ಸಾರಾಂಶ
ಗೋಕಾಕನಲ್ಲಿ ನಡೆದ ಅಂತಾರಾಷ್ಟ್ರೀಯ ಶುಶ್ರೂಷಕರ ದಿನಾಚರಣೆಯಲ್ಲಿ ಡಾ.ಧರೆಪ್ಪ ಚೌಗಲಾ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಗೋಕಾಕಶುಶ್ರೂಷಕರಿಗೆ ತಾಯಿಯಂತಹ ಸ್ಥಾನವಿದ್ದು, ಅದನ್ನು ತಮ್ಮ ವೃತ್ತಿಯಲ್ಲಿ ಅಳವಡಿಸಿಕೊಳ್ಳುವಂತೆ ನಗರದ ಕೆಎಲ್‌ಇ ಆಸ್ಪತ್ರೆಯ ಡಾ.ಧರೆಪ್ಪ ಚೌಗಲಾ ಹೇಳಿದರು.
ನಗರದ ಕೆಎಲ್‌ಇ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್‌ನಲ್ಲಿ ಸೋಮವಾರ ಹಮ್ಮಿಕೊಂಡ ಅಂತಾರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅತ್ಯಂತ ಜವಾಬ್ದಾರಿಯುತ ಈ ವೃತ್ತಿಯಲ್ಲಿ ಮಾತೃ ಹೃದಯಿಗಳಾಗಿ ಕಾರ್ಯನಿರ್ವಹಿಸುವಂತೆ ತಿಳಿಸಿದರು.ಆರೋಗ್ಯ ಕ್ಷೇತ್ರದಲ್ಲಿ ಶುಶ್ರೂಷಕರು ಬೆನ್ನೆಲುಬಾಗಿದ್ದು, ಜನತೆಯ ಆರೋಗ್ಯದಿಂದ ದೇಶ ಮತ್ತು ಸಮಾಜದ ಅಭಿವೃದ್ಧಿ ಸಾಧ್ಯ. ಈ ಕ್ಷೇತ್ರದಲ್ಲಿ ಮಾದರಿಯಾಗಿ ಸೇವೆ ಸಲ್ಲಿಸಿದ ನೈಟಿಗನ್ ಅವರ ನೆನಪಿಗಾಗಿ ಈ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ತಾವುಗಳು ಅವರ ಆದರ್ಶಗಳನ್ನು ತಮ್ಮ ವೃತ್ತಿಯಲ್ಲಿ ಅಳವಡಿಸಿಕೊಂಡು ಅವರಂತೆ ಮಾದರಿಯಾಗಿ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು.
ಕೆಎಲ್‌ಇ ಸಿ.ಎಸ್.ಅಂಗಡಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಬಿ.ಮೇವುಂಡಿಮಠ, ನರ್ಸಿಂಗ್ ಸೈನ್ಸ್‌ನ ಪ್ರಾಚಾರ್ಯ ಈರಣ್ಣ ಕಾಜಗಾರ ಇದ್ದರು. ಈ ಸಂದರ್ಭದಲ್ಲಿ ಶುಶ್ರೂಷಕರ ದಿನಾಚರಣೆ ನಿಮಿತ್ತ ಶುಶ್ರೂಷಕಿ ಸುಮಂಗಲಾ ತಿಗಡೊಳ್ಳಿ ಅವರನ್ನು ಸತ್ಕರಿಸಲಾಯಿತು.