ಬೀರೂರುವಿದ್ಯಾರ್ಥಿಗಳ ವ್ಯಾಸಂಗದ ಬದುಕಿನಲ್ಲಿ ಸೇವಾ ಮನೋಭಾವನೆ ರೂಪಿಸಲು ಶಿಬಿರಗಳು ಸಹಕಾರಿಯಾಗಲಿವೆ ಎಂದು ಡಾ. ಕೆ.ಎ. ರಾಜಣ್ಣ ತಿಳಿಸಿದರು.

ಎಮ್ಮೆದೊಡ್ಡಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದ ಸಮಾರೋಪ

ಕನ್ನಡಪ್ರಭ ವಾರ್ತೆ ಬೀರೂರು

ವಿದ್ಯಾರ್ಥಿಗಳ ವ್ಯಾಸಂಗದ ಬದುಕಿನಲ್ಲಿ ಸೇವಾ ಮನೋಭಾವನೆ ರೂಪಿಸಲು ಶಿಬಿರಗಳು ಸಹಕಾರಿಯಾಗಲಿವೆ ಎಂದು ಡಾ. ಕೆ.ಎ. ರಾಜಣ್ಣ ತಿಳಿಸಿದರು.

ಬೀರೂರು ಹೋಬಳಿ ಎಮ್ಮೆದೊಡ್ಡಿ ಬಳಿ ಮುಸ್ಲಾಪುರದಲ್ಲಿ ಕುವೆಂಪು ವಿವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಬುಧವಾರ ನಡೆದ ರಾಷ್ಟ್ರೀಯ ಸೇವಾ ಯೋಜನೆ ಘಟಕ ಒಂದು ಮತ್ತು ಎರಡರ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಾರ್ಷಿಕ ಶಿಬಿರ ಸ್ವಚ್ಛತೆ, ಪರಿಸರದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಮಾಜಮುಖಿಯಾಗಿ ಪ್ರೇರೇಪಿಸಲಿದೆ. ಸೇವಾ ಮನೋಭಾವವನ್ನು ಸ್ವಾರ್ಥವಿಲ್ಲದೆ ರೂಪಿಸಿಕೊಳ್ಳಬಹುದು ಎಂದರು.

ಗ್ರಾಮಗಳ ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿ ಸಾಧ್ಯ ಎಂಬುದು ಗಾಂಧೀಜಿ ಕನಸು, ಶಿಬಿರಗಳು ಅನುಭವ ಮಂಟಪ ವಿದ್ದಂತೆ. ಇಂತಹ ಶಿಬಿರಗಳಲ್ಲಿ ವಿದ್ಯಾರ್ಥಿಗಳಲ್ಲಿ ಒಳ್ಳೆಯ ಗುಣ ಕಲಿಯಲು ಅವಕಾಶವಾಗಲಿದೆ. ಭಾವೈಕ್ಯತೆ ಗುಂಪು ಸ್ವಚ್ಛತೆ ಬಗ್ಗೆ ನಾಯಕತ್ವದ ಗುಣ ಹಾಗೂ ವ್ಯಕ್ತಿ ವಿಕಾಸನಕ್ಕೆ ಸಹಕಾರಿ ಜೊತೆಗೆ ಬದುಕಿನ ಮೌಲ್ಯ ಕಲಿಸಲಿದೆ ಎಂದರು.

ತಾಪಂ ಮಾಜಿ ಅಧ್ಯಕ್ಷ ಚಂದ್ರಮೌಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲರ ಸಹಕಾರ ಗ್ರಾಮೀಣ ಭಾಗದ ಹಿಂದುಳಿದ ವರ್ಗದವರ ಜಾಗೃತಿ ಮೂಡಿಸಲು ಶಿಬಿರಗಳು ಸಹಕಾರಿ. ಇಲ್ಲಿ ಜೀವನ ಮೌಲ್ಯಗಳ ಕಲಿಕೆಗೆ ಹೆಚ್ಚು ಅವಕಾಶ ದೊರೆಯಲಿದೆ. ಗ್ರಾಮಸ್ಥರಲ್ಲಿ ಸ್ವಚ್ಛತೆಯ ಅರಿವು ಮೂಡಿಸಲಿದೆ ಸರ್ಕಾರಗಳು. ಉತ್ತಮ ಆರೋಗ್ಯ ಶಿಕ್ಷಣ ಗುಣಮಟ್ಟದ ರಸ್ತೆ ಒದಗಿಸಬೇಕಿದೆ ಯಾವುದೇ ಗ್ರಾಮಗಳಿಗೆ ಮದ್ಯದ ಅಂಗಡಿ ಬೇಕಿಲ್ಲ ಹಣವಿಲ್ಲದೆ ಮತ ನೀಡುವ ಮನೋಭಾವ ಯುವ ಪೀಳಿಗೆಯಲ್ಲಿ ಬರಬೇಕಿದೆ ಎಂದರು

ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ರಾಜು ಒಡೆಯರ್ ಮಾತನಾಡಿ ವಿದ್ಯಾರ್ಥಿಗಳು ಮೊಬೈಲ್ ನಿಂದ ದೂರವಿದ್ದು ಸಾಹಿತ್ಯ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕಿದೆ. ಗುರುಹಿರಿಯರ ಮಾರ್ಗದರ್ಶನದ ಮೂಲಕ ಉತ್ತಮ ಹೆಜ್ಜೆಗಳೊಂದಿಗೆ ಭವಿಷ್ಯ ರೂಪಿಸಿಕೊಳ್ಳಲು ಶಿಬಿರಗಳು ಸಹಕಾರಿ ಎಂದರು.

ಈ ಸಂದರ್ಭದಲ್ಲಿ ಉಪನ್ಯಾಸಕ ಸಂಪತ್‌ಕುಮಾರ್, ಕೆ.ಎನ್. ರವಿಚಂದ್ರ, ರಾಮಚಂದ್ರ, ಡಾ. ಸೋಮಶೇಖರ್, ಡಾ. ಕುಮಾರಸ್ವಾಮಿ, ಎಸ್ ಕುಮಾರ್, ಹರೀಶ್, ಬಿ.ಎಂ. ಕೃಷ್ಣನಾಯ್ಕ್. ಓಂಕಾರಯ್ಯ. ಸವಿತಾ. ಯೋಗ ಗುರು ಪ್ರಕಾಶ್‌ಮೂರ್ತಿ, ಭಂಡಾರಿ ಬಸವರಾಜ್. ಭವ್ಯ. ಮತ್ತಿತರಿದ್ದರು.

ಪೋಟೊ

8ಬೀರೂರು 1

ಬೀರೂರು ಹೋಬಳಿ ಎಮ್ಮೆದೊಡ್ಡಿಯ ಮುಸ್ಲಾಪುರದಲ್ಲಿ ಬುಧವಾರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವನ್ನು ತಾಪಂ ಮಾಜಿ ಅಧ್ಯಕ್ಷ ಚಂದ್ರಮೌಳಿ ಉದ್ಘಾಟಿಸಿದರು. ಡಾ. ಕೆ.ಎ.ರಾಜಣ್ಣ, ರಾಜುಒಡೆಯರ್, ಸೋಮಶೇಖರ್ ಮತ್ತಿತರಿದ್ದರು.