ರಂಗಮಂದಿರದ ಸ್ಥಿತಿ ವೀಕ್ಷಿಸಿದ ಅಧಿಕಾರಿಗಳು

| Published : Mar 16 2024, 01:46 AM IST

ಸಾರಾಂಶ

ಗುಳೇದಗುಡ್ಡ: ಕಳೆದ ನಾಲ್ಕು ದಶಕಗಳಿಂದ ಅಪೂರ್ಣ ಸ್ಥಿತಿಯಲ್ಲಿರುವ, ಶಿಥಿಲಾವಸ್ಥೆ ತಲುಪಿರುವ ನಿರುಪಯುಕ್ತ ಕಂದಗಲ್ ಹನಮಂತರಾಯ ರಂಗಮಂದಿರವನ್ನು ಶುಕ್ರವಾರ ಬಾಗಲಕೋಟೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಕರಣಕುಮಾರ ಜೈನಾಪೂರ ಮತ್ತು ಕೆಆರ್‌ಐಡಿಎಲ್ ಅಭಿಯಂತರ ಮೈಬೂಬ್ ಯಂಡಿಗೇರಿ ವೀಕ್ಷಿಸಿ ಸ್ಥಿತಿಗತಿ ಅವಲೋಕಿಸಿದರು.

ಕನ್ನಡಪ್ರಭವಾರ್ತೆ ಗುಳೇದಗುಡ್ಡ

ಕಳೆದ ನಾಲ್ಕು ದಶಕಗಳಿಂದ ಅಪೂರ್ಣ ಸ್ಥಿತಿಯಲ್ಲಿರುವ, ಶಿಥಿಲಾವಸ್ಥೆ ತಲುಪಿರುವ ನಿರುಪಯುಕ್ತ ಕಂದಗಲ್ ಹನಮಂತರಾಯ ರಂಗಮಂದಿರವನ್ನು ಶುಕ್ರವಾರ ಬಾಗಲಕೋಟೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಕರಣಕುಮಾರ ಜೈನಾಪೂರ ಮತ್ತು ಕೆಆರ್‌ಐಡಿಎಲ್ ಅಭಿಯಂತರ ಮೈಬೂಬ್ ಯಂಡಿಗೇರಿ ವೀಕ್ಷಿಸಿ ಸ್ಥಿತಿಗತಿ ಅವಲೋಕಿಸಿದರು.

ರಂಗಮಂದಿರ ಪಕ್ಕದ ರಸ್ತೆ ಎತ್ತರದಲ್ಲಿದ್ದು ರಂಗಮಂದಿರ ತಗ್ಗು ಪ್ರದೇಶದಲ್ಲಿದೆ. ಹೀಗಾಗಿ ವಿನ್ಯಾಸವನ್ನು ತಕ್ಕಮಟ್ಟಿಗೆ ಬದಲಿಸಿ ಅದಕ್ಕೆ ಹೊಂದುವಂತೆ ಅಂದಾಜು ಪತ್ರಿಕೆ ಮಾಡಿ ಇಲಾಖೆಗೆ ಸಲ್ಲಿಸುವುದಾಗಿ ಅಭಿಯಂತರ ಮೈಬೂಬ ಯಂಡಿಗೇರಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರಂಗಮಂದಿರ ನಿರ್ಮಾಣಕ್ಕೆ ಒಂದೇ ಸಲ ಅನುದಾನ ಬಿಡುಗಡೆಯಾಗುವುದಿಲ್ಲ. ಹಂತಹಂತವಾಗಿ ಮಂಜೂರು ಪಡೆಯಬೇಕು. ಹಿಂದಿನ ಕಾಮಗಾರಿ ಸಂಪೂರ್ಣ ಮುಗಿಸಿದ ಮೇಲೆ ಮುಂದುವರೆದ ಕಾಮಗಾರಿಗೆ ಅನುದಾನ ಮಂಜೂರಿಗೆ ಬರೆಯಬೇಕು. ಸದ್ಯ ಇರುವ ಅನುದಾನ ಬಳಸಲಿ. ರಂಗಮಂದಿರ ಉತ್ತಮ ರೀತಿಯಲ್ಲಿ ನಿರ್ಮಾಣವಾಗಲಿ. ಶಾಸಕರ ಹಾಗೂ ಪುರಸಭೆ ಅನುದಾನ ಬಂದರೂ ಅನುಕೂಲವಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಕರಣಕುಮಾರ ಜೈನಾಪೂರ ಹೇಳಿದರು.

ದೂರವಾಣಿ ಮುಖಾಂತರ ಪುರಸಭೆ ಅಭಿಯಂತರ ಕಿತ್ತಲಿಯವರನ್ನು ಸಂಪರ್ಕಿಸಿ ಜೈನಾಪೂರ ಮಾಹಿತಿ ಪಡೆದರು. ಪ್ರಸಿದ್ಧ ನಾಟಕಕಾರ ಕಂದಗಲ್ ಹನಮಂತರಾಯರ ಹೆಸರಿನ ರಂಗಮಂದಿರ ಇಲ್ಲಿನ ಕಲಾವಿದರ ಕಲಾಪ್ರದರ್ಶನಕ್ಕೆ ಮತ್ತು ರಂಗ ಚಟುವಟಿಕೆಗಳಿಗೆ ಆದಷ್ಟು ಬೇಗ ಸಿಗುವಂತಾಗಲಿ ಎಂದು ರಂಗಾಸಕ್ತರು ಅಧಿಕಾರಿಗಳಿಗೆ ಆಗ್ರಹಿಸಿದರು.