ಸಾರಾಂಶ
ತಾಲೂಕಿನ ಒಂಬತ್ತುಗುಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯೂ ಎರಡು ಬಣಗಳ ನಡುವೆ ಭಾರೀ ಜಿದ್ದಾಜಿದ್ದಿಯಿಂದ ನಡೆದು ಅಂತಿಮವಾಗಿ ಕಾಂಗ್ರೆಸ್ ಬೆಂಬಲಿತರ ನಿರ್ದೇಶಕರು ಜಯಶೀಲರಾಗಿದ್ದಾರೆ.
ಬಂಗಾರಪೇಟೆ: ತಾಲೂಕಿನ ಒಂಬತ್ತುಗುಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯೂ ಎರಡು ಬಣಗಳ ನಡುವೆ ಭಾರೀ ಜಿದ್ದಾಜಿದ್ದಿಯಿಂದ ನಡೆದು ಅಂತಿಮವಾಗಿ ಕಾಂಗ್ರೆಸ್ ಬೆಂಬಲಿತರ ನಿರ್ದೇಶಕರು ಜಯಶೀಲರಾಗಿದ್ದಾರೆ.
ಹಲವು ದಶಕಗಳಿಂದಲೂ ಹಾಲು ಉತ್ಪಾದಕರ ಸಂಘ ಕಾಂಗ್ರೆಸ್ ಬೆಂಬಲಿತರ ವಶದಲ್ಲೇ ಇತ್ತು, ರಾಮರೆಡ್ಡಿ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ೧೨ರಲ್ಲಿ ೮ ನಿರ್ದೇಶಕರು ಆಯ್ಕೆಯಾಗಿದ್ದರೆ, ಬಿಜೆಪಿ ಬೆಂಬಲಿತರು ಕೇವಲ ಮೂವರು ಮಾತ್ರ ಆಯ್ಕೆಯಾದರು. ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಅಭ್ಯರ್ಥಿ ಯಾರೂ ಇಲ್ಲದ ಕಾರಣ ಚುನಾವಣೆ ನಡೆಯಲಿಲ್ಲ. ರಾಮರೆಡ್ಡಿ, ಶಿವರಾಜ,ಎಸ್.. ಕೇಶವರೆಡ್ಡಿ,ಕೆ.. ದೇವರಾಜರೆಡ್ಡಿ, ಎಚ್.ರಾಮರೆಡ್ಡಿ, ವಿ.ಎಮ್.ಚಿನ್ನಾರೆಡ್ಡಿ, ನೇತ್ರಾವತಿ, ಪಲ್ಲು ನಾರಾಯಣ, ಆರ್.ವೆಂಕಟೇಶರೆಡ್ಡಿ, ಸರಸ್ವತಮ್ಮ ಮತ್ತು ಸೊಣ್ಣಮ್ಮ ಚುನಾವಣೆಯಲ್ಲಿ ಜಯಗಳಿಸಿರುವ ನೂತನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.ಚುನಾವಣೆಯಲ್ಲಿ ಜಯಗಳಿಸಿ ಮಾತನಾಡಿದ ಸಂಘದ ಹಾಲಿ ಅಧ್ಯಕ್ಷ ರಾಮರೆಡ್ಡಿ, ಕಳೆದ 15 ವರ್ಷಗಳಿಂದ ಸಂಘವು ಹಾಲು ಉತ್ಪಾದಕರ ಅಭಿವೃದ್ಧಿಗೆ ಶ್ರಮಿಸಿದ್ದರಿಂದ ಸಂಘದ ಮತದಾರರು ನಾಲ್ಕನೇ ಬಾರಿಯೂ ಸಂಘದ ಆಡಳಿತ ಚುಕ್ಕಾಣಿಯನ್ನು ಕಾಂಗ್ರೆಸ್ ವಶಕ್ಕೆ ನೀಡಿದ್ದಾರೆ. ಶಾಸಕ ಎಸ್.ಎನ್.ನಾರಾಯಣಸ್ವಾಮಿ ನೇತೃತ್ವದಲ್ಲಿ ಸಂಘ ಪ್ರಗತಿ ಕಂಡಿದೆ, ಮುಂದೆಯೂ ಸಹ ಅವರ ಮಾರ್ಗದರ್ಶನದಲ್ಲಿ ಸಂಘವನ್ನು ಲಾಭದಲ್ಲಿ ನಡೆಸಲು ಮುಂದಾಗುವೆ ಎಂದು ಭರವಸೆ ನೀಡಿದರು.
ಚುನಾವಣಾಧಿಕಾರಿಯಾಗಿ ಬಾಲಕೃಷ್ಣ ಕಾರ್ಯನಿರ್ವಹಿಸಿದರು, ಸಹಾಯಕರಾಗಿ ಪ್ರಕಾಶ್, ಸಂಘದ ಕಾರ್ಯದರ್ಶಿ ವೆಂಕಟೇಶರೆಡ್ಡಿ ಇದ್ದರು.