27ರಂದು ಉಡುಪಿಯ ವಿವಿಧೆಡೆ ವಿದ್ಯುತ್‌ ವ್ಯತ್ಯಯ

| Published : Feb 25 2024, 01:47 AM IST

ಸಾರಾಂಶ

ತುರ್ತು ನಿರ್ವಹಣಾ ಕಾಮಗಾರಿ, ಬಸ್ಬಾರ್‌ ಮತ್ತು ಇದಕ್ಕೆ ಸಂಬಂಧಿಸಿದ ಉಪಕರಣಗಳ ವಾರ್ಷಿಕ ನಿರ್ವಹಣೆ, ಲೈನ್‌ ಶಿಫ್ಟಿಂಗ್‌/ನಿರ್ವಹಣೆ ಕಾಮಗಾರಿ ನಡೆಯಲಿರುವುದರಿಂದ ವಿದ್ಯುತ್‌ ವ್ಯತ್ಯಯವಾಗಲಿದೆ.

ಉಡುಪಿ: ಕೇಮಾರ್‌ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಫೀಡರ್‌ಗಳಾದ ನಿಟ್ಟೆ, ಕಲ್ಯಾ, ಲೆಮಿನಾ, ನಿಟ್ಟೆ ವಾಟರ್‌ ಸಫ್ಲೈ ಫೀಡರ್‌ನಲ್ಲಿ, ಕಾರ್ಕಳ ಉಪಕೇಂದ್ರದಿಂದ ಹೊರಡುವ ಫೀಡರ್‌ ಹಾಗೂ ಬೆಳ್ಮಣ್‌ ಇದ್ಯುತ್‌ ಉಪಕೇಂದ್ರದಿಂದ ಹೊರಡುವ ಫೀಡರ್‌ಗಳಾದ ಬೋಳ ಫೀಡರ್‌ನಲ್ಲಿ ಫೆ.27ರಂದು ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿ ನಡೆಯಲಿದೆ.

ಅಂದು ಬೆಳಗ್ಗೆ 9ರಿಂದ ಸಂಜೆ 5 ಗಂಟೆ ವೆರೆಗ ನಿಟ್ಟೆ, ನಿಟ್ಟೆ ಕಾಲೇಜು, ನಿಟ್ಟೆ ವಾಟರ್‌ ಸಫ್ಲೈ, ಬೊರ್ಗಲ್ಗುಡ್ಡೆ, ಹಾಮಾಜೆ, ಕುಂಟಾಡಿ, ಕೈರಬೆಟ್ಟು, ನಿಟ್ಟೆ ಪಂಚಾಯಿತಿ, ನಿಟ್ಟೆ ಮಸೀದಿ, ಲೆಮಿನಾ ಇಂಡಸ್ಟ್ರಿಸ್, ದೂಪದಕಟ್ಟೆ, ಕೆಮ್ಮಣ್ಣು, ನೆಲ್ಲಿಗುಡ್ಡೆ, ಬಾರಾಡಿ, ಬೇಲಾಡಿ, ಕಾಂತಾವರ, ಕಲ್ಯಾ, ಬೋಳ ಪಂಚಾಯಿತಿ, ಪಿಲಿಯೂರು, ಕೆರೆಕೋಡಿ, ಒಂಜಾರೆಕಟ್ಟೆ, ಬಾರೆಬೈಲು, ಕೆಂಪುಜೋರ, ಪುಕ್ಕಲ್ಲು ಮತ್ತು ಸುತ್ತಮುತ್ತ ವಿದ್ಯುತ್‌ ವ್ಯತ್ಯಯವಾಗಲಿದೆ.