ಅಪರಾಧಗಳ ಸಂಖ್ಯೆ ಇಳಿಮುಖ: ಎಎಸ್‌ಪಿ ಪ್ರಸನ್ನ

| Published : Jan 08 2025, 12:16 AM IST

ಅಪರಾಧಗಳ ಸಂಖ್ಯೆ ಇಳಿಮುಖ: ಎಎಸ್‌ಪಿ ಪ್ರಸನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೇ ಪ್ರಸಕ್ತ ಸಾಲಿನಲ್ಲಿ ಅಪರಾಧಗಳ ಸಂಖ್ಯೆ ಇಳಿಮುಖವಾಗಿದೆ ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೇ ಪ್ರಸಕ್ತ ಸಾಲಿನಲ್ಲಿ ಅಪರಾಧಗಳ ಸಂಖ್ಯೆ ಇಳಿಮುಖವಾಗಿದೆ ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ತಿಳಿಸಿದರು.

ನಗರಕ್ಕೆ ಮಂಗಳವಾರ ಭೇಟಿ ನೀಡಿದ್ದ ಅವರು ಡಿವೈಎಸ್ಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೂಂಡಾಕಾಯ್ದೆಯಡಿ ಒಬ್ಬನ್ನನ್ನು ಬಂಧಿಸಲಾಗಿದೆ. ಅದರಂತೆ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗಿದ್ದು ಸಾರ್ವಜನಿಕರಿಗೆ ತಿಳುವಳಿಕೆ ನೀಡುವುದು ಹಾಗೂ ಎಸ್‌ಪಿ ಅವರ ಮಾರ್ಗದರ್ಶನದಲ್ಲಿ ವಿಜಿಬಲ್‌ ಪೊಲೀಸಿಂಗ್‌ ಗ್ರಾಮಗಳಲ್ಲಿ ಪೊಲೀಸ್‌ ವಾಸ್ತವ್ಯ ಕಾರ್ಯಕ್ರಮ, ಪ್ರಮುಖ ಸ್ಥಳಗಳಲ್ಲಿ ಹಾಗೂ ಜಿಲ್ಲೆಯಲ್ಲಿ ಬರುವ ಡ್ಯಾಂಗಳ ಮೇಲೆ ಸಿಸಿ ಕ್ಯಾಮೆರಾಗಳ ಅಳವಡಿಕೆಯಿಂದಾಗಿ ಅಪರಾಧಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಜಿಲ್ಲೆಯ 14 ಸಕ್ಕರೆ ಕಾರ್ಖಾನೆಗಳ ಸುಮಾರು 8 ಸಾವಿರ ಟ್ರ್ಯಾಕ್ಟರ್‌ಗಳು ಸಾವಿರಕ್ಕೂ ಹೆಚ್ಷು ಲಾರಿಗಳು ಕಬ್ಬಿನ ಸೀಜನ್‌ನಲ್ಲಿ ರಸ್ತೆಗಿಳಿಯುತ್ತವೆ. ಇದರಿಂದ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿದ್ದವು. ಅದನ್ನು ಅರಿತು ಎಲ್ಲ ಟ್ರ್ಯಾಕ್ಟರ್‌ಗಳಿಗೆ ರಿಫ್ಲೆಕ್ಟರ್‌ಗಳನ್ನು ಕಡ್ಡಾಯವಾಗಿ ಅಳವಡಿಸಲು ಸೂಚಿಸಿದೆ. ಟೇಪ್‌ ರೆಕಾರ್ಡರ್‌ಗಳ ಬಳಕೆಯನ್ನು ನಿಷೇಧಿಸಿದ್ದರಿಂದ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ. ಹಿಟ್‌ ಆ್ಯಂಡ್‌ ರನ್‌ ನೂರು ಪ್ರಕರಣಗಳ ಪೈಕಿ 65 ಸಂತ್ರಸ್ತರಿಗೆ ಪರಿಹಾರಕ್ಕೆ ಅನುಮೋದನೆ ಕಳುಹಿಸಲಾಗಿದೆ. 16 ಪ್ರಕರಣಗಳು ಅಪ್ರೂವ್‌ ಆಗಿದೆ ಎಂದು ತಿಳಿಸಿದರು.ಸೈಬರ್‌ ಕ್ರೈಮ್‌ ಬಗ್ಗೆ ಎಚ್ಚರ ವಹಿಸಿ:

