ಯಾವ ಸರ್ಕಾರವು ಒಳ ಮೀಸಲಾತಿಗೆ ಹೊಸ ತಿದ್ದುಪಡಿ, ಹೊಸ ಕಾನೂನು ಜಾರಿಮಾಡಲಿಲ್ಲ ಎಂದು ಮಾಜಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಆರೋಪಿಸಿದರು.
ಇದುವರೆಗೂ ಯಾವುದೇ ಸರ್ಕಾರದಿಂದ ಅಂಬೇಡ್ಕರ್ ಸಂವಿಧಾನ ಜಾರಿಯಾಗಿಲ್ಲ: ಮಾಜಿ ಕೇಂದ್ರ ಸಚಿವ
---ಕನ್ನಡಪ್ರಭ ವಾರ್ತೆ ಚಾಮರಾಜನಗರ
ಯಾವ ಸರ್ಕಾರವು ಒಳ ಮೀಸಲಾತಿಗೆ ಹೊಸ ತಿದ್ದುಪಡಿ, ಹೊಸ ಕಾನೂನು ಜಾರಿಮಾಡಲಿಲ್ಲ ಎಂದು ಮಾಜಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಆರೋಪಿಸಿದರು.ಜಿಲ್ಲಾ ಡಾ. ಬಾಬು ಜಗಜೀವನ್ ರಾಮ್ ಸಂಘಟನೆಗಳ ಒಕ್ಕೂಟದಿಂದ ನಡೆದ 2026-27ನೇ ಸಾಲಿನ ಮಾದಿಗ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದಲ್ಲಿ ಭಾಗವಹಿಸಿದರು.
ಅಂಬೇಡ್ಕರ್‌ರವರ ಸಂವಿಧಾನದಿಂದ ಇಡೀ ದೇಶದಲ್ಲಿ ಕ್ರಾಂತಿಯಾಗಿಬಿಟ್ಟಿದೆ. ಯಾವ ಕ್ರಾಂತಿಯನ್ನು ಈ ದೇಶದ ಯಾವ ಸರ್ಕಾರವು ಮಾಡಲಿಲ್ಲ. ಯಾವ ಸರ್ಕಾರವೂ ಅಂಬೇಡ್ಕರ್ ಅವರು ಕೊಟ್ಟಿದ್ದ ಸಂವಿಧಾನವನ್ನು ಜಾರಿ ಮಾಡಲಿಲ್ಲ. ಯಾವ ಸರ್ಕಾರವು ಒಳ ಮೀಸಲಾತಿಗೆ ಹೊಸ ತಿದ್ದುಪಡಿ, ಹೊಸ ಕಾನೂನು ಜಾರಿ ಮಾಡಲಿಲ್ಲ. ಈ ದೇಶದ ಸಂವಿಧಾನ ದೇಶದ ಯಾವುದೇ ಶೋಷಿತ ವ್ಯಕ್ತಿಗೆ, ಯಾವುದರಿಂದ ವಂಚಿತನಾದ ಅ ವಂಚಿತನನ್ನು ಮುಖ್ಯವಾಹಿತಿಗೆ ತರುವ ಜವಾಬ್ದಾರಿ ಇರುತ್ತದೆ ಎಂದರು.250 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ:
2026-27ನೇ ಸಾಲಿನ ಎಸ್ಎಸ್ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ, ಪ್ರಮಾಣ ಪತ್ರ, ನಗದು ಪುರಸ್ಕಾರ ನೀಡಿ ಒಕ್ಕೂಟದಿಂದ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಸರ್ಕಾರಿ ಎಸ್‌ಸಿ ನೌಕರರ ಸಂಘದ ರಾಜಾಧ್ಯಕ್ಷ ಮಂಜುನಾಥ ಓಣಿಕೇರಿ, ಬೆಂಗಳೂರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ರಾಜ್ಯಾಧ್ಯಕ್ಷ ಡಾ. ಗಿರೀಶ್ ಚಂದ್ರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಂ. ಮುನಿರಾಜು, ಉಪನ್ಯಾಸಕ ಎಲ್. ಮಧುಕರ್, ಎಂ. ಪ್ರಶಾಂತ್ ಕುಮಾರ್, ಮುಖ್ಯಶಿಕ್ಷಕ ಬಿ. ಶಿವನಂಜು, ನಿವೃತ್ತ ಪ್ರಾಂಶುಪಾಲ ಪ್ರೊ.ಎಚ್.ಎಸ್. ಲಿಂಗಣ್ಣ, ಎಲ್‌ಐಸಿ ನಿವೃತ್ತ ಆಡಳಿತಾಧಿಕಾರಿ ಎಸ್. ರಾಜಣ್ಣ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಲಿಂಗರಾಜು, ಕಾಗಲವಾಡಿ ಮಹಾದೇವಸ್ವಾಮಿ, ಮೈಸೂರು ಮುಡಾದ ಕಂದಾಯ ಅಧಿಕಾರಿ ಸಿದ್ದಾರ್ಥ, ಎಂ. ಚಂದ್ರಶೇಖರ್, ಮಣಿ ಚೆನ್ನಬಸವಯ್ಯ, ಮಹಾದೇವಸ್ವಾಮಿ, ಶಿವರಾಜು, ಸಿದ್ದಪ್ಪ, ಸಂಘದ ಗೌರವಾಧ್ಯಕ್ಷ ಬಸವನಪುರ ರಾಜಶೇಖರ, ಜಿಲ್ಲಾಧ್ಯಕ್ಷ ಎಚ್.ಎಚ್. ನಾಗರಾಜು, ಗೌರವ ಸಲಹೆಗಾರ ಅರಕಲವಾಡಿ ಜವರಯ್ಯ, ಪ್ರಧಾನ ಕಾರ್ಯದರ್ಶಿ ಎಂ. ಶಿವಕುಮಾರ್, ಸಹ ಕಾರ್ಯದರ್ಶಿ ರಾಮಸಮುದ್ರ ಶಿವಕುಮಾರ್, ಉಪಾಧ್ಯಕ್ಷ ಹಸಗೂಲಿ ಸಿದ್ದಯ್ಯ, ಬ್ಯಾಂಕ್ ಬಸವರಾಜು, ಕೊಳ್ಳೇಗಾಲ ತಾಲೂಕು ಅಧ್ಯಕ್ಷ ಗೋಪಾಲ್, ಎಲ್‌ಐಸಿ ರಾಜಣ್ಣ, ಶಿವಮಲ್ಲು, ಸುರೇಶ್ ಬೈಲೂರು, ದ್ವಾರ್ಕಿ, ವಸಂತ, ಮಾಧು, ಸುಂದರ್, ರಂಗಸ್ವಾಮಿ ಇತರರು ಹಾಜರಿದ್ದರು.
----7ಸಿಎಚ್ಎನ್14
ಡಾ. ಬಾಬು ಜಗಜೀವನ್ ರಾಮ್ ಸಂಘಟನೆಗಳ ಒಕ್ಕೂಟದಿಂದ ಮಾದಿಗ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.