ಕಾರ್ಕಳ: ವಿದ್ಯುತ್‌ ಉಪಕೇಂದ್ರ ಹಿರಿಯಡ್ಕದಲ್ಲಿ ಬಸ್ಬಾರ್‌ ಮತ್ತು ಇದಕ್ಕೆ ಸಂಬಂಧಿಸಿದ ಉಪಕರಣಗಳ ವಾರ್ಷಿಕ ನಿರ್ವಹಣೆ ಕಾಮಗಾರಿ ಫೆ.27ರಂದು ನಡೆಯಲಿದೆ. ಆದ್ದರಿಂದ ಸದರಿ ಸ್ಥಾವರದಿಂದ ಹೊರಡುವ ಹೆಬ್ರಿ ಫೀಡರ್‌ನಲ್ಲಿ ವಿದ್ಯುತ್‌ ಅಡಚಣೆಯಾಗುವುದರಿಂದ ಹೆಬ್ರಿ ಉಪಕೇಂದ್ರದಿಂದ ಸರಬರಾಜು ಆಗುವ ಬೇಳೆಂಜೆ, ಕಳ್ತೂರು, ಸಂತೆಕಟ್ಟೆ, ಕರ್ಜೆ, ಮುಂಡಾಡಿಜೆಡ್ಡು, ಕುರ್ಪಾಡಿ, ಚಾರ, ಶಿವಪುರ, ಕನ್ಯಾನ, ನಾಡ್ಪಾಲು, ಸೋಮೇಶ್ವರ, ಸೀತಾನದಿ, ಮಡಾಮಕ್ಕಿ, ಕಾಸನಮಕ್ಕಿ, ಮುದ್ರಾಡಿ, ವರಂಗ, ಮುನಿಯಾಲು, ಕಬ್ಬಿನಾಲೆ, ಕೆರೆಬೆಟ್ಟು, ಹೊಸುರು, ಬಚ್ಚಾಪ್ಪು, ಹೆಬ್ರಿ ಮತ್ತು ಸುತ್ತಮುತ್ತ ಬೆಳಗ್ಗೆ 9ಗಂಟೆಯಿಂದ ಸಂಜೆ 5.30ರ ವರೆಗೆ ವಿದ್ಯುತ್‌ ವ್ಯತ್ಯವಾಗಲಿದೆ. 

ಕಾರ್ಕಳ: ಲೈನ್‌ ಶಿಫ್ಟಿಂಗ್‌/ನಿರ್ವಹಣೆ ಕಾಮಗಾರಿ ಕಾರ್ಯ ಫೆ.27ರಂದು ನಡೆಯಲಿದ್ದು, ಅಂದು ಕೇಮಾರ್‌ ವಿದ್ಯುತ್‌ ಕೇಂದ್ರದಿಂದ ಹೊರಡುವ ಬಜಗೋಳಿ, ಹೊಸ್ಮಾರು, ಮಿಯ್ಯಾರು ಮತ್ತು ಕಾರ್ಕಳ ಎಕ್ಸ್‌ಪ್ರೆಸ್‌ ಫೀಡರ್‌ನಲ್ಲಿ ಬಜಗೋಳಿ, ಮುಡ್ರಾಲು, ಕಡಾರಿ, ಮುಳ್ಳೂರು, ಮಾಳ, ಗುರ್ಗಲ್ಗುಡ್ಡೆ, ಚೌಕಿ, ಹುಕ್ರಟ್ಟೆ, ನೆಲ್ಲಿಕಾರು, ಹೊಸ್ಮಾರು, ಈದು, ನಲ್ಲೂರು, ಜೋಡುಕಟ್ಟೆ, ಕುಂಟಿಬೈಲು, ಮಿಯ್ಯಾರು, ರೆಂಜಾಳ, ಬೊರ್ಕಟ್ಟೆ, ರಾಮೇರಗುತ್ತು, ಕಾಜರಬೈಲು, ಅಡ್ಕರಪಲ್ಕೆ, ಕುರ್ಕಲ್ಪಲ್ಕೆ, ಹಿನಾಪಾಡಿ, ನೆಲ್ಲಿಗುಡ್ಡೆ, ಕಳತ್ರಪಾದೆ, ಮಂಜಡ್ಕ, ಜೋಡುಕಟ್ಟೆ, ಕಾಳಿಕಾಂಬ, ಪುಲ್ಕೇರಿ ಮತ್ತು ಸುತ್ತಮುತ್ತ ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ವಿದ್ಯುತ್‌ ನಿಲುಗಡೆಯಲಾಗಲಿದೆ.