ಪ್ರಜಾಸೇವಾ ಅಭಿಯಾನದಲ್ಲಿ ಜನರು ನೀಡಿದಂತಹ ಸಮಸ್ಯೆಗಳ ಅರ್ಜಿಗಳ ಬಗ್ಗೆ ಅಧಿಕಾರಿಗಳು ಉದಾಸೀನ ತೋರದೇ ಜವಾಬ್ದಾರಿಯಿಂದ ಪ್ರತಿಕ್ರಿಯಿಸಿ ಅವರ ಅರ್ಜಿಗಳ ಬಗ್ಗೆ ತೆಗೆದುಕೊಂಡ ಕ್ರಮದ ಬಗ್ಗೆ ಅವರಿಗೆ ಮಾಹಿತಿ ನೀಡಿ ಎಂದು ಶಾಸಕ ಸಿ.ಬಿ.ಸುರೇಶ ಬಾಬು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡ ಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ಪ್ರಜಾಸೇವಾ ಅಭಿಯಾನದಲ್ಲಿ ಜನರು ನೀಡಿದಂತಹ ಸಮಸ್ಯೆಗಳ ಅರ್ಜಿಗಳ ಬಗ್ಗೆ ಅಧಿಕಾರಿಗಳು ಉದಾಸೀನ ತೋರದೇ ಜವಾಬ್ದಾರಿಯಿಂದ ಪ್ರತಿಕ್ರಿಯಿಸಿ ಅವರ ಅರ್ಜಿಗಳ ಬಗ್ಗೆ ತೆಗೆದುಕೊಂಡ ಕ್ರಮದ ಬಗ್ಗೆ ಅವರಿಗೆ ಮಾಹಿತಿ ನೀಡಿ ಎಂದು ಶಾಸಕ ಸಿ.ಬಿ.ಸುರೇಶ ಬಾಬು ಅಧಿಕಾರಿಗಳಿಗೆ ಸೂಚನೆ ನೀಡಿದರು. ತಾಲೂಕಿನ ಹಂದನಕೆರೆ ಹೋಬಳಿಯ ಮತ್ತಿಘಟ್ಟ ಗ್ರಾಮಪಂಚಾಯಿತಿ ವ್ಯಾಪ್ತಿಯ ದಾಸೀಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪ್ರಜಾಸೇವಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಅನೇಕ ಕಾರ್ಯಕ್ರಮಗಳನ್ನು ಜನರ ಬಳಿಗೆ ತೆಗೆದುಕೊಂಡು ಹೋಗಬೇಕೆಂದು ಇಲಾಖೆ ಅಧಿಕಾರಿಗಳೊಂದಿಗೆ ಈ ಪ್ರಜಾಸೇವಾ ಅಭಿಯಾನದಲ್ಲಿ ಪಾಲ್ಗೊಂಡಿದ್ದು ಜನರು ತಮ್ಮ ವೈಯಕ್ತಿಕ ಸಮಸ್ಯೆ, ಸಾಮಾಜಿಕ ಸಮಸ್ಯೆಗಳನ್ನು ನೀಡಿದರೆ ಸಾದ್ಯವಾದಷ್ಟು ಸ್ಥಳದಲ್ಲೇ ಪರಿಹರಿಸಲು ಕ್ರಮಕೈಗೊಳ್ಳಲಾಗುವುದು ಎಂದ ಅವರು ಈ ಕಾರ್ಯಕ್ರಮದಿಂದ ಗ್ರಾಮಗಳಲ್ಲಿನ ವಾಸ್ತವಾಂಶವನ್ನು ತಿಳಿಯಲು ಸಹಕಾರಿ ಎಂದ ಅವರು ಈ ಬಾರಿಯ ಚುನಾವಣೆಯ ನಂತದಲ್ಲಿ ಈ ಮತಿಘಟ್ಟ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ೭ ಕೋಟಿ ೩೩ಲಕ್ಷ ವೆಚ್ಚದಲ್ಲಿ ವಿವಿಧ ಅಭಿವೃದ್ದಿ ಕೆಲಸಗಳನ್ನು ಮಾಡಲಾಗಿದೆ. ಈ ಗ್ರಾಮದ ರಸ್ತೆಗೆ ಒಂದು ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗಿದೆ ಎಂದರು. ಇದರಿಂದ ಈ ಭಾಗದ ಜನರಿಗೆ ರಸ್ತೆ ಸಂಪರ್ಕ ಉತ್ತಮವಾಗಿದ್ದು ಇದನ್ನು ಜನರು ಉಪಯೋಗಿಸಿಕೊಳ್ಳಬೇಕು.