ಶುಶ್ರೂಶಕರು ಆರೋಗ್ಯ ಕ್ಷೇತ್ರದ ಆಧಾರ ಸ್ತಂಭ

| Published : May 15 2024, 01:30 AM IST

ಸಾರಾಂಶ

ಶುಷ್ರೂಶಕರು ಆರೋಗ್ಯ ಕ್ಷೇತ್ರದ ಆಧಾರ ಸ್ತಂಭ. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಶುಷ್ರೂಶಕರ ಪಾತ್ರ ಮಹತ್ವದ್ದು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಂಭುಲಿಂಗಯ್ಯ ಕರ್ಪೂರಮಠ ಹೇಳಿದರು.

ವಿಜಯಪುರ: ಶುಷ್ರೂಶಕರು ಆರೋಗ್ಯ ಕ್ಷೇತ್ರದ ಆಧಾರ ಸ್ತಂಭ. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಶುಷ್ರೂಶಕರ ಪಾತ್ರ ಮಹತ್ವದ್ದು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಂಭುಲಿಂಗಯ್ಯ ಕರ್ಪೂರಮಠ ಹೇಳಿದರು.

ನಗರದ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘದ ಆರ್.ಕೆ.ಎಮ್ ಕಾಲೇಜ್ ಆಫ್ ನರ್ಸಿಂಗ್‌ನಲ್ಲಿ ಅಂತಾರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿ, ನರ್ಸಿಂಗ್ ವಿದ್ಯಾರ್ಥಿಗಳು ಜವಾಬ್ದಾರಿಯಿಂದ ಅಧ್ಯಯನ ಮಾಡುವುದರ ಜೊತೆಗೆ ಕಾಲಕಾಲಕ್ಕೆ ಬರುವ ನೂತನ ಆವಿಷ್ಕಾರಗಳು, ಮಾರ್ಗಸೂಚಿಗಳನ್ನು ಕಲಿತು, ಉತ್ತಮ ವೈದ್ಯಕೀಯ ಕೌಶಲ್ಯಗಳನ್ನು ಅಳವಡಿಸಿಕೊಂಡು ರೋಗಿಯ ಆರೋಗ್ಯ ಕಾಪಾಡುವಲ್ಲಿ ಶ್ರಮಿಸಬೇಕು ಎಂದು ಕರೆ ನೀಡಿದರು.

ಪ್ರಾಂಶುಪಾಲೆ ಮೇಧಾ ಹಿರೇಮಠ ಮಾತನಾಡಿದರು. ಡಾ.ನಂದಕುಮಾರ ರುದ್ರಗೌಡರ, ಅಮಿತ, ಡಾ. ಮೋಹಿತೆ, ಸಾಗರ ದೇವೂರ ಮುಂತಾದವರು ಇದ್ದರು.