ಉಡುಪಿ: ವಿದ್ಯುತ್‌ ಉಪಕೇಂದ್ರ ಹಿರಿಯಡ್ಕದಲ್ಲಿ ಬಸ್ಬಾರ್‌ ಮತ್ತು ಇದಕ್ಕೆ ಸಂಬಂಧಿಸಿದ ಉಪಕರಣಗಳ ವಾರ್ಷಿಕನಿರ್ವಹಣೆ ಕಾಮಗಾರಿ ಫೆ.27ರಂದು ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಹಿರಿಯಡ್ಕ ವಿದ್ಯುತ್‌ ಉಪಕೇಂದ್ರದಿಂದ ವಿದ್ಯುತ್‌ ಪಡೆಯುವ ಮಧುವನ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಮಂದಾರ್ತಿ ಮತ್ತು ಬಾರ್ಕೂರು ಎಕ್ಸ್‌ಪ್ರೆಸ್‌ ಫೀಡರ್‌ನಲ್ಲಿ ಹಾಗೂ ಪರ್ಕಳ, ಮಾಹೆ ಮತ್ತು ಹಿರಿಯಡಕ, ಬಜೆ, ಪೆರ್ಡೂರು, ಮಾಣೈ, ಹಿರೇಬೆಟ್ಟು ಫೀಡರ್‌, ಪರ್ಕಳ ಸಿಟಿ, ಮಾಹೆ, ಹಿರಿಯಡ್ಕಪೇಟೆ, ಬಜೆ, ಬಜೆ ವಾಟರ್‌ ಸಫ್ಲೈ, ಅಲಂಗಾರ್, ಜೋಗಿಬೆಟ್ಟು, ಹತ್ರಬೈಲು, ಪೆರ್ಡೂರು, ಮೇಲ್ಪೇಟೆ, ಕುಂತಳಕಟ್ಟೆ, ಎಳ್ಳಾರೆ, ಪಾಡಿಗಾರ, ಹೊಸಾಳ, ಕಚ್ಚೂರು, ಹೇರಾಡಿ, ನಡೂರು, ಪಡುನೀಲಾವರ, ಬೆಣ್ಣೆಕುದ್ರು, ಶಿರೂರು, ನಂಚಾರು, ಹಿಲಿಯಾಣ, ಮಂದಾರ್ತಿ, ಹೆಬ್ಬಾಡಿ ಮತ್ತುಸುತ್ತಮುತ್ತ ಬೆಳಗ್ಗೆ 9.30ರಿಂದ ಸಂಜೆ 4.30ರ ವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ.ಉಡುಪಿ: ಕುಂಜಿಬೆಟ್ಟು ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಚಿಟ್ಪಾಡಿ ಫೀಡರ್‌ ಮಾರ್ಗದಲ್ಲಿ ಹಾಗೂ ಮಣಿಪಾಲ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಮೂಡುಬೆಳ್ಳೆ, ವಿ.ಪಿ.ನಗರ, ವಿ.ಆರ್.ನಗರ, ರಾಯಲ್‌ ಎಂಬೆಸಿ, ಕೆ.ಎಂ.