕಾದರೆ, ವಿದ್ಯಾರ್ಥಿಗಳೂ ಕೂಡಾ ಹೆಚ್ಚಿನ ಪರಿಶ್ರಮ ಹಾಕಬೇಕು ಎಂದು ಹೇಳಿದರು.

ಅಪಪ್ರಚಾರ ಸರಿಯಲ್ಲ: ೮೦ ವರ್ಷಗಳ ಇತಿಹಾಸವಿರುವ ಸರಕಾರಿ ಪದವಿ ಪೂರ್ವ ಕಾಲೇಜಿನ ಕುರಿತು, ಇಲ್ಲಿನ ವಿದ್ಯಾರ್ಥಿಗಳ ಕುರಿತು, ಕೆಲವರು, ಅಪಪ್ರಚಾರ ಮಾಡುತ್ತಿದ್ದಾರೆ. ಶಾಲೆಯಲ್ಲೆ ಶಿಕ್ಷಕರ ಕೊರತೆಯಿದೆ. ಯಾರೂ ದಾಖಲಾಗಬೇಡಿ ಎಂದು ಅಪಪ್ರಚಾರ ಮಾಡ್ತಿದ್ದಾರೆ. ಲಕ್ಷಾಂತರ ಮಂದಿಗೆ ವಿದ್ಯಾದಾನ ಮಾಡಿರುವ ಈ ಶಾಲೆಯ ಬಗ್ಗೆ ಅಪಪ್ರಚಾರ ಮಾಡುವುದು ತರವಲ್ಲ. ಪೋಷಕರು, ಈ ಶಾಲೆಯ ಮೇಲೆ ನಂಬಿಕೆ ಇಟ್ಟು, ನಿಮ್ಮ ಮಕ್ಕಳನ್ನು ದಾಖಲು ಮಾಡಿಸಿ, ನಿಮ್ಮ ನಂಬಿಕೆಗಿಂತಲೂ ಹೆಚ್ಚು ಪ್ರಬುದ್ಧರನ್ನಾಗಿ ಮಾಡುತ್ತೇವೆ. ಶಾಲೆಯಲ್ಲಿ ಶಿಕ್ಷಕರ ಕೊರತೆಯಿಲ್ಲ ಎಂದು ಶಿಕ್ಷಕ ಬಿ.ಎಸ್.ನಾರಾಯಣ್ ಮನವಿ ಮಾಡಿದರು.

ಸಭೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಚಿಕ್ಕನಹಳ್ಳಿ ವೆಂಕಟೇಶ್, ರಘು, ಆರ್.ಎಂ.ಸಿಟಿ.ಮಂಜುನಾಥ್, ಸುರೇಶ್, ಚಾಂದ್ ಪಾಷ, ರುದ್ರಮೂರ್ತಿ.ಎನ್, ಪದ್ಮಾವತಿ.ಎನ್, ನಂಜುಂಡಪ್ಪ ಹಾಗೂ ಪೋಷಕರು ಹಾಜರಿದ್ದರು.

(ಫೋಟೋ ಕ್ಯಾಫ್ಷನ್‌)

ವಿಜಯಪುರ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಪೋಷಕರ-ಶಿಕ್ಷಕರ ಮಹಾಸಭೆಯಲ್ಲಿ ಹಿರಿಯ ಪೋಷಕರನ್ನು ಸನ್ಮಾನಿಸಲಾಯಿತು.