ರಾಜ್ಯ ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಕೊಡಗಿನ ಒಂಕಾರ್ ರವಿ ಭಾಗವಹಿಸಿ ಬಹುಮಾನಕ್ಕೆ ಭಾಜನರಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಸ್ನೇಹ ಸ್ಪಂದನ ಬೆಂಗಳೂರು ಆಯೋಜಿಸಿದ ರಾಜ್ಯಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಕೊಡಗಿನ ಓಂಕಾರ್ ರವಿ ಭಾಗವಹಿಸಿ ಬಹುಮಾನಕ್ಕೆ ಭಾಜನರಾಗಿ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ.ಸ್ನೇಹ ಸ್ಪಂದನ ಬೆಂಗಳೂರು ಇವರು ಆಯೋಜಿಸಿದ ನನ್ನೆದೆಯ ಹಾಡು ಸೀಸನ್ 2 ಕರೋಕೆ ಸಂಗೀತ ಸ್ಪರ್ಧೆಯಲ್ಲಿ ಕೊಡಗಿನ ಮಡಿಕೇರಿ ತಾಲೂಕಿನ ನಾಪೋಕ್ಲು
ನಿವಾಸಿ ಓಂಕಾರ್ ರವಿ ಭಾಗವಹಿಸಿ ತೃತೀಯ ಬಹುಮಾನ ನಗದು ಹಾಗೂ ಟ್ರೋಫಿ ತನ್ನದಾಗಿಸಿಕೊಂಡಿದ್ದಾರೆ .ಬೆಂಗಳೂರಿನ ಗಿರಿನಗರದಲ್ಲಿ ನಡೆದ ಕಾರ್ಯಕ್ರಮ ವನ್ನು ಅಜಿತ್‌ಕುಮಾರ್ ನಿರ್ವಹಿಸಿದರು. ಮುಖ್ಯ ಅತಿಥಿ ಗಿರಿನಗರದ ಶಾಸಕ ರವಿ ಸುಬ್ರಮಣ್ಯ, ನಿಕಟಪೂರ್ವ ಪಾಲಿಕೆ ಸದಸ್ಯ ಎಂ. ಸಂಗಾತಿ ವೆಂಕಟೇಶ್, ನಂದಿನಿ, ವಿಜಯ ವಿಠ್ಠಲ ಇತರರು ಭಾಗವಹಿಸಿದ್ದು ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು.