ಸಾರಾಂಶ
ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಸಲ್ಲಿಕೆಯಾಗಿದ್ದ ನಾಮಪತ್ರಗಳ ಪರಿಶೀಲನೆಯಲ್ಲಿ 33 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿದ್ದು, ಸ್ವೀಕೃತವಾದರೆ, 7 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿವೆ.
- ಕ್ರಮಬದ್ಧವಿಲ್ಲದ 7 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ: ಡಾ.ವೆಂಕಟೇಶ
- - - ಕನ್ನಡಪ್ರಭ ವಾರ್ತೆ, ದಾವಣಗೆರೆ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಸಲ್ಲಿಕೆಯಾಗಿದ್ದ ನಾಮಪತ್ರಗಳ ಪರಿಶೀಲನೆಯಲ್ಲಿ 33 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿದ್ದು, ಸ್ವೀಕೃತವಾದರೆ, 7 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿವೆ.ನಗರದ ಜಿಲ್ಲಾಡಳಿತ ಭವನದಲ್ಲಿ ಚುನಾವಣಾ ವೀಕ್ಷಕರಾದ ಎಂ.ಲಶ್ಮಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹಾಗೂ ಅಭ್ಯರ್ಥಿಗಳು, ಏಜೆಂಟರ ಸಮ್ಮುಖದಲ್ಲಿ ಶನಿವಾರ ನಡೆದ ನಾಮಪತ್ರಗಳ ಪರಿಶೀಲನೆ ಕಾರ್ಯದಲ್ಲಿ ಸಲ್ಲಿಕೆಯಾದ ನಾಮಪತ್ರಗಳ ಪೈಕಿ 33 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿವೆ. 7 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧ ಆಗಿಲ್ಲದ್ದರಿಂದ ತಿರಸ್ಕೃತಗೊಂಡಂತಾಗಿದೆ.
ನಾಮಪತ್ರ ಸಲ್ಲಿಸಲು ಏ.19 ಕೊನೆಯ ದಿನವಾಗಿತ್ತು. ನಿನ್ನೆ ಶುಕ್ರವಾರದವರೆಗೆ ಒಟ್ಟು 40 ಅಭ್ಯರ್ಥಿಗಳಿಂದ 54 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಏ.20ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಿತು. 40 ಅಭ್ಯರ್ಥಿಗಳು ಸಲ್ಲಿಸಿದ್ದ 54 ನಾಮಪತ್ರಗಳಲ್ಲಿ 42 ನಾಮಪತ್ರ ಕ್ರಮಬದ್ಧ ಇವೆ. 12 ನಾಮಪತ್ರ ತಿರಸ್ಕೃತವಾಗಿವೆ. ನಾಮಪತ್ರ ಸಲ್ಲಿಸಿದ್ದ 40 ಅಭ್ಯರ್ಥಿಗಳಲ್ಲಿ 7 ಅಭ್ಯರ್ಥಿಗಳ ನಾಮಪತ್ರ ಸಂಪೂರ್ಣ ತಿರಸ್ಕೃತಗೊಂಡವು.- - -
