ಕನ್ನಡ ಚಿತ್ರರಂಗದ ಬೆಳವಣಿಗೆಯಲ್ಲಿ ಉತ್ತರ ಕರ್ನಾಟಕ ಕೊಡುಗೆ ಅಪಾರ. ಕನ್ನಡ ಚಿತ್ರರಂಗ ಎಲ್ಲ ಕಲಾವಿದರ ಚಿತ್ರಗಳನ್ನು ಹೃದಯದಿಂದ ಪ್ರೀತಿಸಿ ಪ್ರೋತ್ಸಾಹಿಸಿದ್ದಾರೆ ಎಂದ ನಟ ನೀನಾಸಂ ಸತೀಶ.
ಹುಬ್ಬಳ್ಳಿ:
ಕನ್ನಡ ಚಿತ್ರರಂಗದ ಬೆಳವಣಿಗೆಯಲ್ಲಿ ಉತ್ತರ ಕರ್ನಾಟಕ ಕೊಡುಗೆ ಅಪಾರ. ಕನ್ನಡ ಚಿತ್ರರಂಗ ಎಲ್ಲ ಕಲಾವಿದರ ಚಿತ್ರಗಳನ್ನು ಹೃದಯದಿಂದ ಪ್ರೀತಿಸಿ ಪ್ರೋತ್ಸಾಹಿಸಿದ್ದಾರೆ. ಅದರಂತೆ ಆ. 7ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳುವ ಅಯೋಗ್ಯ-2 ಚಿತ್ರವನ್ನು ಹಾರೈಸಿ ಪ್ರೋತ್ಸಾಹಿಸುವಂತೆ ನಟ ನಿನಾಸಂ ಸತೀಶ ಮನವಿ ಮಾಡಿದರು.ಇಲ್ಲಿಯ ಸವಾಯಿ ಗಂಧರ್ವ ಸಭಾಭವನದಲ್ಲಿ ಭಾನುವಾರ ಸಂಜೆ ನಡೆದ ಅಯೋಗ್ಯ-2 ಚಿತ್ರದ 3ನೇ ಹಾಡು ಬಿಡುಗಡೆ ಸಮಾರಂಭದ ನಂತರ ಮಾತನಾಡಿದರು. ಚಿತ್ರಕ್ಕೆ ಸಂಗೀತ ನೀಡಿದ ಚೇತನಕುಮಾರ ಮಾತನಾಡಿದರು. ಇದೇ ವೇಳೆ ನಟ ಸತೀಶ ಅವರು ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಏನಮ್ಮಿ ಏನಮ್ಮಿ, ಯಾಕಮ್ಮಿ, 10ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದರು. ಅಲ್ಲದೇ, ಅಯೋಗ್ಯ-2 ಚಿತ್ರ ಪ್ಯಾತೋ ಸಾಂಗ್‌ಗೆ ಹೆಜ್ಜೆ ಹಾಕುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಅದರಂತೆ ಚಿತ್ರದ ಹಾಸ್ಯ ನಟರಾದ ಗಿರೀಶ ಶಿವಣ್ಣ, ಕೆ.ಆರ್. ಪೇಟೆ ಶಿವರಾಜ ಅವರು ತಮ್ಮ ಹಾಸ್ಯ ಚಟಾಕೆಯೊಂದಿಗೆ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು.
ಇದಕ್ಕೂ ಪೂರ್ವದಲ್ಲಿ ನಗರದ ಸಿದ್ಧಾರೂಢರ ಮಠಕ್ಕೆ ಚಿತ್ರತಂಡ ಭೇಟಿ ನೀಡಿ ಉಭಯ ಆರೂಢರ ಗದ್ದುಗೆ ದರ್ಶನ ಪಡೆದರು. ಬಳಿಕ ನಗರದಲ್ಲಿ ಅದ್ಧೂರಿ ಮೆರವಣಿಗೆ ಹಮ್ಮಿಕೊಳ್ಳಲಾಯಿತು. ಚಿತ್ರದ ನಿರ್ಮಾಪಕ ಮುನೇಗೌಡ, ನಿರ್ದೇಶಕ ಎಸ್. ಮಹೇಶ, ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ಸೇರಿದಂತೆ ಹಲವರಿದ್ದರು.