ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ ಬ್ರಹ್ಮಾವರ ಸಮೀಪದ ಕುಂಜಾಲಿನ ಭಾಗದಲ್ಲಿ ಕಿಡಿಗೇಡಿಗಳು ಗೋವಿನ ಕಳೇಬರಹಗಳನ್ನು ರಸ್ತೆಗೆ ಎಸೆದಿರುವ ಘಟನೆ ಶನಿವಾರ ರಾತ್ರಿ ನಡೆದಿದ್ದು ಇದು ಖಂಡನೀಯ. ದುಷ್ಕರ್ಮಿಗಳು ಈ ಭಾಗದ ಜನರಲ್ಲಿ ಇರುವ ಅನ್ಯೋನ್ಯತೆ, ಸಹೋದರತೆಯನ್ನು ಮತ್ತು ಶಾಂತಿಯನ್ನು ಕದಡಲು ಈ ರೀತಿ ಮಾಡುತ್ತಿರುವ ಬಗ್ಗೆ ಅನುಮಾನ ಮೂಡುತ್ತಿದ್ದು, ಇಂತಹ ಘಟನೆ ಮರುಕಳಿಸದೆ ಇರುವಂತೆ ಮಾಡಲು, ಈ ದುಷ್ಕರ್ಮಿಗಳನ್ನು ತಕ್ಷಣ ಬಂದಿಸುವಂತೆ ಹಾಗೂ ಮುಖ್ಯ ರಸ್ತೆಗಳ ಭಾಗದಲ್ಲಿ ಸಿಸಿ ಕ್ಯಾಮರ ಆಳವಡಿಸುವಂತೆ ಸಮಸ್ತ ಕುಂಜಾಲಿನ ಮುಸ್ಲಿಂ ಭಾಂದವರ ಪರವಾಗಿ ನೂರ್ ಜುಮ್ಮಾ ಮಸೀದಿ ಸಮಿತಿ ವತಿಯಿಂದ ಬ್ರಹ್ಮಾವರ ಠಾಣಾಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.ಈ ಘಟನೆಯ ಬಗ್ಗೆ ಯಾವುದೇ ರಾಜಕೀಯ, ಯಾವುದೇ ಸಂಘಟನೆಗಳ ಒತ್ತಡಕ್ಕೆ ಮಣಿಯದೆ ನೈಜ ಆರೋಪಿಗಳನ್ನು ಶಿಘ್ರವಾಗಿ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಸ್ಥಳೀಯ ಜಮಾಆತಿನ ಅಧ್ಯಕ್ಷ ಮೊಹಮ್ಮದ್ ಶಬೀರ್, ಉಪಾಧ್ಯಕ್ಷ ಸುಜಿದ್ ಖಾನ್, ಖಜಾಂಚಿ ಹಬೀಬ್ ಉಡುಪಿ, ಹಾತಿಂ ಸಾಹೇಬ್ ಕುಂಜಾಲ್ ಹಾಗೂ ಸ್ಥಳೀಯ ಮುಸ್ಲಿಂ ಭಾಂದವರು ಉಪಸ್ಥಿತರಿದ್ದು ಬ್ರಹ್ಮವಾರ ಠಾಣಾಧಿಕಾರಿಗೆ ಮನವಿ ನೀಡಿದರು.