ಸಾರಾಂಶ
ಪಟ್ಟಣದ ಪಿಕಾರ್ಡ್ ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಚುನಾವಣೆ
ಕನ್ನಡಪ್ರಭ ವಾರ್ತೆ, ಕಡೂರುತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಸಹಕಾರಿ ಧುರೀಣರಾದ ಚಿಕ್ಕಬಾಣೂರು ಎಸ್.ಓಂಕಾರಪ್ಪ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದ ಪಿಕಾರ್ಡ್ ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಯಾರೂ ಕೂಡ ಅಧ್ಯಕ್ಷಗಾಧಿಗೆ ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಎಸ್.ಓಂಕಾರಪ್ಪ ಅವರ ಆಯ್ಕೆಯನ್ನು ಸಹಕಾರ ಅಭಿವೃದ್ಧಿ ಅಧಿಕಾರಿ ಅನುಪಮ ಘೋಷಣೆ ಮಾಡಿದರು.ಆನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ನೂತನ ಅಧ್ಯಕ್ಷ ಎಸ್.ಓಂಕಾರಪ್ಪ ಮಾತನಾಡಿ, ತಾವು ಬಾಣೂರಿನ ವಿಎಸ್‌ಎಸ್‌ಎನ್ ನಲ್ಲಿ ನಿರ್ದೇಶಕರಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು. ಈ ಬಾರಿ ಪಿಕಾರ್ಡ್ ಬ್ಯಾಂಕಿನ ಚುನಾವಣೆಯಲ್ಲಿ ದೊಡ್ಡಪಟ್ಟಣಗೆರೆ ಕ್ಷೇತ್ರದಿಂದ ಜಯಗಳಿಸಿ ನಿರ್ದೇಶಕನಾಗಿದ್ದೇನೆ. ನಟರಾಜ್ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಎಲ್ಲ ನಿರ್ದೇಶಕರು ಪ್ರೀತಿ-ವಿಶ್ವಾಸದಿಂದ ನನ್ನನ್ನು ಅಧ್ಯಕ್ಷನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.ನನಗೆ ಈಗ 83 ವರ್ಷಗಳು ಕಳೆದಿದ್ದು ರೈತರ ಸಂಕಷ್ಟ, ಸಾಲ, ವ್ಯವಹಾರಗಳ ಬಗ್ಗೆ ತಿಳಿದಿದೆ. ನಾನೊಬ್ಬ ರೈತನಾಗಿ ಅಡಿಕೆ ಬೆಳೆಗಾರರಾಗಿ, ವರ್ತಕನಾಗಿ ಅನುಭವ ಹೊಂದಿದ್ದು ಪಿಕಾರ್ಡ್ ಬ್ಯಾಂಕಿನ ವ್ಯವಹಾರಗಳನ್ನು ಸಹ ತಿಳಿದಿದ್ದೇನೆ. ತಾಲೂಕಿನ ರೈತರ ಅಭಿವೃದ್ಧಿಗೆ ಈ ಬ್ಯಾಂಕಿನಿಂದ ಎಷ್ಟು ಸಹಾಯವಾಗುತ್ತದೋ ಅಷ್ಟು ಪ್ರಾಮಾಣಿಕವಾಗಿ ರೈತರ ಪರವಾಗಿ ದುಡಿಯುತ್ತೇನೆ ಎಂದರು.
ಉಪಾಧ್ಯಕ್ಷ ತಿಮ್ಮೇಗೌಡ, ನಿರ್ದೇಶಕರಾದ ಎಚ್.ಎಂ.ರೇವಣ್ಣಯ್ಯ, ನಟರಾಜ್,ರಂಗನಾಥ್, ಎಸ್.ವಿರೂಪಾಕ್ಷಪ್ಪ, ಕಲ್ಲೇಶಪ್ಪ, ನಂಜುಂಡಪ್ಪ, ಯತೀಶ್, ಮೋಹನ್‌ನಾಯ್ಕ, ಟಿ.ಶಂಕರಪ್ಪ, ಆರ್.ಶ್ರೀನಿವಾಸಮೂರ್ತಿ, ರೇಣುಕಮ್ಮ, ಕೆ.ಕೆ.ಪುಷ್ಪಲತಾ ಸೋಮೇಶ್ ಮತ್ತಿತರರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.ಚಿಕ್ಕಬಾಣೂರಿನ ಗ್ರಾಮಸ್ಥರಾದ ಎಸ್.ಮಲ್ಲೇಗೌಡರು, ಜಿ.ಎನ್.ಪ್ರಕಾಶ್, ಸೋಮಶೇಖರ್, ಜಯಣ್ಣ, ನಂಜುಂಡಪ್ಪ, ಚನ್ನಬಸಪ್ಪ, ಮಂಜನಾಯ್ಕ, ವಕೀಲರಾದ ಎಸ್.ಎನ್. ಸುಮುಖ್, ವರುಣ್ ಎಚ್.ಬಿ ಹಾಗೂ ಬ್ಯಾಂಕಿನ ಶಿವಾಜಿ ಮತ್ತು ಸಿಬ್ಬಂದಿ ಅಭಿನಂದಿಸಿದರು.
11ಕೆಕೆಡಿಯು3.ಕಡೂರು ಪಿಕಾರ್ಡ್ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಚಿಕ್ಕಬಾನೂರು ಎಸ್.ಓಂಕಾರಪ್ಪ ಅವಿರೋಧವಾಗಿ ಆಯ್ಕೆಯಾದರು. ನಿರ್ದೇಶಕರು ಹಾಗೂ ರೈತರು ಅಭಿನಂದಿಸಿದರು.
.