ಸಾರಾಂಶ
ಕುಷ್ಟಗಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ತಮ್ಮ ಅಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ ಹೋರಾಟಕ್ಕೆ ಬಲ ನೀಡಿದ್ದರಿಂದ ಬ್ರಿಟಿಷರ ಕಪಿಮುಷ್ಟಿಯಿಂದ ಭಾರತ ಮುಕ್ತವಾಯಿತು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ನಡೆದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರಶಾಸ್ತ್ರೀ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಶಾಂತಿಯಿಂದ ವಿಶ್ವ ಗೆಲ್ಲಬಹುದು ಎನ್ನುವುದಕ್ಕೆ ಗಾಂಧೀಜಿ ಜೀವನ ಪಾಠವಿದ್ದಂತೆ ಗಾಂಧಿಜೀ ಶ್ರಮ ಜೀವನ, ಗ್ರಾಮ ಸ್ವರಾಜ್ಯ, ಸ್ವಚ್ಛತೆ, ರಾಮ ರಾಜ್ಯದ ಪರಿಕಲ್ಪನೆ ಸರ್ವಕಾಲಿಕ ತತ್ವಾದರ್ಶಗಳಾಗಿದ್ದು, ಅವರ ಹಾದಿಯಲ್ಲಿ ಮುನ್ನಡೆಯಬೇಕು, ಹೀಗಾಗಿ ನಾವು ನಮ್ಮ ಬದುಕಿನಲ್ಲಿ ಅಹಿಂಸಾ ಧರ್ಮ ಅಳವಡಿಸಿಕೊಂಡು ಸಮಾನತೆ ಹಾಗೂ ಸೌಹಾರ್ದ ಸಮಾಜ ನಿರ್ಮಾಣಕ್ಕೆ ಮುಂದಾಗೋಣ ಎಂದರು.
ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ ದೇಶ ಕಂಡ ಅಪರೂಪದ ಧೀಮಂತ ನಾಯಕ, ಸ್ವಾತಂತ್ರ್ಯದ ಬಳಿಕ ಬಲಿಷ್ಠ ಹಾಗೂ ಸದೃಢ ಭಾರತ ನಿರ್ಮಾಣಕ್ಕೆ ಅಲ್ಪಾವಧಿಯಲ್ಲಿಯೇ ಶ್ರಮಿಸಿದ ಮಾಜಿ ಪ್ರಧಾನಿ ಶಾಸ್ತ್ರೀಜಿ ಕೊಡುಗೆ ಸ್ಮರಣೀಯ ಎಂದರು.ಸ್ವಚ್ಛತೆ ಕಾರ್ಯ:
ಪ್ರಧಾನಮಂತ್ರಿ ನರೇಂದ್ರ ಮೋದಿ ಆದೇಶದಂತೆ ಸೇವಾ ಪಾಕ್ಷಿಕ ಅಡಿಯಲ್ಲಿ ಪಟ್ಟಣದ ತಾಲೂಕು ಪಶು ಆಸ್ಪತ್ರೆಯ ಆವರಣ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ನಂತರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಆಶಯದಂತೆ ಖಾದಿ ಭಂಡಾರಕ್ಕೆ ತೆರಳಿ ಖಾದಿ ವಸ್ತ್ರ ಖರೀದಿಸಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಬದಾಮಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೆ.ಮಹೇಶ್, ಯುವ ಮೋರ್ಚಾ ಅಧ್ಯಕ್ಷ ಉಮೇಶ ಯಾದವ, ಪುರಸಭೆ ಅಧ್ಯಕ್ಷ ಮಹಾಂತೇಶ ಕಲಬಾವಿ, ಕೆ.ಎಸ್.ಹನುಮಂತಪ್ಪ, ಫಕೀರಪ್ಪ ಚಳಗೇರಿ, ಜಯತೀರ್ಥ ಸೌದಿ, ಶಶಿಧರ ಕವಲಿ, ದೇವಪ್ಪ ಕಟ್ಟಿಹೊಲ, ಕಲ್ಲೇಶ ತಾಳದ, ಶಂಕರಗೌಡ, ಶಿವನಗೌಡ, ದೊಡ್ಡಬಸವ ಸುಂಕದ, ಬಾಲಪ್ಪ ಚಾಕ್ರ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೈಲಜಾ ಬಾಗಲಿ, ಮಯೂರಿ ಸೇರಿದಂತೆ ಹಲವು ಗಣ್ಯರು,ಕಾರ್ಯಕರ್ತರು ಉಪಸ್ಥಿತರಿದ್ದರು.