ಎಫ್., ಇಂದ್ರಾಳಿ ಫೀಡರ್‌ ಮಾರ್ಗದಲ್ಲಿ ಫೆ.27ರಂದು ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.ಆದ್ದರಿಂದ ಇಂದಿರಾನಗರ, ಕಸ್ತೂರ್ಬಾನಗರ, ಕುಕ್ಕಿಕಟ್ಟೆ, ಪದ್ಮನಾಭನಗರ, ಚಿಟ್ಪಾಡಿ, ಹನುಮಾನ್‌ ಗ್ಯಾರೇಜ್, ಮಣಿಪುರ, ಮೂಡುಬೆಳ್ಳೆ, ಮರ್ಣೆ, ಕಟ್ಟಿಂಗೇರಿ, ಕೆಮ್ತೂರು, ಸಿಂಡಿಕೇಟ್‌ ಸರ್ಕಲ್, ಎಂ.ಜಿ.ಸಿ. ಸ್ಕೂಲ್, ಬಿ.ಎಸ್.ಎನ್.ಎಲ್, ಟೆಲಿಫೋನ್‌ ಎಕ್ಸ್‌ಚೇಂಜ್, ವಿದ್ಯಾರತ್ನನಗರ, ಡಿ.ಸಿ.ಆಫೀಸ್, ಆರ್.ಟಿ.ಒ ಆಫೀಸ್, ಪೆರಂಪಳ್ಳಿ, ಸಗ್ರಿನೋಳೆ, ರೋಯಲ್‌ ಎಂಬೆಸಿ, ಈಶ್ವರನಗರ, ಸರಳೆಬೆಟ್ಟು, ಗಣೇಶ್‌ಭಾಗ್, ಹಯಗ್ರೀವನಗರ, ಲಕ್ಷ್ಮೀಂದ್ರನಗರ, ಇಂದ್ರಾಳಿ ರೈಲ್ವೇ ನಿಲ್ದಾಣ ಮತ್ತು ಸುತ್ತಮುತ್ತ ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ವಿದ್ಯುತ್‌ ವ್ಯತ್ಯವಾಗಲಿದೆ.

ಕುಂದಾಪುರ: ಹಿರಿಯಡ್ಕ ವಿದ್ಯುತ್‌ ಉಪಕೇಂದ್ರದಲ್ಲಿ ಬಸ್‌ ಬಾರ್‌ ಮತ್ತು ಇದಕ್ಕೆ ಸಂಬಂಧಿಸಿದ ಉಪಕರಣಗಳ ವಾರ್ಷಿಕ ನಿರ್ವಹಣಾ ಕಾಮಗಾರಿ ಫೆ.27ರಂದು ನಡೆಯಲಿದೆ.ಆದ್ದರಿಂದ ಉಪಕೇಂದ್ರಗಳಾದ ಮಧುವನ, ಕುಂದಾಪುರ ಮತ್ತು ನಾವುಂದ ಹಾಗೂ ಉಪಕೇಂದ್ರಗಳಾದ ತಲ್ಲೂರು, ಬೈಂದೂರು, ಕೊಲ್ಲೂರು, ಗಂಗೊಳ್ಳಿ ಮತ್ತು ಜಿ.ಐ.ಎಸ್‌. ಕೋಟಗಳಿಂದ ಹೊರಡುವ ಎಲ್ಲಾ ಫೀಡರ್‌ಗಳ ಜೊತೆಗೆ ಕುಂದಾಪುರ-ಗಂಗೊಳ್ಳಿ ಮಾರ್ಗ, ಸೌಪರ್ಣಿಕಾ ಏತನೀರಾವರಿ ಸ್ಥಾವರ ಆಲೂರು, ಸೌಕೂರು ಏತ ನೀರಾವರಿ ವಿದ್ಯುತ್‌ ಮಾರ್ಗ ಹಾಗೂ ಕೊಂಕಣ ರೈಲ್ವೆ ನಿಗಮ ನಿಯಮಿತದ ಸೇನಾಪುರ ಟಿಎಸ್‌ಎಸ್‌ಗೆ ಕುಂದಾಪುರಪೇಟೆ, ಹಂಗ್ಳೂರು, ಬೀಜಾಡಿ, ಗೋಪಾಡಿ, ಜಪ್ತಿವಾಟರ್‌ಸಫ್ಲೈ ಕೋಣಿ, ಕಂದಾವರ, ಬಳ್ಕೂರು, ಹಳ್ನಾಡು, ಅಂಪಾರು, ಕಾವ್ರಾಡಿ, ಜಪ್ತಿ, ಹೊಂಬಾಡಿ-ಮಂಡಾಡಿ, ಕಾಳಾವರ, ಅಸೋಡು, ಬಸ್ರೂರು, ಕೋಡಿ, ಅನಗಳ್ಳಿ, ಕುಂಭಾಶಿ, ತೆಕ್ಕಟ್ಟೆ, ವಕ್ವಾಡಿ, ಕೋಟೇಶ್ವರ, ಮೊಳಹಳ್ಳಿ, ಕೊರ್ಗಿ, ಯಡಾಡಿ-ಮತ್ಯಾಡಿ, ವಂಡ್ಸೆ, ಗುಲ್ವಾಡಿ, ಬಾಂಡ್ಯ, ಗಂಗೊಳ್ಳಿ, ಶಿರೂರು, ಉಪ್ಪುಂದ, ಬಿಜೂರು, ಕೊಲ್ಲೂರು, ತಗ್ಗರ್ಸೆ, ಕರ್ಕುಂಜೆ, ಕೆರಾಡಿ, ಆಜ್ರಿ, ತಲ್ಲೂರು, ಬೈಂದೂರು, ಗೋಳಿಹೊಳೆ, ಯಳಜಿತ್, ಗಂಗನಾಡು, ನಾಡಾ, ಹೊಸಾಡು, ಗುಜ್ಜಾಡಿ, ಹೊಸೂರು, ಹಡವು, ದೇವಲ್ಕುಂದ, ಕಿರಿಮಂಜೇಶ್ವರ, ಅರೆಶಿರೂರು, ಎಲ್ಲೂರು, ಬಾಳ್‌ಕೊಡ್ಲು, ಹಾಲ್ಕಲ್‌, ಮಾವಿನಕಾರು, ಬಾವಡಿ, ಮೇಘನಿ, ಹಳ್ಳಿಬೇರು, ಜನ್ನಾಲ್‌ ಬೀಸಿನಪಾರೆ, ಸೆಳ್‌ಕೊಡು, ಕಾನ್ಕಿ, ಮೆಕ್ಕೆ, ಮುದೂರು, ಅರೆಹೊಳೆ, ನಾಗೂರುನಾವುಂದ, ಮರವಂತೆ, ಹೇರೂರು, ಕೆರ್ಗಾಲ್, ತ್ರಾಸಿ, ಕೆಂಚನೂರು, ಯಡ್ತರೆ, ಪಡುವರಿ, ಹೆಮ್ಮಾಡಿ, ಕಟ್‌ಬೆಲ್ತೂರು, ಬೆಳ್ಳಾಲ, ಕೊಡ್ಲಾಡಿ, ಚಿತ್ತೂರು, ಹಟ್ಟಿಯಂಗಡಿ, ಬಡಾಕೆರೆ, ಕಾಲ್ತೋಡು, ಆಲೂರು, ಹರ್ಕೂರು, ಹಕ್ಲಾಡಿ, ನೂಜಾಡಿ, ಕುಂದಬಾರಂದಾಡಿ, ಸೇನಾಪುರ, ಕಂಬದಕೋಣೆ, ಉಳ್ಳೂರು-11, ಹೆರಂಜಾಲು, ನಂದನವನ, ಜಡ್ಕಲ್, ಇಡೂರು-ಕುಂಜ್ಞಾಡಿ, ಮುದೂರು, ಮುಳ್ಳಿಕಟ್ಟೆ, ಕನ್ಯಾನ, ಉಪ್ಪಿನಕುದ್ರು, ಉಳ್ತೂರು, ಕೆದೂರು, ಬೇಳೂರು, ವಡ್ಡರ್ಸೆ, ಗಿಳಿಯಾರು, ಬನ್ನಾಡಿ, ಮಣೂರು, ಕೋಟತಟ್ಟು, ಸಾಲಿಗ್ರಾಮಟಿ.