ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ, ಕೊಡಗು ಗೌಡ ಸಮಾಜ ಹಾಗೂ ಗೌಡ ಸಮಾಜ ಯಲಹಂಕ ಬೆಂಗಳೂರು ಜಂಟಿ ಆಶ್ರಯದಲ್ಲಿ ‘ಪೂಜಾರಿರ ಮೊಣ್ಣಪ್ಪನವರ ಸ್ಮರಣ ಕಾರ‍್ಯಕ್ರಮ’ ವನ್ನು ನಮ್ಮನೆ ಸಾಂಸ್ಕೃತಿಕ ಕಲಾಕೇಂದ್ರ ಬೆಂಗಳೂರಿನಲ್ಲಿ ಅ. 11ರಂದು ಬೆಳಗ್ಗೆ 10ಗಂಟೆಗೆ ಆಯೋಜಿಸಲಾಗಿದೆ.
ನಾಪೋಕ್ಲು: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ, ಕೊಡಗು ಗೌಡ ಸಮಾಜ ಹಾಗೂ ಗೌಡ ಸಮಾಜ ಯಲಹಂಕ ಬೆಂಗಳೂರು ಜಂಟಿ ಆಶ್ರಯದಲ್ಲಿ ‘ಪೂಜಾರಿರ ಮೊಣ್ಣಪ್ಪನವರ ಸ್ಮರಣ ಕಾರ‍್ಯಕ್ರಮ’ ವನ್ನು ನಮ್ಮನೆ ಸಾಂಸ್ಕೃತಿಕ ಕಲಾಕೇಂದ್ರ ಬೆಂಗಳೂರಿನಲ್ಲಿ ಅ. 11ರಂದು ಬೆಳಗ್ಗೆ 10ಗಂಟೆಗೆ ಆಯೋಜಿಸಲಾಗಿದೆ.
ಅಧ್ಯಕ್ಷತೆಯನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ವಹಿಸಲಿದ್ದಾರೆ. ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರು ತೋಟಗಾರಿಕೆ ವಿಭಾಗದ ಮುಖ್ಯಸ್ಥರಾದ ಡಾ. ಕಾವೇರಿಮನ ಬೋಜಪ್ಪ ಉದ್ಘಾಟಿಸಲಿದ್ದಾರೆ. ವಾಣಿಜ್ಯ ತೆರಿಗೆಗಳ ಇಲಾಖೆಯ ನಿವೃತ್ತ ಜಂಟಿ ಆಯುಕ್ತರಾದ ನಂಗಾರು ನಾಣಯ್ಯ, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ಅಧ್ಯಕ್ಷರಾದ ಪಾಣತ್ತಲೆ ಪಳಂಗಪ್ಪ, ಕೊಡಗು ಗೌಡ ಸಮಾಜದ ಅಧ್ಯಕ್ಷರಾದ ಐಯ್ಯಟ್ಟಿರ ಮನೋಜ್ ಕುಮಾರ್, ಕರ್ನಾಟಕ ಅರೆಭಾಷೆ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಕೊಲ್ಯದ ಗಿರೀಶ್, ಕೊಡಗು ಗೌಡ ಸಮಾಜ ಮಡಿಕೇರಿಯ ಅಧ್ಯಕ್ಷರಾದ ದಂಬೇಕೋಡಿ ಎಸ್. ಆನಂದ್, ನಿವೃತ್ತ ಪ್ರಾಂಶುಪಾಲರಾದ ನಂಗಾರು ನಿಂಗರಾಜು, ಹಿರಿಯ ಅರೆಭಾಷೆ ಸಾಹಿತಿ ಹೊಡ್ಡಟ್ಟಿ ಭವಾನಿ ಶಂಕರ್ ಹಾಗೂ ಗೌಡ ಸಮಾಜ ಯಲಹಂಕದ ಅಧ್ಯಕ್ಷರಾದ ಕುಂಜ್ಯಾಳರ ಅಜಿತ್ ಕುಮಾರ್ ಭಾಗವಹಿಸಲಿದ್ದಾರೆ.ವಿಶೇಷ ಪ್ರಬಂಧ ಸ್ಪರ್ಧೆ: ಕಾರ‍್ಯಕ್ರಮದ ಅಂಗವಾಗಿ ‘ಪೂಜಾರಿರ ಮೊಣ್ಣಪ್ಪನವರು ಅರೆಭಾಷೆ ಜನಾಂಗಕ್ಕೆ ಕೊಟ್ಟ ಕೊಡುಗೆ ಮತ್ತು ಅವರ ಬದುಕು’ ಎಂಬ ವಿಷಯದ ಮೇಲೆ ವಯಸ್ಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಪ್ರಬಂಧವು 3 ಪುಟಗಳಿಗೆ ಮೀರದಂತೆ ಇರಬೇಕು, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ನೀಡಲಾಗುವುದು, ಆಸಕ್ತರು ತಮ್ಮ ಪ್ರಬಂಧಗಳನ್ನು ದಿನಾಂಕ ಆ. 5ರೊಳಗಾಗಿ ಅಕಾಡೆಮಿ ಕಚೇರಿಗೆ ತಲುಪಿಸಬೇಕಾಗಿದೆ. =========================================================================