ಸಾರಾಂಶ
ಕರ್ನಾಟಕ ಖಾಸಗಿ ನರ್ಸಿಂಗ್ ನಿಯಂತ್ರಣ ಕಾಯಿದೆ (ಕೆಪಿಎಂಇ) ನಿಯಮಗಳನ್ನು ಉಲ್ಲಂಘಿಸಿದ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 57 ಖಾಸಗಿ ವೈದ್ಯಕೀಯ ಸಂಸ್ಥೆ, ಕ್ಲಿನಿಕ್ ಹಾಗೂ ಪುನರ್ವಸತಿ ಕೇಂದ್ರಗಳಿಗೆ ನೋಟಿಸ್ ಜಾರಿ ಮಾಡಿರುವ ಜಿಲ್ಲಾಧಿಕಾರಿ, 4 ಲಕ್ಷ ರು. ದಂಡ ವಿಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕರ್ನಾಟಕ ಖಾಸಗಿ ನರ್ಸಿಂಗ್ ನಿಯಂತ್ರಣ ಕಾಯಿದೆ (ಕೆಪಿಎಂಇ) ನಿಯಮಗಳನ್ನು ಉಲ್ಲಂಘಿಸಿದ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 57 ಖಾಸಗಿ ವೈದ್ಯಕೀಯ ಸಂಸ್ಥೆ, ಕ್ಲಿನಿಕ್ ಹಾಗೂ ಪುನರ್ವಸತಿ ಕೇಂದ್ರಗಳಿಗೆ ನೋಟಿಸ್ ಜಾರಿ ಮಾಡಿರುವ ಜಿಲ್ಲಾಧಿಕಾರಿ, 4 ಲಕ್ಷ ರು. ದಂಡ ವಿಧಿಸಿದ್ದಾರೆ.ಮಾದನಾಯಕನಹಳ್ಳಿಯ ಪಬ್ಲಿಕ್ಸ್ ಹೆಲ್ತ್ ಕೇರ್ ಮಾಲೀಕ ಮತ್ತು ಯಲಹಂಕದ ಎನ್.ಡಿ.ಆರ್ ಆಸ್ಪತ್ರೆಯ ವಿರುದ್ದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಒಂದು ಪ್ರಕರಣವನ್ನು ಕರ್ನಾಟಕ ವೈದ್ಯಕೀಯ ಪರಿಷತ್ತಿಗೆ (ಕೆಎಂಸಿ) ವರ್ಗಾಯಿಸಲಾಗಿದೆ.
ಆಸ್ಪತ್ರೆ ವೈದ್ಯಕೀಯ ತ್ಯಾಜ್ಯ ನಿರ್ವಹಣೆಯಲ್ಲಿ ಲೋಪ, ಆಯುರ್ವೇದ, ಯುನಾನಿ ವ್ಯಾಸಂಗ ಮಾಡಿ ಆಲೋಪತಿ ಔಷಧಿ ನೀಡುವುದು, ಅನುಮತಿ ಪಡೆದಿರುವುದಕ್ಕಿಂತ ಹೆಚ್ಚು ಹಾಸಿಗೆ ಅಳವಡಿಸಿರುವುದು, ವ್ಯಾಸಂಗಕ್ಕೆ ಸಂಬಂಧವಿಲ್ಲದ ಬೇರೆ ಚಿಕಿತ್ಸಾ ಕ್ರಮ ಅನುಸರಿಸುತ್ತಿರುವುದು ಸೇರಿದಂತೆ ವಿವಿಧ ನಿಯಮಗಳ ಉಲ್ಲಂಘನೆ ಆರೋಪದಲ್ಲಿ ದಂಡ ವಿಧಿಸಲಾಗಿದೆ.ತಾವರೆಕೆರೆಯಲ್ಲಿರುವ ಸುಶ್ರತ ಕ್ಲಿನಿಕ್, ಶ್ರೀ ಸಾಯಿ ಕ್ಲಿನಿಕ್, ಮಾತೃಶ್ರೀ ಕ್ಲಿನಿಕ್ ಮತ್ತು ಮಾತಾ ಕ್ಲಿನಿಕ್, ಕನಕಪುರ ಮುಖ್ಯ ರಸ್ತೆಯ ಕಗ್ಗಲೀಪುರದಲ್ಲಿರುವ ಸಪ್ತಗಿರಿ ಕ್ಲಿನಿಕ್, ಕೆಂಗೇರಿ ಸ್ಯಾಟಲೈಟ್ ಟೌನ್‌ನ ಶಿರ್ಕೆ ಅಪಾರ್ಟ್ಮೆಂಟ್ ಬಳಿ ಇರುವ ಶ್ರೀಫೌಂಡೇಶನ್, ಕೆಂಗೇರಿ ಸ್ಯಾಟಲೈಟ್ ಟೌನ್‌ನ ಹೊಯ್ಸಳ ವೃತ್ತದಲ್ಲಿರುವ ವರ್ಷ ಫೌಂಡೇಶನ್, ನಾಗಸಂದ್ರದ ಮಂಜುನಾಥ ನಗರದಲ್ಲಿರುವ ತಿರುಮಲ ಕ್ಲಿನಿಕ್‌ಗೆ ದಂಡ ವಿಧಿಸಲಾಗಿದೆ.
