ಭರವಸೆ ಈಡೇರಿಸಲಾಗದವರು ಗ್ಯಾರಂಟಿ ಯೋಜನೆ ಬಗ್ಗೆ ವಿರೋಧ

| Published : Apr 25 2024, 01:09 AM IST

ಸಾರಾಂಶ

ಜನತೆಗೆ ಕೊಟ್ಟ ಭರವಸೆಗಳನ್ನು ಈಡೇರಿಸಲಾಗದವರು ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳಿಗೆ ಬಗ್ಗೆ ವಿರೋಧ ಮಾಡುತ್ತಿದ್ದಾರೆ ಎಂದು ಸಚಿವ ಸತೀಶ ಜಾರಕಿಹೊಳಿ ಲೇವಡಿ ಮಾಡಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಜನತೆಗೆ ಕೊಟ್ಟ ಭರವಸೆಗಳನ್ನು ಈಡೇರಿಸಲಾಗದವರು ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳಿಗೆ ಬಗ್ಗೆ ವಿರೋಧ ಮಾಡುತ್ತಿದ್ದಾರೆ ಎಂದು ಸಚಿವ ಸತೀಶ ಜಾರಕಿಹೊಳಿ ಲೇವಡಿ ಮಾಡಿದರು.

ಎನ್‌ಸಿಪಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉದ್ದೇಶಿಸಿ ಮಾತನಾಡಿದ ಅವರು, ಈ ಗ್ಯಾರಂಟಿಗಳು ಬಡಜನರ ಬದುಕಿಗೆ ಆಸರೆ ಆಗಿವೆ. ಚಿಕ್ಕೋಡಿ ಭಾಗದ ಹಿರಿಯರಾದ ನೀವು ಮಗಳ ಗೆಲುವಿಗೆ ಬೆಂಬಲ ನೀಡಬೇಕು. ಈ ಭಾಗದದಲ್ಲಿ ಕೈ ಗೆ ಶಕ್ತಿ ತುಂಬಿದರೇ ಪುತ್ರಿ ಗೆಲುವು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಹಾಗೂ ಪುತ್ರಿ ಪ್ರಿಯಂಕಾ ಜಾರಕಿಹೊಳಿ ಅವರನ್ನು ಭಾರೀ ಬಹು ಮತಗಳ ಅಂತರದಿಂದ ಗೆಲುವು ಸಾಧಿಸಲು ಗಣ್ಯರು, ಹಿರಿಯ ಮುಖಂಡರು ಸಹಾಯ-ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಈ ವೇಳೆ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಮಾಜಿ ಶಾಸಕರು ಕಾಕಾಸಾಹೇಬ್ ಪಾಟೀಲ್, ಮಾಜಿ ಸಚಿವರು ವೀರಕುಮಾರ ಪಾಟೀಲ್, ಪ್ರಭಾಕರ್ ಕೊರೆ, ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಪಪ್ಪು ಪಾಟೀಲ್, ಎನ್‌ಸಿಪಿ ಮುಖಂಡರಾದ ಉತ್ತಮ ಪಾಟೀಲ್, ನಿಪ್ಪಾಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಜೇಶ್ ಕದಂ, ನಗರಸೇವಕರಾದ ರವಿ ಶಿಂಧೆ, ಸಂಜಯ್ ಸಾಂಗಾವಕರ್, ಸಂಜಯ್ ಪಾವಲೆ, ದಿಲೀಪ್ ಪಟಾಡೇ ಸೇರಿ ಪ್ರಮುಖರು ಉಪಸ್ಥಿತರಿದ್ದರು.

ಸಚಿವ ಸತೀಶ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಹಲವು ಗಣ್ಯರನ್ನು ಸಚಿವ ಸತೀಶ ಜಾರಕಿಹೊಳಿ ಅವರು ಭೇಟಿ ಮಾಡಿ ಚುನಾವಣೆ ಬಗ್ಗೆ ಕೆಲಹೊತ್ತು ಚರ್ಚೆ ನಡೆಸಿದರು. ನಿಪ್ಪಾಣಿ ನಗರದ ಹಿರಿಯರು ಹಾಗೂ ಪ್ರಖ್ಯಾತ ವಕೀಲರು ಅವಿನಾಶ್ ದತ್ತಾ ಕಟ್ಟಿ, ನಗರ ಸಭೆಯ ಮಾಜಿ ಅಧ್ಯಕ್ಷರು ಪ್ರವೀಣ ಭಾಟಲೆ, ವಿಎಸ್ಎಂ ವಿದ್ಯಾಸಂಸ್ಥೆಯ ಅಧ್ಯಕ್ಷರು, ವೀರಶೈವ ಸಮಾಜದ ಮುಖಂಡರಾದ ಚಂದ್ರಕಾಂತ ಕೋಠಿವಾಲೆ, ನಿಪ್ಪಾಣಿಯ ವೀರಶೈವ ಸಮಾಜದ ಮುಖಂಡರು, ವೈದ್ಯರಾದ ಚಂದ್ರಕಾಂತ ಕುರಬೆಟ್ಟ ಮನೆಗೆ ಭೇಟಿ ನೀಡಿ, ಚುನಾವಣೆ ಬಗ್ಗೆ ಚರ್ಚೆ ನಡೆಸಿದರು. ಬಳಿಕ ನಿಪ್ಪಾಣಿ ನಗರಸಭೆಯ ನಗರಸೇವಕರು, ಎನ್‌ಸಿಪಿ ಪಕ್ಷದ ಮುಖಂಡರಾದ ಶೇರು ಬಡೇಘರ ಹಾಗೂ ರಾಜೇಶ್ ಕದಮ ನಿವಾಸಕ್ಕೆ ಭೇಟಿ ನೀಡಲಾಯಿತು. ನಿಪ್ಪಾಣಿ ನಗರಸಭೆಯ ಮಾಜಿ ನಗರಸೇವಕರು, ಮುಸ್ಲಿಂ ಸಮಾಜದ ಹಿರಿಯ ಮುಖಂಡರಾದ ರಾಜ ಪಠಾಣ ಅವರು ತಮ್ಮ ನೂರಾರು ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷವನ್ನು ತೊರೆದು ಸಚಿವ ಸತೀಶ ಜಾರಕಿಹೊಳಿ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕಾರ್ಯಗಳನ್ನು ಮಾಡಲಾಗುವುದು. ಕಾಂಗ್ರೆಸ್‌ಗೆ ಮತ ನೀಡುವ ಮೂಲಕ ಆಯ್ಕೆ ಮಾಡಿದಲ್ಲಿ ಕ್ಷೇತ್ರದ ಜನತೆಯ ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ.

-ಸತೀಶ ಜಾರಕಿಹೊಳಿ,

ಸಚಿವರು.