26ರಂದು ಮಾದಿಗರ ಮುನ್ನಡೆ ಜಿಲ್ಲಾಮಟ್ಟದ ಸಮಾವೇಶ

| Published : Dec 18 2023, 02:00 AM IST

26ರಂದು ಮಾದಿಗರ ಮುನ್ನಡೆ ಜಿಲ್ಲಾಮಟ್ಟದ ಸಮಾವೇಶ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಎಲ್ಲೆಡೆ ಮಾದಿಗರ ಮುನ್ನಡೆ ಸಮಾವೇಶ ಡಿ. 26ಕ್ಕೆ ವಿಜಯನಗರ ಜಿಲ್ಲಾ ಮಟ್ಟದ ಸಮಾವೇಶ ಹಗರಿಬೊಮ್ಮನಹಳ್ಳಿಯಲ್ಲಿ ನಡೆಯಲಿದೆ

ಕೂಡ್ಲಿಗಿ: ರಾಜ್ಯದೆಲ್ಲೆಡೆ ಮಾದಿಗರ ಮುನ್ನಡೆ ಸಮಾವೇಶಕ್ಕೆ ಪೂರ್ವಭಾವಿ ಸಭೆಯನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಮುದಾಯದ ಪ್ರಮುಖ ಮುಖಂಡರ ಸಮ್ಮುಖದಲ್ಲಿ ನಡೆಸಲಾಯಿತು.

ಈ ವೇಳೆ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಬಲ್ಲಾಹುಣಿಸಿ ರಾಮಣ್ಣ ಮಾತನಾಡಿ, ಮಾದಿಗ ಸಮುದಾಯ ಪರಿಶಿಷ್ಟ ಜಾತಿಯಲ್ಲಿ ಬಹುಪಾಲು ಜನಸಂಖ್ಯೆ ಹೊಂದಿದ್ದು, ಜನಸಂಖ್ಯೆ ಅನುಗುಣವಾಗಿ ಮೂರು ದಶಕಗಳ ಕಾಲ ಮೀಸಲಾತಿ ವರ್ಗೀಕರಣ ಹೋರಾಟ ಯಾವ ಕಾರಣಕ್ಕೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎನ್ನುವ ಗಂಭೀರ ವಿಚಾರವಾಗಿ ರಾಜ್ಯದ ಎಲ್ಲೆಡೆ ಮಾದಿಗರ ಮುನ್ನಡೆ ಸಮಾವೇಶ ಡಿ. 26ಕ್ಕೆ ವಿಜಯನಗರ ಜಿಲ್ಲಾ ಮಟ್ಟದ ಸಮಾವೇಶ ಹಗರಿಬೊಮ್ಮನಹಳ್ಳಿಯಲ್ಲಿ ನಡೆಯಲಿದೆ ಎಂದರು.

ಸಂಘಟನಾ ಸಹ ಪ್ರಭಾರಿ ಹಡಗಲಿ ಎಚ್. ಪೂಜಪ್ಪ ಮಾತನಾಡಿ, ಆನೇಕ ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ಆಡಳಿತ ಮಾಡಿದರೂ ಒಳಮೀಸಲಾತಿ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇನ್ನು ಮುಂದೆ ಎಲ್ಲರೂ ಸಂಘಟಿತರಾಗಬೇಕು. ಸಮುದಾಯದ ಯುವಕರು ಶೈಕ್ಷಣಿಕವಾಗಿ ಶಿಕ್ಷಣ ಪಡೆಯಬೇಕು, ಆರ್ಥಿಕವಾಗಿ ಸಬಲರಾಗಬೇಕು ಮತ್ತು ರಾಜಕೀಯವಾಗಿ ಸಂಘಟಿತರಾದಾಗ ಮಾತ್ರ ಸಮುದಾಯ ಅಭಿವೃದ್ಧಿ ಆಗಲು ಸಾಧ್ಯವಿದೆ ಎಂದರು.

ಹಿರಿಯ ಮುಖಂಡ ಹರಪನಹಳ್ಳಿ ಕಣಿವಿಹಳ್ಳಿ ಮಂಜುನಾಥ್ ಮಾತನಾಡಿ, ಮಾದಿಗ ಸಮಾಜ ಬಹುದೊಡ್ಡ ಜನಸಂಖ್ಯೆ ಹೊಂದಿದ್ದು, ಒಳಮೀಸಲಾತಿ ಇಂಥದ್ದೇ ಸರ್ಕಾರ ಮಾಡಬೇಕೆಂದು ನಿಯಮವಿಲ್ಲ. ಒಳಮೀಸಲಾತಿ ಯಾವುದೇ ಸರ್ಕಾರ ಮಾಡಿದರೂ ನಾವು ಸ್ವಾಗತ ಮಾಡುತ್ತೇವೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ವಿಜಯನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ದುರುಗೇಶ್, ಎಸ್ಸಿ ಮೋರ್ಚಾ ಮಂಡಲ ಅಧ್ಯಕ್ಷ ಎ.ಕೆ. ಸಿದ್ದಲಿಂಗಪ್ಪ ಇತರರು ಇದ್ದರು.