ಡೆಂಘೀ ನಿಯಂತ್ರಣಕ್ಕೆ ಉಪ ಕಾರ್ಯದರ್ಶಿ ಸೂಚನೆ

| Published : Jul 01 2024, 01:45 AM IST

ಸಾರಾಂಶ

ತಾಲೂಕಿನಲ್ಲಿ ಡೆಂಘಿ ಪ್ರಕರಣಗಳು ಹೆಚ್ಚಾಗುತ್ತಿದೆ. ಸಾರ್ವಜನಿಕರು ಎಚ್ಚರ ವಹಿಸಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಡಿಕೇರಿ

ವಿರಾಜಪೇಟೆ ತಾಲೂಕು ಪಂಚಾಯಿತಿ ಸಾಮರ್ಥ್ಯಸೌಧದಲ್ಲಿ ವಿರಾಜಪೇಟೆ ತಾಲೂಕು ಆಡಳಿತಾಧಿಕಾರಿಗಳು‌ ಜಿ.ಪಂ.ಉಪ ಕಾರ್ಯದರ್ಶಿ ಧನರಾಜ್‌ ಅವರ ನೇತೃತ್ವದಲ್ಲಿ ಜರುಗಿತು.

ತಾಲೂಕಿನಲ್ಲಿ ಡೆಂಘಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ವಿರಾಜಪೇಟೆಯಲ್ಲಿ 15, ಪೊನ್ನಂಪೇಟೆ ತಾಲೂಕಿನಲ್ಲಿ 35 ಪ್ರಕರಣಗಳು ಕಂಡುಬಂದಿದ್ದು, ಡೆಂಘಿ ತಡೆಕಟ್ಟಲು ಕ್ರಮವಹಿಸಿ ಎಂದು ಸೂಚಿಸಿದರು. ಡೆಂಘಿ ಬರುವುದು ನಿಂತ ನೀರಿನಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಸೊಳ್ಳೆಗಳಿಂದ ಬರುತ್ತಿದ್ದು, ಸಾರ್ವಜನಿಕರು ಎಚ್ಚರ ವಹಿಸಿ ಸ್ಚಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಕೃಷಿ ಇಲಾಖೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಹಲವು ಸೌಲಭ್ಯಗಳಿದ್ದು, ಈ ಕುರಿತು ಅಭಿವೃದ್ಧಿ ಸಾಧಿಸುವಂತೆ‌ ಕೃಷಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪಶುಪಾಲನ ಇಲಾಖೆಯಿಂದ ಈಗಾಗಲೇ ಹಸುಗಳಿಗೆ ಕಾಲು-ಬಾಯಿ ಜ್ವರದ ಲಸಿಕೆಯನ್ನು ಶೇ. 93 ನೀಡಲಾಗಿದ್ದು, ಪ್ರಸ್ತುತ ಚರ್ಮಗಂಟು ರೋಗದ ಲಸಿಕೆ ನೀಡಲಾಗುತ್ತಿದೆ ಎಂದು ವಿ. ಪೇಟೆ ಪಶುಪಾಲನ ಸಹಾಯಕ ನಿರ್ದೇಶಕರಾದ ಡಾ. ನವೀನ್ ಅವರು ಮಾಹಿತಿ ನೀಡಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿಗಳ ಕುರಿತು ಚರ್ಚಿಸಲಾಯಿತು. ಇಲಾಖೆಗಳ ಅಭಿವೃದ್ಧಿಗೆ ಶ್ರಮಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ವಿರಾಜಪೇಟೆ ತಾಲೂಕು ಪಂಚಾಯಿತಿ ಇ.ಒ. ಕೆ.ಸಿ.ಅಪ್ಪಣ್ಣ, ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು,‌ ತಾಲೂಕು ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.

ವಿರಾಜಪೇಟೆ ತಾಲೂಕಿನಲ್ಲಿ ಡೆಂಘಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ವಿರಾಜಪೇಟೆಯಲ್ಲಿ 15, ಪೊನ್ನಂಪೇಟೆ ತಾಲೂಕಿನಲ್ಲಿ 35 ಪ್ರಕರಣಗಳು ಕಂಡುಬಂದಿದ್ದು, ಡೆಂಘಿ ತಡೆಕಟ್ಟಲು ಕ್ರಮವಹಿಸಿ ಎಂದು ಜಿ.ಪಂ. ಉಪಕಾರ್ಯದರ್ಶಿ ಧನರಾಜ್‌ ಹೇಳಿದರು.