ಜ.26 ರಂದು ಶಾಸಕ ಕೆ.ಎಂ.ಉದಯ್‌ಗೆ ಮೌನ ಸಾಧಕ ಪ್ರಶಸ್ತಿ ಪ್ರದಾನ: ಶಿವಲಿಂಗಯ್ಯ

| Published : Jan 22 2025, 12:33 AM IST

ಜ.26 ರಂದು ಶಾಸಕ ಕೆ.ಎಂ.ಉದಯ್‌ಗೆ ಮೌನ ಸಾಧಕ ಪ್ರಶಸ್ತಿ ಪ್ರದಾನ: ಶಿವಲಿಂಗಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಕೆಲಸಗಳು ಮಾತನಾಡಬೇಕೆ ಹೊರತು ಕೇವಲ ಮಾತೆ ಕೆಲಸವಾಗಬಾರದು ಎಂಬಂತೆ ಶಾಸಕರು ಯಾವುದೇ ಪ್ರಚಾರಕ್ಕೆ ಆಸ್ಪದ ನೀಡದೇ ತನ್ನ ತನ್ನ ಕೆಲಸಗಳ ಬಗ್ಗೆ ಹೆಚ್ಚು ಮಾತನಾಡದೆ ಮೌನವಾಗಿದ್ದುಕೊಂಡೇ ಕ್ಷೇತ್ರ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡುತ್ತಿರುವುದನ್ನು ಕ್ಷೇತ್ರದ ಪ್ರಜ್ಞಾವಂತ ನಾಗರಿಕರು ಗಮನಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

76ನೇ ಸಂವಿಧಾನ ದಿನಾಚರಣೆ ಅಂಗವಾಗಿ ಜ.26ರಂದು ಮದ್ದೂರು ಕ್ಷೇತ್ರದ ಶಾಸಕ ಕೆ.ಎಂ.ಉದಯ್ ಅವರಿಗೆ ಮೌನ ಸಾಧಕ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಡಾ.ಜೈ ಭೀಮ್ ದಲಿತ ಜಾಗೃತಿ ಸಮಿತಿ ಅಧ್ಯಕ್ಷ ಚಿಕ್ಕರಸಿನಕೆರೆ ಶಿವಲಿಂಗಯ್ಯ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಜೈ ಭೀಮ್ ದಲಿತ ಜಾಗೃತಿ ಸಮಿತಿ, ಸಿ.ಎ.ಕೆರೆ ಹೋಬಳಿ ಒಕ್ಕೂಟ ಮತ್ತು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಜಿಲ್ಲಾ ಘಟಕದಿಂದ ಅಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ ಎಂದರು.

ಪವಾಡ ರಹಸ್ಯ ಬಯಲು ಕಾರ್ಯಕ್ರಮ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಿಗೆ ಅಭಿನಂದಾನೆ ಹಾಗೂ ಶಾಸಕ ಕೆ.ಎಂ. ಉದಯ್ ಅವರ ಸಾಧನೆ ಗುರುತಿಸಿ ಮೌನ ಸಾಧಕ ಪ್ರಶಸ್ತಿ ನೀಡಿ ಅಭಿನಂದಿಸಲಾಗುತ್ತಿದೆ ಎಂದರು.

ನಮ್ಮ ಕೆಲಸಗಳು ಮಾತನಾಡಬೇಕೆ ಹೊರತು ಕೇವಲ ಮಾತೆ ಕೆಲಸವಾಗಬಾರದು ಎಂಬಂತೆ ಶಾಸಕರು ಯಾವುದೇ ಪ್ರಚಾರಕ್ಕೆ ಆಸ್ಪದ ನೀಡದೇ ತನ್ನ ತನ್ನ ಕೆಲಸಗಳ ಬಗ್ಗೆ ಹೆಚ್ಚು ಮಾತನಾಡದೆ ಮೌನವಾಗಿದ್ದುಕೊಂಡೇ ಕ್ಷೇತ್ರ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡುತ್ತಿರುವುದನ್ನು ಕ್ಷೇತ್ರದ ಪ್ರಜ್ಞಾವಂತ ನಾಗರಿಕರು ಗಮನಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ನಮ್ಮ ಸಮಾಜ ಸೇವಾ ಸಂಸ್ಥೆಗಳ ವತಿಯಿಂದ ಮೌನ ಸಾಧಕ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದೇವೆ ಎಂದರು.

