ಹಣಮಂತ ದೇವರ ಓಕಳಿ ಸಂಭ್ರಮ

| Published : May 26 2024, 01:36 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮೂಡಲಗಿಪಟ್ಟಣದ ಗಾಂಧಿ ಚೌಕ್‌ದಲ್ಲಿನ ಹನಮಂತ ದೇವರ ಪ್ರಥಮ ದಿನ ನಡು ಓಕಳಿಯು ಶುಕ್ರವಾರ ಸಡಗರ ಸಂಭ್ರಮದಿಂದ ನಡೆದಿದ್ದು, ಮೂಡಲಗಿಯ ಶ್ರೀ ಶಿವಬೋಧರಂಗ ಸಿದ್ಧ ಸಂಸ್ಥಾನಮಠದ ಪೀಠಾಧಿಪತಿ ದತ್ತಾತ್ರೇಯಬೋಧ ಸ್ವಾಮಿ ಮತ್ತು ಶ್ರೀಧರಬೋಧ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಅಪಾರ ಜನಸ್ತೋಮ ಮಧ್ಯೆ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಡಲಗಿಪಟ್ಟಣದ ಗಾಂಧಿ ಚೌಕ್‌ದಲ್ಲಿನ ಹನಮಂತ ದೇವರ ಪ್ರಥಮ ದಿನ ನಡು ಓಕಳಿಯು ಶುಕ್ರವಾರ ಸಡಗರ ಸಂಭ್ರಮದಿಂದ ನಡೆದಿದ್ದು, ಮೂಡಲಗಿಯ ಶ್ರೀ ಶಿವಬೋಧರಂಗ ಸಿದ್ಧ ಸಂಸ್ಥಾನಮಠದ ಪೀಠಾಧಿಪತಿ ದತ್ತಾತ್ರೇಯಬೋಧ ಸ್ವಾಮಿ ಮತ್ತು ಶ್ರೀಧರಬೋಧ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಅಪಾರ ಜನಸ್ತೋಮ ಮಧ್ಯೆ ನಡೆಯಿತು. ಓಕುಳಿ ನಿಮಿತ್ತ ಬೆಳಗಿನ ಜಾವ ಹನಮಂತ ದೇವರ ಮೂರ್ತಿಗೆ ಅಭಿಷೇಕ ವಿಷೇಶ ಪೂಜೆ ಮತ್ತು ಅಲಂಕಾರವನ್ನು ನೆರವೇರಿಸಲಾಯಿತು. ಸಂಜೆ ಶ್ರೀಗಳ ಸಾನ್ನಿಧ್ಯದಲ್ಲಿ ಜರುಗಿದ ಓಕುಳಿಯಲ್ಲಿ ಯುವಕರು ಪಾಲ್ಗೊಂಡು ಸಂಭ್ರಮಿಸಿದರು. ಈ ಸಮಯದಲ್ಲಿ ದೇವಸ್ಥಾನ ಕಮಿಟಿ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಭಕ್ತರು ಭಾಗವಹಿಸಿದ್ದರು.