ಓಮನ್‌ ದೇಶದ ಲಿವಾದ ವಿಲಾಯತ್‌ನಲ್ಲಿ ಭಾನುವಾರ ನಡೆದ ಸರಣಿ ವಾಹನ ಅಪಘಾತದಲ್ಲಿ ಕಾಪು ತಾಲೂಕಿನ ಕಾಂಜರಕಟ್ಟೆಯ ಯುವಕ ಚೇತನ್ ಕುಲಾಲ್ (26) ಸೇರಿದಂತೆ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.

ಕಾಪು: ಓಮನ್‌ ದೇಶದ ಲಿವಾದ ವಿಲಾಯತ್‌ನಲ್ಲಿ ಭಾನುವಾರ ನಡೆದ ಸರಣಿ ವಾಹನ ಅಪಘಾತದಲ್ಲಿ ಕಾಪು ತಾಲೂಕಿನ ಕಾಂಜರಕಟ್ಟೆಯ ಯುವಕ ಚೇತನ್ ಕುಲಾಲ್ (26) ಸೇರಿದಂತೆ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಚೇತನ್ ಪ್ರತಿಭಾವಂತ ಇಂಜಿನಿಯರ್ ಆಗಿದ್ದು, ಸಹೋದರಿಯನ್ನು ಅಗಲಿದ್ದಾರೆ. ಉಡುಪಿಯ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್‍ ಯೋಜನೆಗೆ 2016ರಲ್ಲಿ ಸೇರ್ಪಡೆಯಾಗಿದ್ದ. ನಂತರ ಮಂಗಳೂರಿನ ಶ್ರೀನಿವಾಸ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದ, ವಿದ್ಯಾಪೋಷಕ್‌ನ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕನಾಗಿ ಶ್ರದ್ಧೆಯಿಂದ ಸೇವೆ ಸಲ್ಲಿಸುತಿದ್ದರು. ಬಾಲ್ಯದಲ್ಲೇ ತಂದೆ ತಾಯಿಯನ್ನು ಕಳೆದುಕೊಂಡು, ದೊಡ್ಡಮ್ಮನ ಆಶ್ರಯದಲ್ಲಿ ಬೆಳೆದಿದ್ದರು. ಚೇತನ್ ಅಕಾಲಿಕ ನಿಧನಕ್ಕೆ ಕಲಾರಂಗದ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಹಾಗೂ ವಿದ್ಯಾಪೋಷಕ್ ಕುಟುಂಬ ತೀವ್ರ ಸಂತಾಪ ವ್ಯಕ್ತಪಡಿಸಿದೆ.