೧೭ ರಂದು ಕೋಲಾರ ಜಿಲ್ಲೆ ಸ್ವಯಂ ಘೋಷಿತ ಬಂದ್

| Published : Oct 15 2025, 02:06 AM IST

ಸಾರಾಂಶ

ಇದು ಕೇವಲ ನ್ಯಾಯಮೂರ್ತಿ ಗವಾಯಿ ಮೇಲಿನ ಹಲ್ಲೆಯಾಗಿರದೆ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು ಮಾಡುವ ಬಹುದೊಡ್ಡ ಷಡ್ಯಂತ್ರದ ಭಾಗವಾಗಿದೆ. ಇದು ಕೋಮುವಾದಿ ಸಂಘಟನೆ ಆರ್.ಎಸ್.ಎಸ್.ಗೆ ನೂರು ವರ್ಷ ತುಂಬುತ್ತಿರುವ ಸಂದರ್ಭದಲ್ಲಿಯೇ ಇಂತಹ ಕೃತ್ಯ ನಡೆದಿದೆ.

ಕನ್ನಡಪ್ರಭ ವಾರ್ತೆ ಕೋಲಾರದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಬಿ.ಆರ್.ಗವಾಯಿ ಆಸೀನರಾಗಿದ್ದ ಪೀಠದ ಮೇಲೆ ಅ.೬ರ ಸೋಮವಾರ ಸನಾತವಾದಿ ಮನಸ್ಥಿತಿಯ ಹಿರಿಯ ವಕೀಲ ರಾಕೇಶ್ ಕಿಶೋರ್ ಕಲಾಪ ನಡೆಯುತ್ತಿರುವ ಸಂದರ್ಭದಲ್ಲಿ ಶೋ ಎಸೆದು ಸಂವಿಧಾನದ ಪೀಠಕ್ಕೆ ಅಪಮಾನ ಖಂಡಿಸಿ ಅ.೧೭ರ ಶುಕ್ರವಾರ ಸ್ವಯಂ ಪ್ರೇರಿತರಾಗಿ ಕೋಲಾರ ಜಿಲ್ಲಾ ಬಂದ್‌ ಆಚರಿಸಲಾಗುವುದು ಎಂದು ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟಕ್ಕೆ ತಿಳಿಸಿದೆ.ನಗರದ ಪತ್ರಕರ್ತ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಪ್ರಜಾಪ್ರಭುತ್ವದ ಆತ್ಮವಾದ ಸಂವಿಧಾನಕ್ಕೆ ಹಾಗೂ ೧೪೦ ಕೋಟಿ ಜನತೆಯ ಸಾರ್ವಭೌಮತ್ವಕ್ಕೆ ಮಾಡಿದ ಅಪಮಾನವಾಗಿದೆ ಎಂದರು.

ಪ್ರಜಾತಂತ್ರ ಬುಡಮೇಲು

ಇದು ಕೇವಲ ನ್ಯಾಯಮೂರ್ತಿ ಗವಾಯಿ ಮೇಲಿನ ಹಲ್ಲೆಯಾಗಿರದೆ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು ಮಾಡುವ ಬಹುದೊಡ್ಡ ಷಡ್ಯಂತ್ರದ ಭಾಗವಾಗಿದೆ. ಇದು ಕೋಮುವಾದಿ ಸಂಘಟನೆ ಆರ್.ಎಸ್.ಎಸ್.ಗೆ ನೂರು ವರ್ಷ ತುಂಬುತ್ತಿರುವ ಸಂದರ್ಭದಲ್ಲಿಯೇ ಇಂತಹ ಕೃತ್ಯ ನಡೆದಿದೆ ಎಂದು ಆರೋಪಿಸಿದರು. ಭಾರತದ ಸಂವಿಧಾನಕ್ಕೆ ಅಪಮಾನಿಸಿದ ಈ ದುರ್ಘಟನೆ ನಡೆದ ೯ ತಾಸುಗಳ ನಂತರ ಪ್ರಧಾನಮಂತ್ರಿ ಹಾಗೂ ಗೃಹ ಮಂತ್ರಿ ಪ್ರತಿಕ್ರಿಯಿಸಿದ್ದಾರೆ. ದುರ್ಘಟನೆಯ ಮಾಹಿತಿ ನಂತರವೂ ಪ್ರತಿಕ್ರಿಯಿಸಲು ಮೀನಮೇಷ ಎಣಿಸಿ ನಂತರ ಪ್ರತಿಕ್ರಿಯಿಸಿರುವುದು ಅದುವರೆಗೆ ಕೇಂದ್ರ ಸರ್ಕಾರದ ಮೌನ ಸಮ್ಮತಿಯು ಇದಕ್ಕೆ ಸಾಕ್ಷಿ ಎಂದರು.ಸ್ವಯಂ ಪ್ರೇರಿತ ಬಂದ್‌

