ಸಾರಾಂಶ
ಕನ್ನಡ ಪ್ರಭ ವಾರ್ತೆ ಮಾಲೂರು
ಫೆ೨೦- ೧೬ನೇ ಶತಮಾನದ ಕವಿ ಸಂತ ದಾರ್ಶನಿಕ ಸರ್ವಜ್ಞ ತ್ರಿಪದಿಗಳ ಮೂಲಕ ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಕೊಡುಗೆಯಾಗಿದ್ದು, ಅವರ ತ್ರಿಪದಿಗಳು ಸಾರ್ವ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರುಪಟ್ಟಣದ ತಾಲೂಕು ಕಚೇರಿಯ ತಹಸೀಲ್ದಾರ್ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ೫೨೧ನೇ ಜಯಂತಿ ಕಾರ್ಯಕ್ರಮದಲ್ಲಿ ಕವಿ ಸರ್ವಜ್ಞ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ, ನಂತರ ಮೆರವಣಿಗೆ ಚಾಲನೆ ನೀಡಿ ಮಾತನಾಡಿದ ಅವರು, ೧೬ನೇ ಶತಮಾನದ ಕರ್ನಾಟಕ ಕಂಡ ಒಬ್ಬ ಶ್ರೇಷ್ಠ ವಚನಕಾರ ದಾರ್ಶನಿಕ ಕವಿ ಸರ್ವಜ್ಞ, ಸರ್ವಜ್ಞನ ತ್ರಿಪದಿಗಳು ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಯಾಗಿದೆ. ತ್ರಿಪದಿಗಳು ಹಾಡು ಭಾಷೆಯಲ್ಲಿ ರಚಿಸಿ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿದ ಸಮಾಜ ಸುಧಾರಕರು ಪ್ರಸ್ತುತ ೭ ಭಾಷೆಗಳಿಗೆ ಭಾಷಾಂತರಗೊಂಡಿದೆ ಭಾಷೆ ಮತ್ತು ಗಡಿಗಳ ಎಲ್ಲಿ ಮೀರಿ ರಾಜ್ಯದ ಕೀರ್ತಿಯನ್ನು ಬೆಳಗಿಸಿದೆ ಇಂದು ರಾಜ್ಯಾದ್ಯಂತ ಸರ್ವಜ್ಞರ ಜಯಂತಿ ಆಚರಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಕುಂಬಾರ ಸಮುದಾಯವು ರಾಜ್ಯದಲ್ಲಿ ಕಡಿಮೆ ಜನಸಂಖ್ಯೆ ಇರುವ ಸಮುದಾಯವಾಗಿದ್ದರೂ ಸಹ ಶೈಕ್ಷಣಿಕ ರಾಜಕೀಯ ಆರ್ಥಿಕ ಸಾಮಾಜಿಕವಾಗಿ ತೀರಾ ಹಿಂದುಳಿದಿದ್ದು ಸರ್ಕಾರ ನಿಗಮ ಮಂಡಳಿಯನ್ನು ರಚಿಸಿದೆ ಆದರೆ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸುವ ಅಗತ್ಯವಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮೀನಾರಾಯಣ್ ಮಾತನಾಡಿ, ಹಿಂದುಳಿದ ವರ್ಗಗಳಲ್ಲಿ ಒಂದಾದ ಕುಂಬಾರ ಸಮಾಜ ಮತ್ತಷ್ಟು ಮುಂಚೂಣಿಗೆ ಬರಬೇಕಿದ್ದು ಸಮಾಜಕ್ಕೆ ತ್ರಿಪದಿಗಳ ಮೂಲಕ ಬೆಳಕು ನೀಡಿದ ಮಹಾನ್ ವ್ಯಕ್ತಿ ಕವಿ ಸರ್ವಜ್ಞರು ಕನ್ನಡವನ್ನು ವಿಶ್ವದ ಉತ್ತುಂಗಕ್ಕೆ ಏರಿಸಿದ ಕಣ್ಮಣಿ ಸರ್ವಜ್ಞರ ತ್ರಿಪದಿಗಳು ಸರ್ವಕಾಲಿಕವಾಗಿದ್ದು, ತಂದೆ, ತಾಯಿ ಮತ್ತು ಗುರುವಿನ ಸಾಮರ್ಥ್ಯವನ್ನು ೧೬ನೇ ಶತಮಾನದಲ್ಲೆ ತಿಳಿಸಿಕೊಟ್ಟಿದ್ದರು. ಉತ್ತಮ ನಾಗರಿಕತೆ ತಿಳಿಸಿಕೊಟ್ಟ ಸಮಾಜ ನಮ್ಮದಾಗಿದ್ದು, ಎಲ್ಲ ಸೌಲಭ್ಯಗಳಿಂದ ವಂಚಿತವಾಗಿದೆ. ಎಲ್ಲ ಕ್ಷೆತ್ರಗಳಲ್ಲಿ ಮುಖ್ಯವಾಹಿನಿಗೆ ಬರುವುದಕ್ಕೆ ನಾವೆಲ್ಲರೂ ಒಗ್ಗಟ್ಟಾಗಬೇಕು ಎಂದು ಕರೆ ನೀಡಿದರು.ಗ್ರೇಡ್ 2 ತಹಸೀಲ್ದಾರ್ ಹರಿಪ್ರಸಾದ್, ಪುರಸಭಾ ಸದಸ್ಯ ಆರ್.ವೆಂಕಟೇಶ್, ವಿಜಯಲಕ್ಷ್ಮಿ, ತಾಪಂ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ.ಮುನೇಗೌಡ, ಇ.ಒ ಕೃಷ್ಣಪ್ಪ, ಮುಖ್ಯಾಧಿಕಾರಿ ಪ್ರದೀಪ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯನರಸಿಂಹ, ಮುಖಂಡರುಗಳಾದ ಸುಬ್ರಮಣಿ, ರವಿಚಂದ್ರ, ಮುನಿಸ್ವಾಮಿ, ರಾಜೇಂದ್ರ, ಚೇತನ್, ರವಿ, ಮುರಳಿ, ರಾಜು, ಅನಿತಾ, ಇನ್ನಿತರರು ಹಾಜರಿದ್ದರು.