ಅಧಿಕ ಮತಗಳಿಂದ ಬಿವೈಆರ್‌ ಗೆಲ್ಲಿಸುವುದೇ ಒಬಿಸಿ ಗುರಿ: ಎಂ.ಡಿ.ಉಮೇಶ

| Published : Mar 30 2024, 12:55 AM IST

ಅಧಿಕ ಮತಗಳಿಂದ ಬಿವೈಆರ್‌ ಗೆಲ್ಲಿಸುವುದೇ ಒಬಿಸಿ ಗುರಿ: ಎಂ.ಡಿ.ಉಮೇಶ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ದೇಶದ ರಕ್ಷಣೆಗೆ ಕೈಗೊಂಡ ನಿಲುವು ಹಾಗೂ ದೇಶದ ಜನತೆ ಆರ್ಥಿಕವಾಗಿ ಸಬಲರಾಗಲು ಕೈಗೊಂಡ ಯೋಜನೆಗಳ ಜನತೆಗೆ ಮುಟ್ಟಿಸುವ ಕೆಲಸ ಪ್ರತಿಯೊಬ್ಬ ಕಾರ್ಯಕರ್ತನೂ ಮಾಡಬೇಕಿದೆ. ದೇಶದ ಹಿತದೃಷ್ಟಿಯಿಂದ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವ ಅವಶ್ಯಕತೆ ಯುವಕರಿಗೆ ಮನದಟ್ಟು ಮಾಡಿ ಮತಯಾಚಿಸಲಿದ್ದೇವೆ.

ಕನ್ನಡಪ್ರಭ ವಾರ್ತೆ ಸೊರಬ

ಜಿಲ್ಲೆಯಲ್ಲಿರುವ ಹಿಂದುಳಿದ ವರ್ಗಗಳು ಬಿಜೆಪಿಯಲ್ಲಿ ಸಂಘಟಿತವಾಗಿದ್ದು, ಲೋಕಸಭಾ ಚುನಾವಣೆ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಬಿ.ವೈ. ರಾಘವೇಂದ್ರರನ್ನು ಅಧಿಕ ಮತಗಳ ಅಂತರದಿಂದ ಗೆಲ್ಲಿಸುವುದು ನಮ್ಮೆಲ್ಲರ ಗುರಿ. ಈ ಮೂಲಕ ಒಬಿಸಿ ಬಲ ಬಹಿರಂಗಪಡಿಸುತ್ತೇವೆ ಎಂದು ಹಿಂದುಳಿದ ವರ್ಗಗಳ ಮೋರ್ಚಾ ತಾಲೂಕು ಅಧ್ಯಕ್ಷ ಎಂ.ಡಿ.ಉಮೇಶ ಹೇಳಿದರು.

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಹಿಂದುಳಿದ ವರ್ಗಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ ಬಿಜೆಪಿ ಯಾವುದೇ ಒಂದು ವರ್ಗ ಅಥವಾ ಕೋಮಿನ ಪಕ್ಷವಲ್ಲ. ವಿವಿಧ ಜಾತಿ-ಜನಾಂಗಗಳ ಒಟ್ಟು ಬಲವೇ ಬಿಜೆಪಿಯಲ್ಲಿ ಅಡಗಿದೆ. ಜಿಲ್ಲಾ ಕಾಂಗ್ರೆಸ್‌ನಲ್ಲಿ ಹಿಂದುಳಿದ ವರ್ಗಗಳ ನಾಯಕರಿಲ್ಲದೇ ಸೊರಗಿದೆ. ಜಿಲ್ಲೆಯಲ್ಲಿ ಸುಮಾರು ಎಂಟೂವರೆ ಲಕ್ಷಕ್ಕೂ ಅಧಿಕ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ ಮತಗಳಿವೆ. ಅವುಗಳಲ್ಲಿ ಬಿಜೆಪಿಗೆ ೬ ರಿಂದ ೭ ಲಕ್ಷ ಮತಗಳು ಚಲಾವಣೆಯಾಗುವಂತೆ ಸಂಘಟಿತರಾಗಿ ಬಿ.ವೈ.ರಾಘವೇಂದ್ರರಿಗೆ ಸುಲಭ ಜಯ ತಂದು ಕೊಡೋಣ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ದೇಶದ ರಕ್ಷಣೆಗೆ ಕೈಗೊಂಡ ನಿಲುವು ಹಾಗೂ ದೇಶದ ಜನತೆ ಆರ್ಥಿಕವಾಗಿ ಸಬಲರಾಗಲು ಕೈಗೊಂಡ ಯೋಜನೆಗಳ ಜನತೆಗೆ ಮುಟ್ಟಿಸುವ ಕೆಲಸ ಪ್ರತಿಯೊಬ್ಬ ಕಾರ್ಯಕರ್ತನೂ ಮಾಡಬೇಕಿದೆ. ದೇಶದ ಹಿತದೃಷ್ಟಿಯಿಂದ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವ ಅವಶ್ಯಕತೆ ಯುವಕರಿಗೆ ಮನದಟ್ಟು ಮಾಡಿ ಮತಯಾಚಿಸಲಿದ್ದೇವೆ. ನಮ್ಮಲ್ಲಿರುವ ಭಿನ್ನಾಭಿಪ್ರಾಯ ಬದಿಗೊತ್ತಿ ಗೆಲುವಿಗಾಗಿ ಸನ್ನದ್ಧರಾಗೋಣ ಎಂದರು.

ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಕೆ.ಜಿ. ಪ್ರಶಾಂತ್, ದೇಶದಲ್ಲಿ ಶೇ. ೫೨ರಷ್ಟು ಮಂದಿ ಹಿಂದುಳಿದ ವರ್ಗದವರಿದ್ದಾರೆ. ದೇಶದ ಆರ್ಥಿಕ ವ್ಯವಸ್ಥೆ ಮತ್ತು ರಾಜಕಾರಣ ನಿಂತಿರುವುದು ಒಬಿಸಿಯಿಂದ ಆದ್ದರಿಂದ ಮುಂದಿನ ೩೭ ದಿನಗಳಲ್ಲಿ ತಮ್ಮ ತಮ್ಮ ನಾಯಕತ್ವದೊಂದಿಗೆ ಚುನಾವಣೆಯ ಒಂದು ಸ್ಪರ್ಧೆ ಎಂದು ಅರಿತು ಅಭ್ಯರ್ಥಿ ಗೆಲುವಿಗೆ ಮುನ್ನಡೆಯೋಣ ಎಂದರು. ೨೦೧೮ರಲ್ಲಿ ಬಿಜೆಪಿ ಅಭ್ಯರ್ಥಿ ಕುಮಾರ ಬಂಗಾರಪ್ಪರಿಗೆ ಬಂದ ಮತಗಳಿಗಿಂತಲೂ ಹೆಚ್ಚು ಬಿ.ವೈ.ರಾಘವೇಂದ್ರರಿಗೆ ಚಲಾವಣೆಯಾಗುವಂತೆ ಮಾಡುವುದು ಎಲ್ಲರ ಜವಾಬ್ದಾರಿ ಎಂದರು.

ಈ ಸಂದರ್ಭದಲ್ಲಿ ತಾಲೂಕು ಹಿಂದುಳಿದ ವರ್ಗಗಳ ಮೋರ್ಚಾ ಪದಗ್ರಹಣ ಕಾರ್ಯಕ್ರಮ ನಡೆಯಿತು. ಉಪಾಧ್ಯಕ್ಷರಾಗಿ ರೇವಣಪ್ಪ ಮಾಸ್ತರ್, ಕೃಷ್ಣಮೂರ್ತಿ ಸಿಗ್ಗಾ, ಮಂಜುನಾಥ ಗುಡವಿ, ಪ್ರಧಾನ ಕಾರ್ಯದರ್ಶಿಗಳಾಗಿ ವೈ.ಜಿ.ಗುರುಮೂರ್ತಿ, ರಾಜು ನಡಹಳ್ಳಿ, ಕಾರ್ಯದರ್ಶಿಗಳಾಗಿ ಲಕ್ಷ್ಮಣ್‌ ಕುಪ್ಪಗಡ್ಡೆ, ರಂಗನಾಥ ಮೊಘವೀರ, ಸದಸ್ಯರಾಗಿ ಶಿವಕುಮಾರ, ನಾಗೇಂದ್ರಪ್ಪ, ಟೀಕಪ್ಪಗೌಡ, ಗುರುಮೂರ್ತಿ ಹಿರೇಶಕುನ, ಗಣೇಶ ಚಿಕ್ಕಶಕುನ, ಶಿವಕುಮಾರ ದೂಗೂರು, ಲೋಕೇಶ್, ಕೆ.ಜಿ. ಬಸವರಾಜ, ಮಂಜಪ್ಪ ಕರಡಿಗೇರಿ, ಚಂದ್ರಶೇಖರ, ರಂಗಪ್ಪ ಮನವೇಲ್, ಬಸವರಾಜ ಹಿರೇಶಕುನ, ಅನಿಲ್ ಹುಲ್ತಿಕೊಪ್ಪ ಅಧಿಕಾರ ಸ್ವೀಕರಿಸಿದರು.

ಜಿಲ್ಲಾ ಸಹ ಪ್ರಭಾರ ಶ್ರೀನಿವಾಸ್, ಮಂಡಲ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕಡಸೂರು, ಮುಖಂಡರಾದ ರಾಜಶೇಖರ ಗಾಳಿಪುರ, ಎ.ಎಲ್. ಅರವಿಂದ್, ನಿರಂಜನ ಕುಪ್ಪಗಡ್ಡೆ, ಮಹಾಬಲೇಶ್ ತಡಗಳಲೆ, ಡಿ. ಶಿವಯೋಗಿ, ಆನಂದ್ ಜನ್ನೆಹಕ್ಲು, ಮಹಾಬಲೇಶ್ವರ ತಡಗಳಲೆ ಸೇರಿ ಇತರರಿದ್ದರು.