ಶಾಮಣ್ಣ ಗಾರ್ಡನ್ ಐ.ಎಸ್.ಆರ್.ಎ.ಆರ್ ಹೆಲ್ತ್ ಸೆಂಟರ್, ಕಗ್ಗಲೀಪುರ ಉತ್ತರ ರಸ್ತೆಯ ಶ್ರೀ ಸಾಯಿ ಕ್ಲಿನಿಕ್, ಇಂದಿರಾನಗರದ ದಿ ವೈಟ್ ಎಲಿಫೆಂಟ್ ಆನ್ ಅಲ್ಟರ್ನೇಟ್ ಥೆರಪಿ ಕ್ಲಿನಿಕ್, ಚೆನ್ನೇನಹಳ್ಳಿಯ ತಾವರೆಕೆರೆ ಹೋಬಳಿಯ ವಿನಾಯಕ ಕ್ಲಿನಿಕ್, ಜಿಗಣಿ ಹೋಬಳಿಯ ಕೊಪ್ಪದಲ್ಲಿರುವ ಆದ್ಯ ಕ್ಲಿನಿಕ್, ಅಂದ್ರಹಳ್ಳಿಯ ಚಕ್ರನಗರ ಮುಖ್ಯ ರಸ್ತೆ ಅಂಜಾನಾದ್ರಿ ಮೆಡಿಕಲ್ ಸರ್ವೀಸ್ ಸ್ಟೋರ್ಸ್, ಬೇಗೂರು ಹೋಬಳಿಯ ಹೋಪ್ ಫೌಂಡೇಶನ್, ಮಾದನಾಯಕನಹಳ್ಳಿಯ ನಾರಾಯಣ ದಂತ ಚಿಕಿತ್ಸಾ ಕೇಂದ್ರ ಹಾಗೂ ಪಬ್ಲಿಕ್ಸ್ ಹೆಲ್ತ್ ಕೇರ್ ವೈದ್ಯರಿಗೆ ದಂಡ ವಿಧಿಸಿ ಆದೇಶಿಸಲಾಗಿದೆ ಎಂದು ಕುಟುಂಬ ಕಲ್ಯಾಣಾಧಿಕಾರಿ ಡಾ. ರವೀಂದ್ರನಾಥ ಎಂ. ಮೇಟಿ ತಿಳಿಸಿದ್ದಾರೆ.10 ಸಾವಿರ ದಂಡ: ಬೇಗೂರಿನ ಮೈಲಸಂದ್ರ ಕೆರೆಯ ಹತ್ತಿರ ಹೆಸರಿಲ್ಲದ ಕಟ್ಟಡದಲ್ಲಿ ಅನಧಿಕೃತವಾಗಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದ ಸುಮಾ ಎಂಬುವರಿಗೆ 10,000 ರು. ದಂಡ ವಿಧಿಸಲಾಗಿದೆ.
;Resize=(128,128))
;Resize=(128,128))