ಕನ್ನಡಪ್ರಭ ವಾರ್ತೆ ಮುಧೋಳ

ಮುಧೋಳ ನಗರದ ವಿವಿಧ ಹೊಟೇಲ್ ಮತ್ತು ಖಾನಾವಳಿಗಳ ಮೇಲೆ ಮಂಗ‍ಳವಾರ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿ 9 ಗೃಹ ಬಳಕೆಯ ಸಿಲಿಂಡರ್‌ ವಶಪಡಿಸಿಕೊಂಡಿದ್ದಾರೆ.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ ಹಾಗೂ ತಹಸೀಲ್ಡಾರ್‌ ಚಿಕ್ಕಪ್ಪ ನಾಯಿಕ ಅವರ ಮಾರ್ಗದರ್ಶನದ ಮೇರೆಗೆ ಮುಧೋಳ ತಾಲೂಕು ಆಹಾರ ಇಲಾಖೆಯ ನಿರೀಕ್ಷಕರಾದ ರತ್ನಾ ಬಡಿಗೇರ ಹಾಗೂ ಸತ್ಯವ್ವ ಮಾದರ, ಆಹಾರ ಶಿರಸ್ತೆದಾರ ಡಿ.ಬಿ. ದೇಶಪಾಂಡೆ, ಪುಡ್ ಸೆಪ್ಟಿ ಆಫೀಸರ್ ಸದಾಶಿವ ಹಡಪದ, ನಗರಸಭೆ ಆರೋಗ್ಯ ನಿರೀಕ್ಷಕರಾದ ಸಿದ್ದರಾಜ ಅರಳಿಮಟ್ಟಿ ಮತ್ತು ಸುಭಾಷ ಕಾಂಬಳೆ ಇವರ ತಂಡವು ಖಚಿತ ಮಾಹಿತಿ ಪಡೆದುಕೊಂಡು ಮಂಗಳವಾರ ನಗರದ ವಿವಿಧ ಹೊಟೇಲ್ ಮತ್ತು ಖಾನಾವಳಿಗಳ ಮೇಲೆ ದಿಢೀರ್‌ ದಾಳಿ ಮಾಡಿ ಗೃಹ ಬಳಕೆಯ ಒಟ್ಟು 9 ಸಿಲಿಂಡರ್ ವಶಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಜಮಖಂಡಿ ಉಪ ವಿಭಾಗಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ.

ದಿಲ್ಲಿ ದರ್ಬಾರ್‌-2, ಶ್ರೀ ಲಕ್ಷ್ಮೀ ಲಿಂಗಾಯತ ಖಾನಾವಳಿ-2, ಅನ್ನಪೂರ್ಣೆಶ್ವರಿ ಹೊಟೇಲ್-2, ಶಬರಿ ಸಾಗರ ಹೊಟೇಲ್-1, ಪ್ರಶಾಂತ ಖಾನಾವಳಿ-1, ಶ್ರೀ ಶಿವಶಕ್ತಿ ರೈಸ್ ಸೆಂಟರ್-1 ಒಟ್ಟು 9 ಸಿಲಿಂಡರ್ ಅಧಿಕಾರಿಗಳು ವಪಡಿಸಿಕೊಂಡಿದ್ದಾರೆ.