ಬಾಕ್ಸ್-1 ನಾಮಪತ್ರ ತಿರಸ್ಕೃತವಾದ ಅಭ್ಯರ್ಥಿಗಳು ಕೆಆರ್‌ಎಸ್ ಪಕ್ಷದ ಜಿ.ಪಿ.ರಾಘವೇಂದ್ರ, ಪಕ್ಷೇತರ ಅಭ್ಯರ್ಥಿಗಳಾದ ಸುಭಾನ್ ಖಾನ್, ಸಿ.ಎಂ. ಮಂಜುನಾಥ ಸ್ವಾಮಿ, ಎಂ.ರಂಗನಾಥ ಸ್ವಾಮಿ, ಬಿ.ಆರ್.ಪ್ರಸನ್ನ, ಕರನಂ ಕೊಟ್ರಪ್ಪ, ಬಿಜೆಪಿ ಪರ್ಯಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಂಸದ ಜಿ.ಎಂ. ಸಿದ್ದೇಶ್ವರ್ ಅವರ ನಾಮಪತ್ರಗಳು ತಿರಸ್ಕೃತಗೊಂಡಿವೆ.- - - ಬಾಕ್ಸ್-2 ನಾಮಪತ್ರ ಸ್ವೀಕೃತವಾದ ಅಭ್ಯರ್ಥಿಗಳು
ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷದ ಎ.ಕೆ.ತಿಪ್ಪೇಸ್ವಾಮಿ, ಭಾರತೀಯ ಕಾಂಗ್ರೆಸ್ ಪಕ್ಷದ ಡಾ.ಪ್ರಭಾ ಮಲ್ಲಿಕಾರ್ಜುನ, ಉತ್ತಮ ಪ್ರಜಾಕೀಯ ಪಕ್ಷದ ಈಶ್ವರ, ಭಾರತೀಯ ಜನತಾ ಪಕ್ಷದ ಜಿ.ಎಸ್.ಗಾಯತ್ರಿ, ಬಿ.ಎಸ್.ಪಿ.ಯಿಂದ ಹನುಮಂತಪ್ಪ, ಸಮಾಜ ವಿಕಾಸ ಕ್ರಾಂತಿಯ ಕೆ.ಎಚ್. ರುದ್ರೇಶ, ರಾಣಿ ಚೆನ್ನಮ್ಮ ಪಾರ್ಟಿ ಎಸ್.ವೀರೇಶ, ಕಂಟ್ರಿ ಸಿಟಿಜನ್ ಪಕ್ಷದ ಎ.ಟಿ.ದಾದಾ ಖಲಂದರ್, ನವಭಾರತ ಸೇನಾದಿಂದ ಎಂ.ಜಿ.ಶ್ರೀಕಾಂತ, ಜನಹಿತ ಪಕ್ಷದ ಎಚ್.ಎಸ್.ದೊಡ್ಡೇಶ, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದ ಎಂ.ಸಿ.ಶ್ರೀನಿವಾಸ, ಕೆ.ಆರ್.ಎಸ್.ನಿಂದ ಕೆ.ಎಸ್.ವೀರಭದ್ರಪ್ಪ ನಾಮಪತ್ರ ಸ್ವೀಕೃತವಾಗಿವೆ. ಅದೇ ರೀತಿ ಪಕ್ಷೇತರರಾದ ಜಿ.ಬಿ.ವಿನಯಕುಮಾರ, ಟಿ.ಜಬೀನ್ ತಾಜ್, ಕೆ.ಜಿ.ಅಜ್ಜಪ್ಪ, ಎ.ಕೆ.ಗಣೇಶ, ಬರ್ಕತ್ ಅಲಿ, ಎಂ.ಮೊಹಮದ್ ಹಯಾತ್, ಎಂ.ಟಿ.ಚಂದ್ರಣ್ಣ, ಕೆ.ಸೈಯದ್ ಜಬೀವುಲ್ಲಾ, ಬಿ.ರವಿನಾಯ್ಕ, ತಸ್ಲೀಮ್ ಬಾನು, ಎಚ್.ಪರ್ವೇಜ್, ರಶೀದ್ ಖಾನ್, ಎಸ್.ಸಲೀಂ, ಎ.ಕೆ.ಮಂಜುನಾಥ, ಬಿ.ಅಲ್ಲಾಭಕ್ಷಿ, ಅಬ್ದುಲ್ ನಜೀರ್ ಅಹ್ಮದ್, ಎಸ್.ಪೆದ್ದಪ್ಪ, ಇರ್ಫಾನ್ ಮುಲ್ಲಾ, ಮೆಹಬೂಬ್ ಬಾಷಾ, ಜಿ.ಎಂ. ಬರ್ಕತ್ ಅಲಿ ಬಾಷಾ, ಜಿ.ಎಂ. ಗಾಯತ್ರಿ ಅವರ ನಾಮಪತ್ರಗಳು ಕ್ರಮಬದ್ಧವಾಗಿದ್ದು, ಸ್ವೀಕೃತವಾಗಿವೆ.- - - -20ಕೆಡಿವಿಜಿ5:
ದಾವಣಗೆರೆ ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ಲೋಕಸಭಾ ಕ್ಷೇತ್ರದ ನಾಮಪತ್ರಗಳ ಪರಿಶೀಲನಾ ಕಾರ್ಯ ಚುನಾವಣೆ ವೀಕ್ಷಕಿ ಎಂ.ಲಶ್ಮಿ, ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ ಹಾಗೂ ಅಭ್ಯರ್ಥಿಗಳು, ಏಜೆಂಟರ ಸಮಕ್ಷಮ ನಡೆಯಿತು.