ದೇಶದಾದ್ಯಂತ ಸೈಬರ್‌ ಅಪರಾಧಗಳು ಹೆಚ್ಚುತ್ತಿವೆ. ತಿಳುವಳಿಕೆಯ ಕೊರತೆ, ಭಯ, ಹಣದ ಆಸೆಗೆ ಸಾರ್ವಜನಿಕರು ಹಣ ಕಳೆದು ಕೊಳ್ಳುತ್ತಿದ್ದಾರೆ. ಪ್ರತಿದಿನ 4 ರಿಂದ 5 ಪ್ರಕರಣಗಳು ದಾಖಲಾಗುತ್ತಿವೆ. ಹಣ ಕಳೆದು ಕೊಂಡಿದ್ದು ಗೊತ್ತಾದ ತಕ್ಷಣ 1930 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕು. ನೌಕರಿ ಕೊಡಿಸುವ, ಹಣವನ್ನು ಡಬಲ್‌ ಮಾಡುವ, ಪೊಲೀಸ್‌ ಹೆಸರು ಹೇಳಿ ಕೊಂಡು ದಂಧೆಖೋರರು ಸಾರ್ವಜನಿಕರನ್ನು ವಂಚಿಸುವ ಪ್ರಕರಣಗಳು ಬೆಳಕಿಗೆ ಬಂದಿವೆ. ಯಾವುದೇ ಪೊಲೀಸರು ವಿಡಿಯೋ ಕಾಲ್‌ನಲ್ಲಿ ವಿಚಾರಣೆ ಮಾಡುವುದಿಲ್ಲ, ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು ಎಂದರು.ಯಾವುದೇ ಅಪರಿಚಿತ ಮ್ಯಾಸೇಜ್‌ಗಳು ಹಾಗೂ ಕರೆಗಳಿಗೆ ಉತ್ತರಿಸಬಾರದು. ಎಚ್ಚರಿಕೆಯಿಂದ ಸ್ಮಾರ್ಟಫೋನ್‌ಗಳನ್ನು ಬಳಸಬೇಕು ಎಂದು ಡಿವೈಎಸ್ಪಿ ಶಾಂತವೀರ ಇದ್ದರು.ಕೊಲೆ ಆರೋಪಿಯ ಬಂಧನ: ತಾಲೂಕಿನ ಮುತ್ತೂರು ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ನಡೆದ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ. ಶೋಭಾ ಮಾಂಗ ಎಂಬುವರ ಕೊಲೆ ನಡೆದಿದ್ದು ಭೀಮಪ್ಪ ಮುತ್ತಪ್ಪ ಮಾಂಗ (39) ಆರೋಪಿಯನ್ನು ಬಂಧಿಸಲಾಗಿದೆ. ಕೊಲೆಯಾದ ಮಹಿಳೆಯ ಸಂಬಂಧಿಯಾಗಿರುವ ಆರೋಪಿ ಅವರ ಪಕ್ಕದ ಮನೆಯಲ್ಲಿ ವಾಸವಾಗಿದ್ದ, ಮೃತ ಮಹಿಳೆಗೆ ಮೂವರು ಮಕ್ಕಳಿದ್ದು ಎಲ್ಲರೂ ಬೇರೆ ಊರುಗಳಲ್ಲಿ ವಾಸವಾಗಿದ್ದಾರೆ. ಬಹಳ ದಿನಗಳಿಂದ ಮೃತ ಮಹಿಳೆಯೊಂದಿಗೆ ಜಮೀನು ವಿಷಯದಲ್ಲಿ ಜಗಳವಾಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮಹಿಳೆಯು ತನ್ನ ಮೇಲೆ ಮಾಟ ಮಂತ್ರ ಮಾಡಿಸುತ್ತಿದ್ದಾಳೆ ಎಂದು ಕೋಪಗೊಂಡಿದ್ದ ಆರೋಪಿ ಇಂದು ಬೆಳಗಿನ ಜಾವ ಮಹಿಳೆಯನ್ನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ಹಂತದ ತನಿಖೆಯಿಂದ ತಿಳಿದು ಬಂದಿದೆ ಎಂದು ಎಎಸ್‌ಪಿ ಪ್ರಸನ್ನ ವಿವರಿಸಿದರು.