ದೇಶವನ್ನು ಸಾರ್ವಭೌಮ ಸಮಾಜವಾದಿ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ಸಮಾನತೆ ಸೋದರತೆ ಜಾತ್ಯತೀತತೆ ಬಯಸುವ ದ.ಸಂ.ಸ. ಪ್ರಗತಿ ಹಾಗೂ ಕನ್ನಡಪರ, ಕಾರ್ಮಿಕ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳು, ಭಾಷಾ. ಸಂಘಟನೆಗಳು ಮತ್ತು ಮಹಿಳಾ ಸಂಘಟನೆಗಳು ಮತ್ತು ಸಂವಿಧಾನ ಸಂರಕ್ಷಣೆ ಬಯಸುವ ಪ್ರತಿಯೊಬ್ಬರು ಈ ಸ್ವಯಂ ಪ್ರೇರಿತ ಬಂದ್‌ನಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು. ನ್ಯಾಯಾಪೀಠದ ಅಧಿಕಾರ ಸ್ವೀಕರದ ಸಂದರ್ಭದಲ್ಲಿ ಶಿಷ್ಟಚಾರಗಳ ಪ್ರಕಾರ ಗೌರವ ಸಿಗಲಿಲ್ಲ. ದಲಿತ ಸಮುದಾಯದವರಿಗೆ ಅವಕಾಶ ಸಿಕ್ಕಿರುವುದನ್ನು ಸಹಿಸಲಾಗಲಿಲ್ಲ. ಮನುವಾದಿ ಮನಸ್ಥಿತಿಯ ಜನಪ್ರತಿನಿಧಿಗಳು ಯಾರೂ ಖಂಡಿಸದೇ ಇರುವುದು ವಿಷಾದನೀಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಿ.ಪಿ.ಐ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ, ದ.ಸಂ.ಸ ಮುಖಂಡ ಟಿ.ವಿಜಯಕುಮಾರ್, ಗಮಕ ಶಾಂತಮ್ಮ, ನಗರಸಭೆ ಮಾಜಿ ಸದಸ್ಯ ಸಲಾವುದ್ದೀನ್ ಬಾಬು, ಅಲ್ಪಸಂಖ್ಯಾತರ ಮುಖಂಡ ಅನ್ವರ್‌ಪಾಷ, ಸಂಯುಕ್ತ ದಲಿತ ಸಂಘಟನೆಗಳ ಒಕ್ಕೂಟದ ಸಂಸ್ಥಾಪಕ ಡಿಲಿಟ್ ಡಾ.ಎಂ.ಚಂದ್ರಶೇಖರ್, ಪಿ.ವಿ.ಸಿ.ಕೃಷ್ಣಪ್ಪ, ಎ.ಎಸ್.ಎಫ್.ಐ ರಾಜ್ಯ ಮಾಜಿ ಅಧ್ಯಕ್ಷ ವಿ.ಅಂಬರೀಷ್, ವರದೇನಹಳ್ಳಿ ವೆಂಕಟೇಶ್, ಹಾರೋಹಳ್ಳಿ ರವಿ, ಡಿ.ಎಸ್.ಎಸ್. (ಅಂಬೇಡ್ಕರ್ ವಾದ) ಶ್ರೀರಂಗ, ಸಂಗಸಂದ್ರ ವಿಜಯ ಕುಮಾರ್, ಸುಬ್ರಮಣಿ, ಈನೆಲ ಈಜಲ ವೆಂಕಟಚಲಪತಿ ಇದ್ದರು.