ಕನ್ನಡಪ್ರಭ ವಾರ್ತೆ ಬೈಲಹೊಂಗಲವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳು ಮತ್ತು ಸಾಮಾಜಿಕ ಕಾಳಜಿ ವಹಿಸುವಲ್ಲಿ ಎನ್.ಎಸ್.ಎಸ್ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಚನ್ನಮ್ಮಕಿತ್ತೂರ ಶಾಸಕ ಬಾಬಾಸಾಹೇಬ್ ಪಾಟೀಲ ಹೇಳಿದರು.ಪಟ್ಟಣದ ಕೆಎಲ್‌ಇ ಸಂಸ್ಥೆಯ ಪಾಲಿಟೆಕ್ನಿಕ್ (ಡಿಪ್ಲೋಮಾ) ಮಹಾವಿದ್ಯಾಲಯ ಮತ್ತು ಕರ್ನಾಟಕ ಸರ್ಕಾರ, ತಾಂತ್ರಿಕ ಶಿಕ್ಷಣ ಇಲಾಖೆ ಬೆಂಗಳೂರು ಹಾಗೂ ಗ್ರಾಮ ಪಂಚಾಯತಿ ತಿಗಡಿ ಸಂಯುಕ್ತಾಶ್ರಯದಲ್ಲಿ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ತಿಗಡಿ ಗ್ರಾಮದಲ್ಲಿನ ರಸ್ತೆಗಳ ದುರಸ್ತಿ ಮತ್ತು ಜಾಗೃತಿ ಕಾರ್ಯಕ್ರಮವನ್ನು ರಸ್ತೆ ತಗ್ಗುಗುಂಡಿ ಮುಚ್ಚುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಪ್ರಾಚಾರ್ಯ ಪ್ರೊ.ಶ್ರೀಧರ ಬ.ನಿರಡಿ ಸ್ವಾಗತಿಸಿ, ಪ್ರಾಸ್ಥಾವಿಕವಾಗಿ ಮಾತನಾಡಿ, ಎನ್.ಎಸ್.ಎಸ್. ಕಾರ್ಯಕ್ರಮಗಳಿಂದ ಶ್ರಮದ ಮಹತ್ವ ವಿದ್ಯಾರ್ಥಿಗಳಿಗೆ ತಿಳಿಯುತ್ತದೆ. ಶಿಬಿರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಅವುಗಳ ಸದೂಪಯೋಗ ವಿದ್ಯಾರ್ಥಿಗಳು ಮಾಡಿಕೊಳ್ಳಬೇಕು ಎಂದರು.ಗ್ರಾಪಂ ಅಧ್ಯಕ್ಷ ಕಲ್ಪನಾ ಡೊಂಕಣ್ಣವರ, ಗ್ರಾಮಸ್ಥರಾದ ಉಮೇಶ ಹಿರೇಮಠ, ಶಿವಾನಂದ ಪಾಟೀಲ, ಬಾಬಾ ಹೊಸಮನಿ, ಈರಣ್ಣ ನಾಗಪ್ಪನವರ ಹಾಗೂ ಕೆ. ಎಲ್.ಇ ಪಾಲಿಟೆಕ್ನಿಕ್ ನ ವಿವಿಧ ವಿಭಾಗಗಳ ಮುಖ್ಯಸ್ಥರುಗಳು, ಉಪನ್ಯಾಸಕರುಗಳು, ಬೋಧಕ & ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು. ಉಪನ್ಯಾಸಕ ಎಚ್.ಐ.ಸಂಕಣ್ಣವರ ನಿರೂಪಿಸಿದರು. ಅಶ್ವಿನಿ ಪಾಟೀಲ ವಂದಿಸಿದರು.
ನಾಯಕತ್ವದ ಗುಣ ಬೆಳೆಸುವಲ್ಲಿ ಎನ್‌ಎಸ್‌ಎಸ್ ಬಹುಮುಖ್ಯ: ಶಾಸಕ ಬಾಬಾಸಾಹೇಬ್
ಬೈಲಹೊಂಗಲ: ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳು ಮತ್ತು ಸಾಮಾಜಿಕ ಕಾಳಜಿ ವಹಿಸುವಲ್ಲಿ ಎನ್.ಎಸ್.ಎಸ್ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಚನ್ನಮ್ಮಕಿತ್ತೂರ ಶಾಸಕ ಬಾಬಾಸಾಹೇಬ್ ಪಾಟೀಲ ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.