ಕಾರ್ಮಿಕರ ಸಂಬಳಕ್ಕೆ ಕೈ ಹಾಕುವ ಬಳ್ಳಾರಿ ಥರ್ಮಲ್‌ ಪವರ್‌ ಸ್ಟೇಷನ್‌ ಅಧಿಕಾರಿಗಳು

| Published : Sep 21 2024, 01:55 AM IST

ಕಾರ್ಮಿಕರ ಸಂಬಳಕ್ಕೆ ಕೈ ಹಾಕುವ ಬಳ್ಳಾರಿ ಥರ್ಮಲ್‌ ಪವರ್‌ ಸ್ಟೇಷನ್‌ ಅಧಿಕಾರಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಖಾನೆ ಅಧಿಕಾರಿಗಳು ತಮಗೆ ಲಕ್ಷಾಂತರ ರುಪಾಯಿ ಸಂಬಳ ಇದ್ದರೂ ಕಷ್ಟ ಪಟ್ಟು ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಬಡಪಾಯಿ ಕಾರ್ಮಿಕರ ಸಂಬಳಕ್ಕೆ ಕೈಹಾಕಿರುವುದು ನಾಚಿಕೆಗೇಡು.

ಕುರುಗೋಡು: ಬಳ್ಳಾರಿ ಥರ್ಮಲ್‌ ಪವರ್‌ ಸ್ಟೇಷನ್‌ (ಬಿಟಿಪಿಎಸ್) ಕಾರ್ಖಾನೆ ಅಧಿಕಾರಿಗಳು ತಮಗೆ ಲಕ್ಷಾಂತರ ರುಪಾಯಿ ಸಂಬಳ ಇದ್ದರೂ ಕಷ್ಟ ಪಟ್ಟು ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಬಡಪಾಯಿ ಕಾರ್ಮಿಕರ ಸಂಬಳಕ್ಕೆ ಕೈಹಾಕಿರುವುದು ನಾಚಿಕೆಗೇಡು. ಕೂಡಲೇ ಅಂತಹ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಕುಡತಿನಿ ಪಪಂ ಮಾಜಿ ಅಧ್ಯಕ್ಷ, ಗುತ್ತಿಗೆ ಕಾರ್ಮಿಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿ.ರಾಜಶೇಖರ ಆಕ್ರೋಶ ವ್ಯಕ್ತಪಡಿಸಿದರು.ಸಮೀಪದ ಕುಡಿತಿನಿಯ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಎದುರು ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ದುಡಿಯುವ ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಕಾರ್ಖಾನೆ ಎದುರು ನ್ಯಾಯ ಸಿಗುವವರೆಗೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಿಶ್ಚಿತ ಎಂದರು.

ಸುಮಾರು 10 ವರ್ಷಗಳಿಂದ ಕನಿಷ್ಠ ವೇತನ ಕೊಡುವಲ್ಲಿ ತಾರತಮ್ಯವಾಗಿದೆ. ಸರ್ಕಾರ ನಿಗದಿಪಡಿಸಿದ ಹಾಗೂ ಪರಿಷ್ಕರಿಸಿದ ವೇತನ ಭತ್ಯೆ ನೀಡದಿರುವುದು, ಸರ್ಕಾರದ ನಿಯಮಾವಳಿ ಅನುಸಾರ 10 ವರ್ಷದಿಂದ ನುರಿತವಲ್ಲ ಎಂದು ದೂರಿ, ನಾಲ್ಕು ಹಂತದ ಕಾರ್ಮಿಕರಿಗೆ ಸಮನಾದ ವೇತನ ನೀಡುತ್ತಿಲ್ಲ. ಪ್ರತಿ ಕಾರ್ಮಿಕರ ಹಾಜರಾತಿಯನ್ನುಗುತ್ತಿಗೆದಾರರು ನಿರ್ವಹಿಸುವ ಜತೆಗೆ ಅದರ ಪ್ರತಿಯನ್ನು ಆಯಾ ವಿಭಾಗದ ನಿಯಂತ್ರಣಾಧಿಕಾರಿಗಳು ನಿರ್ವಹಿಸಬೇಕು ಎಂದು ಆಗ್ರಹಿಸಿದರು.