ಶಾಸಕ ಕೆ.ಎಂ. ಉದಯ್ ಅವರು ಕ್ಷೇತ್ರಾದ್ಯಂತ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸ್ಪೂರ್ತಿ ತುಂಬಲಾಗುತ್ತಿದೆ. ಕಾರ್ಯಕ್ರಮದಲ್ಲಿ ಒಕ್ಕಲಿಗರ ಸಂಘದ ನಿರ್ದೇಶಕ, ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಡಾ.ಟಿ.ಎಚ್. ಅಂಜನಪ್ಪ ಅವರು ಜನಸಾಮಾನ್ಯರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ ಎಂದರು.

ಇದೇ ವೇಳೆ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಸಂಸ್ಥಾಪಕ ರಾಜ್ಯಾಧ್ಯಕ್ಷ ಡಾ.ಹುಲಿಕಲ್ ನಟರಾಜ್ ಅವರು ಪವಾಡ ರಹಸ್ಯ ಬಯಲು ಪ್ರದರ್ಶನ ನಡೆಸಿಕೊಡುವರು. ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗಣ್ಯರನ್ನು ಸನ್ಮಾನಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಎಸ್. ಮಹದೇವಯ್ಯ, ವಂಸಂತಮ್ಮ, ಮುಡಿನಹಳ್ಳಿ ತಿಮ್ಮಯ್ಯ ಇದ್ದರು.

ಜಿ.ಎಸ್.ಸುಮಗೆ ಪಿಎಚ್‌.ಡಿ

ಮಳವಳ್ಳಿ:

ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎನ್. ಆನಂದಗೌಡರ ಮಾರ್ಗದರ್ಶನದಲ್ಲಿ ಕೊಳ್ಳೇಗಾಲ ಜೆ.ಎಸ್.ಎಸ್. ಮಹಿಳಾ ಕಾಲೇಜು ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಜಿ.ಎಸ್.ಸುಮ ಅವರು ಗ್ರಾಮೀಣಾಭಿವೃದ್ಧಿಯಲ್ಲಿ ಜನರ ಭಾಗವಹಿಸುವಿಕೆ ಹಾಗೂ ಕೇಂದ್ರ ಸರ್ಕಾರದ ಜನಪರ ಯೋಜನೆಗಳು, ದೊಡ್ಡಮೋಳೆ ಗ್ರಾಮ ಪಂಚಾಯ್ತಿಗೆ ಸಂಬಂಧಿಸಿದಂತೆ ವಿಶೇಷ ಅಧ್ಯಯನ ಎಂಬ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆದಿದ್ದಾರೆಂದು ಕುಲಸಚಿವರು(ಪರೀಕ್ಷಾಂಗ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿ.ಎಸ್.ಸುಮ ಅವರು ಮಂಡ್ಯ ಜಿಲ್ಲೆಯ ಸುಂಡಹಳ್ಳಿ ಮಹದೇವಮ್ಮ ಮತ್ತು ಎಸ್.ಎಂ.ಗುರುಸಿದ್ದಪ್ಪರ ಪುತ್ರಿ, ಕೆ.ಆರ್.ಪೇಟೆ ತಾಲೂಕಿನ ಶೀಳನೆರೆ ಗ್ರಾಮದ ಎಸ್.ಎಸ್.ರೇವಣ್ಣ(ರವಿ)ರ ಪತ್ನಿಯಾಗಿದ್ದಾರೆ.