ಈ ಭಾಗದಲ್ಲಿ ಜನರಿಗೆ ನಿವೇಶನಕ್ಕಾಗಿ ಮನವಿ ನೀಡುತ್ತಿದ್ದು ಸಂಬಂಧ ಪಟ್ಟ ಗ್ರಾಮಪಂಚಾಯಿತಿ ಜಾಗ ಗುರುತಿಸಿ ಖಾಲಿ ಜಾಗವಿದ್ದರೆ ಇದನ್ನು ನಿವೇಶನರಹಿತರಿಗೆ ಹಂಚುವ ಬಗ್ಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.ಕಾರ್ಯಕ್ರಮದಲ್ಲಿ ಗ್ರೇಡ್ ೨ ತಹಸೀಲ್ದಾರ್ ಪ್ರಸಾದ್ ಪ್ರಸ್ತಾವಿಕ ನುಡಿಗಳನ್ನಾಡಿ ಸರ್ಕಾರದ ನೂರೆಂಟು ಕಾರ್ಯಕ್ರಮಗಳಲ್ಲಿ ಅನೇಕ ಕಾರ್ಯಕ್ರಮಗಳು ಇನ್ನು ಎಷ್ಟೊ ಜನರಿಗೆ ತಲುಪಿಲ್ಲ ಇಂತಹ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವುದು ಹಾಗೂ ಜನರ ಸಮಸ್ಯೆಗಳನ್ನು ಎಲ್ಲಾ ಇಲಾಖೆಯ ಅಧಿಕಾರಿಗಳು ತಿಳಿಯಲು ಈ ಪ್ರಜಾ ಸೇವಾ ಕಾರ್ಯಕ್ರಮವನ್ನು ಮಾಡುತ್ತಿದೆ. ಸರ್ಕಾರವೆಂದರೆ ಕೇವಲ ಒಂದು ಕಟ್ಟಡದಲ್ಲಿರುವುದಲ್ಲ. ಅದು ಜನರ ನಡುವೆ ಇರುವಂತಹದ್ದು ಎಂದು ತಿಳಿಸುವುದಾಗಿದೆ. ಇದು ತಾಲೂಕಿನಲ್ಲಿ ಗ್ರಾಪಂ ಮಟ್ಟದಲ್ಲಿ ಎರಡನೇ ಕಾರ್ಯಕ್ರಮವಾಗಿದೆ. ಆದ್ದರಿಂದ ಜನರು ಈ ಕಾರ್ಯಕ್ರಮದ ಮೂಲಕ ತಮ್ಮ ಮನವಿಗಳನ್ನು ಸಲ್ಲಿಸಿ ಪರಿಹಾರವನ್ನು ಕಂಡು ಕೊಳ್ಳಬಹುದು ಎಂದರು.ಮತಿಘಟ್ಟ ಗ್ರಾ.ಪಂ ವ್ಯಾಪ್ತಿಯ ದಾಸೀಹಳ್ಳಿ, ಮಾದಾಪುರ, ಚಟ್ಟಸಂದ್ರ, ಯಳ್ಳೇನಹಳ್ಳಿ, ಬೇಳಗಿಹಳ್ಳಿ, ಗಾಂಧಿನಗರ ಹಾಗೂ ಮತಿಘಟ್ಟ ಗ್ರಾಮಗಳಲ್ಲಿ ಪ್ರಜಾಸೇವಾ ಅಭಿಯಾನ ಕಾರ್ಯಕ್ರಮಗಳು ಗ್ರಾಮಗಳಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾ ದಿಶಾ ಕಮಿಟಿ ಸದಸ್ಯ ರಾಮಚಂದ್ರಯ್ಯ, ಬಿಇಒ ಕಾಂತರಾಜು, ಕೃಷಿ ಸಹಾಯಕ ನಿರ್ದೇಶಕ ಶಿವರಾಜ್‌ಕುಮಾರ್, ಬೆಸ್ಕಾಂ ಎಇಇ ಗವಿರಂಗಯ್ಯ, ಸಿಡಿಪಿಒ ಹೊನ್ನಪ್ಪ, ಎಇಇ ಮೋಹನ್, ಮಾರುತಿ ಎಡಿಎಲ್‌ಆರ್ ಜಗದೀಶ್, ಉಪತಹಸೀಲ್ದಾರ್ ಯಶ್ವಂತ್ ಸ್ಥಳೀಯ ಮುಖಂಡರುಗಳಾದ ರಾಜಣ್ಣ, ಉಮೇಶ್, ದೇವರಾಜು, ಚನ್ನವೀರಪ್ಪ ಮತ್ತಿತರರು ಇದ್ದರು.