ಎಮ್.ಸಿ, ಕಾರ್ಕಡ, ಚಿತ್ರಪಾಡಿ, ಪಾರಂಪಳ್ಳಿ, ಪಾಂಡೇಶ್ವರ, ಮೂಡಹಡು, ಐರೋಡಿ, ಗುಂಡ್ಮಿ, ಕಾವಡಿ, ಯಡ್ತಾಡಿ, ಹೆಗ್ಗುಂಜೆ, ಶಿರಿಯಾರ, ಶಿರೂರು, ಬಿಲ್ಲಾಡಿ, ವಂಡಾರು, ಆವರ್ಸೆ, ಕಕ್ಕುಂಜೆ, ಅಚ್ಲಾಡಿ, ಹಳ್ಳಾಡಿ-ಹರ್ಕಾಡಿ, ಹೆಸ್ಕತ್ತೂರು, ಕೊರ್ಗಿ ಗ್ರಾಮಗಳ ಸುತ್ತಮುತ್ತ ಬೆಳಗ್ಗೆ 9.30ರಿಂದ ಸಂಜೆ 4.30ರ ವರೆಗೆ ವಿದ್ಯುತ್‌ ನಿಲುಗಡೆಯಾಗಲಿದೆ. ಮಣಿಪಾಲ: ಮಣಿಪಾಲ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಪ್ರಗತಿನಗರ ಫೀಡರ್‌ ಮಾರ್ಗದಲ್ಲಿ ನಿರ್ವಹಣೆ ಕಾಮಗಾರಿ ಫೆ.28ರಮದು ನಡೆಯಲಿದೆ. ಅಂದು ಪ್ರಗತಿನಗರ, ಶಾಂತಿನಗರ, ರಾಜೀವನಗರ, 80 ಬಡಗುಬೆಟ್ಟು ಮತ್ತು ಸುತ್ತಮುತ್ತ ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ.ಉಡುಪಿ: ಬೆಳಪು ಉಪಕೇಂದ್ರದಲ್ಲಿ ಲೈನ್‌ ಐಸೋಲೇಟರ್‌ನ ಬೇಸ್ಸಿ-ಚಾನಲ್‌ನ ಕಾಮಗಾರಿ ಹಾಗೂ ಭೂತಂತಿಯ ವಾಹಕವನ್ನು ಬದಲಾಯಿಸಲು ಮತ್ತು ಬಾಕಿ ಇರುವ ಕಾಮಗಾರಿಯನ್ನು ಫೆ.29ರಂದು ಹಮ್ಮಿಕೊಳ್ಳಲಾಗಿದೆ.ಆದ್ದರಿಂದ ಬೆಳಪು, ಬೆಳಪು ಉಪಕೇಂದ್ರದಿಂದ ಹೊರಡುವ ಎಲ್ಲ ವಿದ್ಯುತ್‌ ಮಾರ್ಗಗಳಾದ ಮಲ್ಲಾರ್‌ ಮತ್ತು ಪಣಿಯೂರು ಫೀಡರ್‌ ಮಾರ್ಗದಲ್ಲಿ ಪಣಿಯೂರು, ಬೆಳಪು ಗ್ರಾಮ, ಬೆಳಪು ಇಂಡಸ್ಟ್ರಿಯಲ್‌ ಏರಿಯಾ, ಮಲ್ಲಾರು, ಮಜೂರು, ಕೊಂಬಗುಡ್ಡೆ ಮತ್ತು ಸುತ್ತಮುತ್ತ ಮಧ್ಯಾಹ್ನ 1ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್‌ ವ್ಯತ್ಯವಾಗಲಿದೆ.