ಮೊದಲ ತಂಡದಲ್ಲಿ ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಶ್ರೀಕಂಠ, ಲಕ್ಷ್ಮೀ ಮತ್ತು ಕಾವೇರಿ ಆನೆಗಳು
ಬಿ. ಶೇಖರ್ ಗೋಪಿನಾಥಂ
ಕನ್ನಡಪ್ರಭ ವಾರ್ತೆ ಮೈಸೂರುದಸರಾ ಮಹೋತ್ಸವ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಇನ್ನೂ ಮೂರು ಆನೆಗಳು 2ನೇ ತಂಡದಲ್ಲಿ ಆಗಮಿಸಿ ಮೊದಲ ತಂಡದೊಂದಿಗೆ ಸೇರಿಕೊಂಡಿವೆ. ಇದರೊಂದಿಗೆ ದಸರಾ ಆನೆಗಳ ಸಂಖ್ಯೆಯು 12ಕ್ಕೆ ಏರಿಕೆ ಆಗಿದೆ. ಇನ್ನೂ ಮಾಜಿ ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯು ಮಾತ್ರ ಬರುವಿಕೆ ಬಾಕಿ ಇದೆ.
2026ನೇ ಸಾಲಿನ ದಸರಾ ಮಹೋತ್ಸವಕ್ಕಾಗಿ ಆಯ್ಕೆಯಾಗಿರುವ 12 ಆನೆಗಳು ಆಯ್ಕೆಯಾಗಿದ್ದು, ಮೊದಲ ತಂಡದಲ್ಲಿ ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಶ್ರೀಕಂಠ, ಲಕ್ಷ್ಮೀ ಮತ್ತು ಕಾವೇರಿ ಆನೆಗಳು ಎರಡು ವಾರಗಳ ಹಿಂದೆಯೇ ಅರಮನೆ ಆವರಣ ಪ್ರವೇಶಿಸಿ ಆನೆ ಬಿಡಾರದಲ್ಲಿ ವಾಸ್ತವ್ಯ ಹೂಡಿದ್ದಲ್ಲದೆ, ಪ್ರತಿದಿನ ತಾಲೀಮು ನಡೆಸುತ್ತಿವೆ. ಈಗ ಎರಡನೇ ತಂಡದಲ್ಲಿ ಸುಗ್ರೀವ, ರೂಪಾ ಮತ್ತು ಚೈತ್ರಾ ಆನೆಗಳು ಬಂದು ಮೊದಲ ತಂಡದೊಂದಿಗೆ ಸೇರಿಕೊಂಡಿವೆ.ಇನ್ನೂ ಜಂಬೂಸವಾರಿಯಲ್ಲಿ ನಿಶಾನೆ ಆನೆಯಾಗಿ ಸಾಗಲಿರುವ ಕ್ಯಾಪ್ಟನ್ ಅಭಿಮನ್ಯು ಆನೆಯು ಅಕ್ಟೋಬರ್ ಮೊದಲ ವಾರದಲ್ಲಿ ಆಗಮಿಸಲಿದೆ.
----ಸುಗ್ರೀವ
ಫೋಟೋ- 13ಎಂವೈಎಸ್13ಸುಗ್ರೀವ- 44 ವರ್ಷ, ಶರೀರದ ಎತ್ತರ- 2.95 ಮೀಟರ್, ಶರೀರ ಉದ್ದ- 3.25 ಮೀಟರ್, ಅಂದಾಜು ತೂಕ- 5800 ಕೆ.ಜಿ., ದುಬಾರೆ ಆನೆ ಶಿಬಿರ. ಮಾವುತ- ಶಂಕರ್, ಕಾವಾಡಿ- ಜೀವನ್.
