ತ್ರಿಪದಿ ಮೂಲಕ ಸಾಮಾಜಿಕ ಮೌಢ್ಯ ಹೋಗಲಾಡಿಸಿದ್ದ ಸರ್ವಜ್ಞ

| Published : Feb 21 2024, 02:00 AM IST

ಸಾರಾಂಶ

ಬೀದರ್‌ ನಗರದ ಜಿಲ್ಲಾ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಸಂತಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೀದರ್

ಸಂತಕವಿ ಸರ್ವಜ್ಞ ತನ್ನ ತ್ರಿಪದಿಗಳ ಮೂಲಕ ಅಂದಿನ ಸಮಾಜದಲ್ಲಿ ಬೇರುರಿದ್ದ ಸಾಮಾಜಿಕ ಮೌಢ್ಯ. ಹಾಗೂ ಅಂಧ ಶ್ರದ್ಧೆಗಳನ್ನು ಹೋಗಲಾಡಿಸಿದ್ದರು ಎಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಹೇಳಿದರು.

ಅವರು ಮಂಗಳವಾರ ಜಿಲ್ಲಾಡಳಿತ, ಜಿ.ಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಜಿಲ್ಲಾ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಸಂತಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ವಜ್ಞ ಅವರು ಹಾವೇರಿ ಜಿಲ್ಲೆಯ ಹಿರೆಕೇರುರ ತಾಲೂಕು ಮಾಸುರು ಗ್ರಾಮದಲ್ಲಿ ಜನಿಸಿ, ಜನರ ಅನುಭವಗಳನ್ನೆ ತಮ್ಮ ವಚನಗಳ ಮೂಲಕ ಪ್ರಚಾರ ಮಾಡಿ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದ್ದರು. ಅವರ 10 ಸಾವಿರಕ್ಕಿಂತಲೂ ಹೆಚ್ಚಿನ ವಚನಗಳು ದೊರೆತಿದ್ದು ಇನ್ನೂ ಹೆಚ್ಚಿನ ಸಂಶೋಧನೆ ಆಗಬೇಕಿದೆ ಎಂದರು.

ನಾವು ಚಿಕ್ಕವರಿದ್ದಾಗ ಸರ್ವಜ್ಞನ ವಚನಗಳನ್ನು ಹಾಡುತ್ತ ಮನೆಗಳಿಗೆ ಬರುತ್ತಿದ್ದ ಸ್ವಾಮಿಗಳು, ಅವರು ದವಸ ಧಾನ್ಯಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಸರ್ವಜ್ಞನವರೆ ಹೇಳಿದಂತೆ ಕೊಟ್ಟಿದ್ದು ತನಗೆ ಬಚ್ಚಿಟ್ಟಿದು ಪರರಿಗೆ ಎನ್ನುವಂತೆ ಅವರ ಹಲವಾರು ವಚನಗಳು ಬಹಳ ಅರ್ಥಪೂರ್ಣವಾಗಿ ಮತ್ತು ಅವು ಇಂದಿನ ಸಮಾಜಕ್ಕೆ ಬಹಳ ಪ್ರಸ್ತುತತೆ ಇವೆ ಎಂದರು.

ಯುವ ಸಾಹಿತಿ ಬಾಲಾಜಿ ಕುಂಬಾರ ಚಟನಾಳ ಅವರು ಸರ್ವಜ್ಞ ಕುರಿತು ಅತಿಥಿ ಉಪನ್ಯಾಸ ನೀಡಿ, ಸರ್ವಜ್ಞ ಎಂಬುವರು ಗರ್ವದಿಂದ ಆದವನಲ್ಲ ಜನರ ಅನುಭಗಳನ್ನೆ ತಮ್ಮ ವಚನಗಳ ರೂಪದಲ್ಲಿ ಜನರಿಗೆ ತಿಳಿಸಿದ್ದರು. ಸಾಮಾಜಿಕ ಓರೆ ಕೋರೆ ತಿದ್ದಿದ್ದರು. ಜಾತೀಯತೆ, ಕಂದಾಚಾರ, ಮೌಢ್ಯಗಳ ನಿರ್ಮೂಲನೆ ಅವರ ತ್ರಿಪದಿಗಳಲ್ಲಿ ಕಾಣಬಹುದು ಎಂದರು.

ಕಣ್ಣು, ನಾಲಿಗೆ, ಮನಸ್ಸು ಹಿಡಿತದಲ್ಲಿ ಇರದಿದ್ದರೆ ಅದು ನಿನ್ನನ್ನೆ ಕೊಲ್ಲುತ್ತದೆ ಎನ್ನುವ ಅವರ ವಚನ ನಮಗೆ ಎಚ್ಚರಿಕೆಯನ್ನು ನೀಡುತ್ತದೆ. ಸರ್ವಜ್ಞ, ಬುದ್ದ, ಬಸವ, ಅಂಬೇಡ್ಕರ್ ಅವರನ್ನು ಯಾವುದೇ ಸಮಾಜಕ್ಕೆ ಸೀಮಿತಗೊಳಿಸಬಾರದು ಎಂದರು.

ಬೆಳಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸರ್ವಜ್ಞ ಭಾವಚಿತ್ರಕ್ಮೆ ಪೂಜೆ ಸಲ್ಲಿಸಿದ ನಂತರ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬೀದರ ನಗರದ ವಿವಿಧ ವೃತ್ತಗಳ ಮೂಲಕ ಚನ್ನಬಸವ ಪಟ್ಟದ್ದೆವರು ಜಿಲ್ಲಾ ರಂಗಮಂದಿರದವರೆಗೆ ಸರ್ವಜ್ಞ ಭಾವಚಿತ್ರದ ಮೆರವಣಿಗೆ ನಡೆಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ, ಜಿ.ಪಂ ಮಾಜಿ ಸದಸ್ಯೆ ಶಕುಂತಲಾ ಬೆಲ್ದಾಳೆ, ಜಿಲ್ಲಾ ಕುಂಬಾರ ಸಮಾಜದ ಅಧ್ಯಕ್ಷ ವಿಠಲರಾವ್ ಕುಂಬಾರ, ಕರಕುಶಲ ಸಹಕಾರ ಸಂಘದ ಅಧ್ಯಕ್ಷರಾದ ಬಾಬುರಾವ್ ಕುಂಬಾರ, ಆಕಾಶ ಪಾಟೀಲ್, ಕುಂಬಾರ ಸಮಾಜದ ಮುಖಂಡರಾದ ಶಿವರಾಜ ಕುಂಬಾರ, ಸೇರಿದಂತೆ ಕುಂಬಾರ ಸಮಾಜದ ಇತರರು ಉಪಸ್ಥಿತರಿದ್ದರು.