ಸಿರವಾರ: ಶಿಶು ಪಾಲನಾ ಕೇಂದ್ರಕ್ಕೆ ಅಧಿಕಾರಿ ಭೇಟಿ, ಪರಿಶೀಲನೆ
Author : KannadaprabhaNewsNetwork
Published : Feb 15 2024, 01:15 AM IST
14ಕೆಪಿಎಸ್ಡಬ್ಲ್ಯೂಆರ್ 01 | Kannada Prabha
Image Credit: KP
ಸಿರವಾರ ತಾಲೂಕಿನಲ್ಲಿರುವ ಕೂಸಿನ ಮನೆ ಕೇಂದ್ರಗಳಿಗೆ ರಾಜ್ಯ ಮೊಬೈಲ್ ಕ್ರಷ್ ಸಂಸ್ಥೆಯ ತರಬೇತುದಾರರಾದ ವಿಜಯಲಕ್ಷ್ಮೀ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕೂಸಿನ ಮನೆಯ ಆರೈಕೆದಾರರು ವಿದ್ಯಾರ್ಹತೆ ಹಾಗೂ ತರಬೇತಿ ಪಡೆದ ಬಗ್ಗೆ ಮಾಹಿತಿ ಪಡೆದರು. ಆರೈಕೆದಾರರು ಜವಾಬ್ದಾರಿ ಹಾಗೂ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು.
ಸಿರವಾರ: ತಾಲೂಕಿನ ಅತ್ತನೂರು, ಗಣದಿನ್ನಿ, ಚಾಗಬಾವಿ, ಕೆ.ಗುಡದಿನ್ನಿ , ಹರವಿ ಗ್ರಾಮ ಪಂಚಾಯಿತಿಗಳಲ್ಲಿ ಅನುಷ್ಠಾನ ಮಾಡಿದ ಕೂಸಿನ ಮನೆ ಕೇಂದ್ರಗಳಿಗೆ ರಾಜ್ಯ ಮೊಬೈಲ್ ಕ್ರಷ್ ಸಂಸ್ಥೆಯ ತರಬೇತುದಾರರಾದ ವಿಜಯಲಕ್ಷ್ಮೀ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಅವರು, ಈಗಾಗಲೇ ಖರೀದಿ ಮಾಡಿರುವ ಸಾಮಾಗ್ರಿಗಳ ಜೊತೆಗೆ ಇನ್ನೂ ಸ್ವಲ್ಪ ಖರೀದಿ ಮಾಡಬೇಕು. ರಾಯಚೂರು ಜಿಲ್ಲೆಯ ಆಹಾರದ ಮೆನು ಪ್ರಕಾರ ಆಹಾರ ವಿತರಣೆ ಮಾಡಲು ಸೂಚಿಸಿದರು.
ಕೂಸಿನ ಮನೆಯ ಆರೈಕೆದಾರರು ವಿದ್ಯಾರ್ಹತೆ ಹಾಗೂ ತರಬೇತಿ ಪಡೆದ ಬಗ್ಗೆ ಮಾಹಿತಿ ಪಡೆದರು. ಆರೈಕೆದಾರರು ಜವಾಬ್ದಾರಿ ಹಾಗೂ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು.
ಹರವಿ ಪಿಡಿಓ ಪ್ರದೀಪ ನಂದರೆಡ್ಡಿ, ಶರೀಫ್, ಸೈಯದ್, ಕಾರ್ಯದರ್ಶಿ ಮಲ್ಲಪ್ಪ, ಗ್ರಾಪಂ ಅಧ್ಯಕ್ಷರು, ಸದಸ್ಯರು, ಐಇಸಿ ಸಂಯೋಜಕರು ರಾಜೇಂದ್ರ ಕುಮಾರ, ಬಿಎಪ್ಟಿಗಳು, ಗ್ರಾಮ ಕಾಯಕ ಮಿತ್ರರು, ಶಿಶುಪಾಲನ ಕೇಂದ್ರದ ಮಕ್ಕಳು, ಆರೈಕೆದಾರರು ಹಾಜರಿದ್ದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.