15 ವರ್ಷ ಕೆಲಸ ಮಾಡಿದರೂ ಅವರಿಗೆ ನುರಿತ ಅರ್ಹತೆ ನೀಡುತ್ತಿಲ್ಲ. ಸುಮಾರು 15 ವರ್ಷಗಳ ಅವಧಿಗೆ ಗುತ್ತಿಗೆ ಕಾರ್ಮಿಕರಾಗಿ ಕೆಲಸ ನಿರ್ವಹಿಸಿದ್ದರೂ ಅವರ ಪರಿಣಿತಿಯನ್ನು ಸ್ಕಿಲ್ಡ್ ಎಂದು ಪರಿಗಣಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಗುತ್ತಿಗೆದಾರರು ಕೇವಲ ಕೆಲ ಕಾರ್ಮಿಕರಿಂದ ಕೆಲಸ ತೆಗೆದುಕೊಂಡು ಟೆಂಡರ್ ನಲ್ಲಿ ಸಮೂದಿಸಿದ ಸಂಖ್ಯೆಗಿಂತ ಕಡಿಮೆ ಸಂಖ್ಯೆಯಿಂದ ಕೆಲಸ ನಿರ್ವಹಿಸಿ, ನಿಗಮದಿಂದ ಹೆಚ್ಚಿನ ಪಾವತಿ ಪಡೆಯುತ್ತಿರುವು ದುರಂತವಾಗಿದೆ. ಆಯಾ ಗುತ್ತಿಗೆದಾರರು ತಮ್ಮ ಟೆಂಡರ್ ನಲ್ಲಿ ಸಾರಿಗೆ ವ್ಯವಸ್ಥೆ ಬಗ್ಗೆ ನಮೂದಿಸಿದ್ದಲ್ಲಿ ಸಾರಿಗೆ ವ್ಯವಸ್ಥೆ ಮಾಡುವುದು ಅವಶ್ಯಕವಾಗಿದೆ. ಏಂಟು ತಾಸಿನ ನಂತರದಲ್ಲಿ ಹೆಚ್ಚಿನ ಅವಧಿಗೆ ಕೆಲಸ ಮಾಡಿದ ಕಾರ್ಮಿಕರಿಗೆ ಓಟಿ ಕೊಡಬೇಕು. ಗುತ್ತಿಗೆದಾರರು ಕಾರ್ಮಿಕರ ಮೇಲೆ ದಬ್ಬಾಳಿಕೆ ಮತ್ತು ದೌರ್ಜನ್ಯ ಮಾಡುತ್ತಿರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ತಾಲೂಕು ಕಾರ್ಮಿಕರ ವಿಭಾಗದ ಗೌರವಾಧ್ಯಕ್ಷ ವೆಂಕಟರಮಣ ಬಾಬು, ಸಿಐಟಿಯು ಕಾರ್ಮಿಕರ ತಾಲೂಕು ಅಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿದರು.

ಕಾರ್ಖಾನೆ ಪೊಲೀಸ್‌ ಕಾರ್ಯಾಲಯದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಕಾರ್ಮಿಕರ ಕೆಲವು ಬೇಡಿಕೆಗಳಾದ ವೇತನಸಹಿತ ರಜೆ, ಇಎಸ್ಐ ಆರೋಗ್ಯ ಸೌಲಭ್ಯ ಸಮರ್ಪಕ ಅನುಷ್ಠಾನ, ಸ್ಕೀಲ್ಡ್ ಮತ್ತು ಅನ್ ಸ್ಕಿಲ್ಡ್ ಎನ್ನದೇ ತಾರತಮ್ಯರಹಿತ ವೇತನ ಈಡೇರಿಸುವಂತೆ ಕಾರ್ಮಿಕ ಮುಖಂಡರು ಕೇಳಿದರು. ಇದಕ್ಕೆಉತ್ತರವಾಗಿ ಕಾರ್ಖಾನೆ ಅಧಿಕಾರಿಗಳು ಕೆಲವು ಬೇಡಿಕೆಗಳಿಗೆ ಕಾಲಾವಕಾಶ ಕೇಳಿ ಇನ್ನುಳಿದ ಬೇಡಿಕೆಗಳನ್ನು ಈಡೇರಿಸಲು ಚರ್ಚೆ ನಡೆಸಿ ತೀರ್ಮಾನಿಸಿ ವರದಿ ನೀಡುತ್ತೇವೆ ಎಂದಾಗ ಅಧಿಕಾರಿಗಳು ಮತ್ತು ಕಾರ್ಮಿಕರ ನಡುವೆ ಮಾತಿನ ಚಕಮಕಿ ನಡೆಯಿತು.

ನಂತರ ಸಭೆಯಿಂದ ಹೊರ ನಡೆದ ಪ್ರತಿಭಟನಾಕಾರರು. ಪಪಂ ಉಪಾಧ್ಯಕ್ಷ ಕನ್ನಿಕೇರಿ ಪಂಪಾಪತಿ, ಪೊಲೀಸ್ ಇಲಾಖೆ ಅಧಿಕಾರಿಗಳು, ಮುಖಂಡರಾದ ಚಂದ್ರಯ್ಯ, ದೊಡ್ಡಬಸಪ್ಪ, ಮೆಟ್ರಿಕ್ ವೆಂಕಟೇಶ, ಜಿ.ಪ್ರತಾಪ್, ಮಹಾಂತೇಶ, ದೊಡ್ಡಪ್ಪ ಹಾಗೂ ನೂರಾರು ಸಂಖ್ಯೆಯ ಕಾರ್ಮಿಕರು ಇದ್ದರು.