ದಾದಿಯರ ಸೇವೆ ಅತ್ಯಂತ ಶ್ರೇಷ್ಠ

| Published : May 14 2025, 02:11 AM IST / Updated: May 14 2025, 02:12 AM IST

ಸಾರಾಂಶ

ಶಿಕಾರಿಪುರ: ಪ್ರತಿಯೊಂದು ಆಸ್ಪತ್ರೆಯಲ್ಲಿನ ರೋಗಿಗಳ ಆರೈಕೆಯಲ್ಲಿ ದಾದಿಯರ ನಿಸ್ವಾರ್ಥ ತ್ಯಾಗಮಯ ಸೇವೆ ಅತ್ಯಮೂಲ್ಯವಾಗಿದ್ದು, ಆಸ್ಪತ್ರೆಯಲ್ಲಿ ದಾದಿಯ ಸೇವೆಗೈಯುವ ಇಚ್ಚೆಯುಳ್ಳವರು ಉದಾರತೆಯ ಗುಣವನ್ನು ಕಡ್ಡಾಯವಾಗಿ ರೂಢಿಸಿಕೊಳ್ಳಬೇಕಾಗಿದೆ ಎಂದು ಇಲ್ಲಿನ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ನರ್ಸಿಂಗ್ ಸೂಪರಿಡೆಂಟ್ ಸುಮನ ಹೇಳಿದರು.

ಶಿಕಾರಿಪುರ: ಪ್ರತಿಯೊಂದು ಆಸ್ಪತ್ರೆಯಲ್ಲಿನ ರೋಗಿಗಳ ಆರೈಕೆಯಲ್ಲಿ ದಾದಿಯರ ನಿಸ್ವಾರ್ಥ ತ್ಯಾಗಮಯ ಸೇವೆ ಅತ್ಯಮೂಲ್ಯವಾಗಿದ್ದು, ಆಸ್ಪತ್ರೆಯಲ್ಲಿ ದಾದಿಯ ಸೇವೆಗೈಯುವ ಇಚ್ಚೆಯುಳ್ಳವರು ಉದಾರತೆಯ ಗುಣವನ್ನು ಕಡ್ಡಾಯವಾಗಿ ರೂಢಿಸಿಕೊಳ್ಳಬೇಕಾಗಿದೆ ಎಂದು ಇಲ್ಲಿನ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ನರ್ಸಿಂಗ್ ಸೂಪರಿಡೆಂಟ್ ಸುಮನ ಹೇಳಿದರು.

ಪಟ್ಟಣದ ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ನಡೆದ ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಎಲ್ಲ ಸೇವೆಗಳಿಗಿಂತ ರೋಗಿಗಳ ಸೇವೆಗೈಯುವ ಕಾರ್ಯ ಅತ್ಯಂತ ಪುಣ್ಯದ ಕಾರ್ಯವಾಗಿದ್ದು, ಕುಟುಂಬಸ್ಥರು ಸಹ ರೋಗಿಗಳ ಆರೈಕೆಯಲ್ಲಿ ನಿರ್ಲಕ್ಷ್ಯ ವಹಿಸಿದ ಸಂದರ್ಭದಲ್ಲಿ ದಾದಿಯರು ಮಾತ್ರ ಹಿಂದೇಟು ಹಾಕುವುದಿಲ್ಲ. ಈ ದಿಸೆಯಲ್ಲಿ ದಾದಿಯ ಸೇವೆ ಅತ್ಯಂತ ಶ್ರೇಷ್ಠವಾಗಿದೆ ಎಂದರು.

ದಾದಿಯರಾಗಬೇಕೆಂದರೆ ಮೊದಲು ಉದಾರತೆ, ನಿಸ್ವಾರ್ಥ, ತ್ಯಾಗಮಯ ಗುಣಗಳನ್ನು ಬೆಳೆಸಿಕೊಳ್ಳಬೇಕು, ಇದರೊಂದಿಗೆ ಎಲ್ಲರನ್ನೂ ಅರ್ಥೈಸಿಕೊಂಡು ತಮ್ಮ ಕಾಯಕವನ್ನು ಜವಾಬ್ದಾರಿ, ದಕ್ಷತೆಯಿಂದ ನಿರ್ವಹಿಸಬೇಕೆಂದು ಹೇಳಿದರು.

ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಸೂಪರಿಡೆಂಟ್ ಕೋಕಿಲ ಮಾತನಾಡಿ, ದಾದಿಯರಿಗಿರಬೇಕಾದ ಅರ್ಹತೆ ಬಂದಂತಹ ರೋಗಿಗಳನ್ನು ಹಸನ್ಮುಖರಾಗಿ ಮಾತನಾಡಿಸುವುದರ ಮೂಲಕ ಅವರ ಅರ್ಧ ಕಾಯಿಲೆಗಳನ್ನು ವಾಸಿಗೊಳಿಸಬೇಕು. ಇಂತಹ ದಾದಿಯರನ್ನು ಸೃಷ್ಟಿ ಮಾಡುತ್ತಿರುವ ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ ಕಾಲೇಜಿಗೆ ಧನ್ಯವಾದ ತಿಳಿಸಿದರು.

ಬಾಪೂಜಿ ಸಂಸ್ಥೆಯ ಆಡಳಿತಾಧಿಕಾರಿ ಪವಿತ್ರ.ಪಿ.ಆರ್ ಮಾತನಾಡಿ, ದಾದಿಯರ ಮಹತ್ವವನ್ನು ಮತ್ತು ದಾದಿಯರಲ್ಲಿ ಇರುವಂತಹ ತಾಳ್ಮೆ, ಸಾಮಾಜಿಕ ಕಳಕಳಿ, ನಿಸ್ವಾರ್ಥ ಸೇವಾಮನೋಭಾವವನ್ನು ವಿದ್ಯಾರ್ಥಿಗಳು ಬೆಳಸಿಕೊಂಡಲ್ಲಿ ಮಾತ್ರ ಯಶಸ್ವಿ ದಾದಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ಸಾಧ್ಯ ಎಂದರು.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಿ.ಪಾಪಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಬಾಪೂಜಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮುಸ್ತಾಫ, ಕವನ, ಶ್ವೇತಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.