ಉತ್ತಮ ಆರೋಗ್ಯದ ಅಭಿವೃದ್ಧಿಗೆ ಪೋಷಕಾಂಶಗಳು ಸಹಕಾರಿ: ವಸ್ತ್ರದ

| Published : Aug 05 2025, 01:30 AM IST

ಸಾರಾಂಶ

ಸತ್ವಯುತ ಆಹಾರ ಎಂದರೆ ಪೋಷಕಾಂಶಗಳಿರುವ ಸಮೃದ್ಧ ಆಹಾರ. ಇಂತಹ ಆಹಾರ ಸೇವನೆಯಿಂದ ನಾವು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ದೇಹದ ಬೆಳವಣಿಗೆ ಹಾಗೂ ಆರೋಗ್ಯದ ಅಭಿವೃದ್ಧಿಗೆ ಪೋಷಕಾಂಶಗಳು ಸಹಕಾರಿ. ಮಕ್ಕಳು ಪೋಷಕಾಂಶಗಳುಳ್ಳ ಆಹಾರ ಸೇವನೆ ಮಾಡಬೇಕೆಂದು ಚಿಂತಕಿ ಸುವರ್ಣಾ ವಸ್ತ್ರದ ಹೇಳಿದರು.

ಗದಗ: ಸತ್ವಯುತ ಆಹಾರ ಎಂದರೆ ಪೋಷಕಾಂಶಗಳಿರುವ ಸಮೃದ್ಧ ಆಹಾರ. ಇಂತಹ ಆಹಾರ ಸೇವನೆಯಿಂದ ನಾವು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ದೇಹದ ಬೆಳವಣಿಗೆ ಹಾಗೂ ಆರೋಗ್ಯದ ಅಭಿವೃದ್ಧಿಗೆ ಪೋಷಕಾಂಶಗಳು ಸಹಕಾರಿ. ಮಕ್ಕಳು ಪೋಷಕಾಂಶಗಳುಳ್ಳ ಆಹಾರ ಸೇವನೆ ಮಾಡಬೇಕೆಂದು ಚಿಂತಕಿ ಸುವರ್ಣಾ ವಸ್ತ್ರದ ಹೇಳಿದರು.

ಅವರು ಗದಗ ಜಿಲ್ಲಾ ಅಕ್ಕಮಹಾದೇವಿಯ ಕದಳಿಶ್ರೀ ಮಹಿಳಾ ವೇದಿಕೆಯಿಂದ ಗದುಗಿನ ಸರ್ಕಾರಿ ಶಾಲೆ ನಂ. 16ರಲ್ಲಿ ಜರುಗಿದ ಶ್ರಾವಣ ಮಾಸದ ಅಂಗವಾಗಿ ಅಮೃತ ಭೋಜನ ಜ್ಞಾನ ಸಿಂಚನ ಕಾರ್ಯಕ್ರಮದ ಮಾಲಿಕೆ- 3 ರ ಸರಣಿಯಲ್ಲಿ ಮಕ್ಕಳಿಗೆ ಸಿಹಿ ವಿತರಿಸಿ ಮಾತನಾಡಿದರು.

ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಮೀನಾಕ್ಷಿ ಕೊರವಣ್ಣವರ ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರವಿದ್ದರೆ ಸಾಲದು, ಸರಿಯಾದ ಪ್ರಮಾಣ ಹಾಗೂ ಸಮಯವನ್ನು ಪಾಲಿಸಬೇಕು. ನಿಸರ್ಗದಲ್ಲಿ ನಮಗೆ ಸಿಗುವ ಕೆಲವು ಆಹಾರ, ಹಣ್ಣು, ತರಕಾರಿಗಳನ್ನು ನಾವು ಹೆಚ್ಚು ಸೇವಿಸಬೇಕು. ಓದುವ ಸಮಯದಲ್ಲಿ ಏಕಾಗ್ರತೆ ಇರಲಿ ಎಂದರು. ಪ್ರಾಸ್ತಾವಿಕವಾಗಿ ಕವಿತಾ ದಂಡಿನ ಮಾತನಾಡಿದರು. ಪುಷ್ಪಾ ಪತ್ತಾರ, ನೀಲವ್ವ ಗುರಿಕಾರ ಉಪಸ್ಥಿತರಿದ್ದರು. ಸಹನಾ ಹೊಂಬಳ ಹಾಗೂ ಮಹಾಲಕ್ಷ್ಮೀ ಸೋಮಸಾಳೆ ಪ್ರಾರ್ಥಿಸಿದರು. ಪ್ರೀತಂ ಪಾಟೀಲ, ತನು ಚಲವಾದಿ ವಚನಗಳನ್ನು ಹೇಳಿದರು. ಮುಖ್ಯೋಪಾಧ್ಯಾಯಿನಿ ಸಿ.ಎ. ನಮಾಜಿ ಸ್ವಾಗತಿಸಿದರು. ಸುರೇಖಾ ಮರಕುಂಬಿ ನಿರೂಪಿಸಿದರು. ಅನಿತಾ ಚಿತ್ತಾಮೂರ ವಂದಿಸಿದರು. ಜ್ಯೋತಿ ಅಂಗಡಿ, ಜಾವೀದಾ ತಹಸೀಲ್ದಾರ್, ಪುಷ್ಪಾ ಕಣವಿ, ರೇಣುಕಾ ಸೊಮಣ್ಣವರ, ಗಂಗಾ ತಡಹಾಳ, ಶಂಕ್ರವ್ವ ಸೋಗೀನ, ನಮೃತಾ ಜೋಗಿನ ಮುಂತಾದವರಿದ್ದರು ಮುಂತಾದವರು ಹಾಜರಿದ್ದರು.