ಈ ಆನೆಯನ್ನು 2016ರಲ್ಲಿ ಕೊಡಗು ಜಿಲ್ಲೆಯ ಕುಶಾಲನಗರ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ. ನಂತರ ಈ ಅನೆಗೆ ಸುಸೂತ್ರವಾಗಿ ಪಳಗಿಸಿ ತರಬೇತಿ ನೀಡಲಾಗಿದೆ. ಈ ಆನೆಯು ಶಾಂತ ಸ್ವಭಾವ, ಶಿಸ್ತುಪೂರ್ಣ ನಡೆ ಹಾಗೂ ಉತ್ತಮ ಆಜ್ಞಾಪಾಲನೆ ಆಗಿದೆ. ಜನಸಂದಣಿಯ ನಡುವೆಯೂ ಶಾಂತವಾಗಿ ನಡೆದು, ಶಬ್ದಗಳಿಗೂ ತಟ್ಟದೆ ಪ್ರತಿಕ್ರಿಯಿಸುವ ಧೈರ್ಯ ಈ ಆನೆಯ ಬಲವಾಗಿದೆ. ದಸರಾ ಜಂಬೂಸವಾರಿಯಲ್ಲಿ ಸಾಲಾನೆಯಾಗಿದ್ದ ಸಾಗಿದೆ. 5ನೇ ಬಾರಿಗೆ ದಸರಾಗೆ ಆಗಮಿಸಿದೆ.-----
ರೂಪಾಫೋಟೋ- 13ಎಂವೈಎಸ್12
ರೂಪಾ- 50 ವರ್ಷ, ಶರೀರದ ಎತ್ತರ- 2.75 ಮೀಟರ್, ಶರೀರದ ಉದ್ದ- 2.90 ಮೀಟರ್, ಅಂದಾಜು ತೂಕ- 3500 ಕೆ.ಜಿ., ದೊಡ್ಡಹರವೆ ಆನೆ ಶಿಬಿರ, ಮಾವುತ- ಮಂಜುನಾಥ, ಕಾವಾಡಿ- ಮಂಜುಈ ಆನೆಯನ್ನು 2016ರಲ್ಲಿ ಪ್ರಕೃತಿ ವಿರೋಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಒಂದು ಸರ್ಕಸ್ ಕಂಪನಿಯಿಂದ ರಕ್ಷಿಸಿ, ಅರಣ್ಯ ಇಲಾಖೆಯ ಆನೆ ಶಿಬಿರಕ್ಕೆ ಸ್ಥಳಾಂತರಿಸಿತ್ತು. ಇದರಿಂದ ಆನೆಗೆ ಉತ್ತಮ ಆರೈಕೆ, ಆಹಾರ ಮತ್ತು ಆರಾಮದಾಯಕ ವಾತಾವರಣ ಲಭಿಸಿತು. ಆನೆ ಶಿಬಿರದಲ್ಲಿ ಅನುಭವಿಸಿದ ಸಂಭಾಳನೆ ಹಾಗೂ ತರಬೇತಿಯಿಂದ ಶಾಂತ ಮತ್ತು ಮನುಷ್ಯರೊಂದಿಗೆ ಸಹಜವಾಗಿ ಹೊಂದಿಕೊಳ್ಳುವ ಗುಣಗಳನ್ನು ಮೆರಿದಿತು. 2ನೇ ಬಾರಿಗೆ ದಸರೆಯಲ್ಲಿ ಭಾಗವಹಿಸಲು ಆಗಮಿಸಿದೆ.
----ಚೈತ್ರಾ
ಫೋಟೋ- 13ಎಂವೈಎಸ್11ಚೈತ್ರಾ- 55 ವರ್ಷ, ಶರೀರದ ಎತ್ತರ- 2.47 ಮೀಟರ್, ಶರೀರದ ಉದ್ದ- 2.80 ಮೀಟರ್, ಅಂದಾಜು ತೂಕ- 2988 ಕೆ.ಜಿ. ರಾಮಪುರ ಆನೆ ಶಿಬಿರ. ಮಾವುತ- ಕಲೀಂ ಪಾಷಾ, ಕಾವಾಡಿ- ಪ್ರತಾಪ್.
ಈ ಆನೆಯು ಶಾಂತ ಸ್ವಭಾವದಾಗಿದ್ದು, ಇದು ಅರಣ್ಯ ಇಲಾಖೆಯ ಆನೆ ಶಿಬಿರದಲ್ಲಿ ಗಂಗೆ ಆನೆಯ ಮರಿಯಾಗಿದೆ. ಕಾಡಾನೆ ಮತ್ತು ಹುಲಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿದೆ. 6ನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿದೆ.