ದೇಶದ ಇತಿಹಾಸ ತಿಳಿದಾಗ ಸತ್ಪ್ರಜೆಗಳಾಗಲು ಸಾಧ್ಯ: ಕೃಷಿ ಸಚಿವ ಸಿಆರ್‌ಎಸ್

| Published : Jan 29 2025, 01:34 AM IST

ದೇಶದ ಇತಿಹಾಸ ತಿಳಿದಾಗ ಸತ್ಪ್ರಜೆಗಳಾಗಲು ಸಾಧ್ಯ: ಕೃಷಿ ಸಚಿವ ಸಿಆರ್‌ಎಸ್
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವ್ಯಾಸಂಗ ಮುಂದಿನ ಭವಿಷ್ಯಕ್ಕೆ ಬಹು ಮುಖ್ಯವಾದ ಹಂತವಾಗಿರುತ್ತದೆ. ಹಾಗಾಗಿ ಬಹಳ ಶ್ರದ್ಧೆ ಆಸಕ್ತಿ ವಹಿಸಿ ವಿದ್ಯಾಭ್ಯಾಸ ಮಾಡಬೇಕು. ಉತ್ತಮ ಶಿಕ್ಷಣ ಪಡೆದವರೆಲ್ಲರಿಗೂ ಉದ್ಯೋಗ ಸಿಗುವುದಿಲ್ಲ. ಈ ಹಿಂದೆಕೇವಲ ಶೇ.೨-೩ರಷ್ಟು ಫಲಿತಾಂಶವಿದ್ದರೂ ಕೂಡ ಕೆಲಸ ಸಿಗುತ್ತಿತ್ತು. ಆದರೀಗ ಶೇ.೯೯ ರಷ್ಟು ಫಲಿತಾಂಶ ಪಡೆದರೂ ಕೆಲಸ ಸಿಗವುದು ಕಷ್ಟವಾಗುತ್ತಿದೆ.

ಕನ್ನಡಪ್ರಭವಾರ್ತೆ ನಾಗಮಂಗಲ

ಶಾಲಾ-ಕಾಲೇಜು ಹಂತದ ವಿದ್ಯಾರ್ಥಿಗಳು ಸರ್ಕಾರದ ಸವಲತ್ತುಗಳನ್ನು ಪಡೆದು ಶಿಕ್ಷಣ ಪಡೆಯುವ ಜೊತೆಗೆ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಂಡು ದೇಶದ ಇತಿಹಾಸ ತಿಳಿದುಕೊಂಡರಷ್ಟೇ ಉತ್ತಮ ಪ್ರಜೆಗಳಾಗಲು ಸಾಧ್ಯಎಂದು ಕೃಷಿ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ತಾಲೂಕಿನ ಬೆಳ್ಳೂರಿನಲ್ಲಿ ೧ ಕೋಟಿ ರು.ವೆಚ್ಚದಲ್ಲಿ ನಿರ್ಮಿಸಿರುವ ಎಎಲ್‌ಕೆ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ ಹಾಗೂ ೫೫ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಈ ಕಾಲೇಜು ಕಟ್ಟಡದ ಆವರಣಕ್ಕೆ ಕಾಂಪೌಂಡ್, ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ನುಡಿದರು.

ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವ್ಯಾಸಂಗ ಮುಂದಿನ ಭವಿಷ್ಯಕ್ಕೆ ಬಹು ಮುಖ್ಯವಾದ ಹಂತವಾಗಿರುತ್ತದೆ. ಹಾಗಾಗಿ ಬಹಳ ಶ್ರದ್ಧೆ ಆಸಕ್ತಿ ವಹಿಸಿ ವಿದ್ಯಾಭ್ಯಾಸ ಮಾಡಬೇಕು. ಉತ್ತಮ ಶಿಕ್ಷಣ ಪಡೆದವರೆಲ್ಲರಿಗೂ ಉದ್ಯೋಗ ಸಿಗುವುದಿಲ್ಲ. ಈ ಹಿಂದೆಕೇವಲ ಶೇ.೨-೩ರಷ್ಟು ಫಲಿತಾಂಶವಿದ್ದರೂ ಕೂಡ ಕೆಲಸ ಸಿಗುತ್ತಿತ್ತು. ಆದರೀಗ ಶೇ.೯೯ ರಷ್ಟು ಫಲಿತಾಂಶ ಪಡೆದರೂ ಕೆಲಸ ಸಿಗವುದು ಕಷ್ಟವಾಗುತ್ತಿದೆ. ಉದ್ಯೋಗಕ್ಕಿಂತ ಹೆಚ್ಚಾಗಿ ವೈಯುಕ್ತಿಕವಾಗಿ ಯಾವುದಾದರೊಂದು ವೃತ್ತಿ ಆಯ್ಕೆ ಮಾಡಿಕೊಂಡಲ್ಲಿ ಉತ್ತಮ ಜೀವನ ನಡೆಸಬಹುದಾಗಿದೆ ಎಂದರು.

ಶಿಕ್ಷಣ ಪಡೆದ ಮಕ್ಕಳು ಮುಂದಿನ ದಿನಗಳಲ್ಲಿ ಉತ್ತಮ ಬದುಕು ನಡೆಸಲು ಬಹಳಷ್ಟು ಅವಕಾಶಗಳಿವೆ. ಉತ್ತಮ ಅಂಕಗಳಿಕೆಗಷ್ಟೇ ಮಕ್ಕಳನ್ನು ಸೀಮಿತಗೊಳಿಸಬಾರದು. ಶಿಕ್ಷಕರು ಮಕ್ಕಳಿಗೆ ತರಗತಿಯಲ್ಲಿ ಪಾಠ- ಪ್ರವಚನಗಳ ಜೊತೆಗೆ ದೇಶದ ಇತಿಹಾಸದ ಬಗ್ಗೆ ತಿಳಿಸಿ ಸಾಮಾನ್ಯಜ್ಞಾನ ಹೆಚ್ಚಿಸುವ ಪ್ರಯತ್ನ ಮಾಡಬೇಕು. ಗಂಟೆ ಭಾರಿಸುವ ಸಮಯಕ್ಕೆ ಬೆಳಗ್ಗೆ ಶಾಲೆಯ ಹೋಗಿ ಮತ್ತೆ ಸಂಜೆ ಗಂಟೆ ಬಾರಿಸುವ ಮುನ್ನವೇ ಹೊರಡುವುದು ಶಿಕ್ಷಕರ ಕೆಲಸವಲ್ಲ. ಬಿಡುವಿನ ಸಮಯದಲ್ಲಿ ಕನಿಷ್ಠ ಅರ್ಧ ಗಂಟೆ ಕಾಲ ಮಕ್ಕಳನ್ನು ಕೂರಿಸಿಕೊಂಡು ದೇಶದ ವ್ಯವಸ್ಥೆ, ಸಂವಿಧಾನದ ಆಶಯ, ಆಡಳಿತದ ಬಗ್ಗೆ ತಿಳಿಸಿಕೊಡಬೇಕು. ಆಗ ಮಾತ್ರ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಕಳೆದ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಇಡೀ ರಾಜ್ಯದಲ್ಲಿ ಕಡಿಮೆಯಾಗಿತ್ತು. ಅದೇ ರೀತಿ ಜಿಲ್ಲೆಯಲ್ಲೂ ಸಹ ಕಡಿಮೆ ಫಲಿತಾಂಶ ಬಂದಿತ್ತು. ಜಿಲ್ಲಾಧಿಕಾರಿಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಾಕಷ್ಟು ಸಮರ್ಥನೆ ನೀಡಿದ್ದರು. ಕಾರಣ ಏನೇ ಇದ್ದರೂ ಫಲಿತಾಂಶ ಫಲಿತಾಂಶವೇ ಆಗಿರುತ್ತದೆ. ನಾನು ಅಂದೇ ಜಿಲ್ಲಾಧಿಕಾರಿಗಳಿಗೆ ಮುಂದೆ ಈ ರೀತಿ ಆಗಬಾರದೆಂದು ಸೂಚನೆ ನೀಡಿದ್ದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲೆಯ ಎಲ್ಲ ಶಿಕ್ಷಕರಿಗೂ ಸೂಕ್ತ ತರಬೇತಿ ನೀಡಿ, ಪರೀಕ್ಷೆ ಬರೆಯಲು ಯಾವ ರೀತಿ ಮಾನಸಿಕವಾಗಿ ಸಿದ್ಧರಾಗಿ ಪರೀಕ್ಷೆ ಎದುರಿಸಬೇಕೆಂಬುದನ್ನು ಮಕ್ಕಳಿಗೆ ತರಬೇತಿ ಕೊಟ್ಟು ಆತ್ಮಸ್ಥೈರ್ಯ ಮೂಡಿಸಿದ್ದಾರೆ. ಹಾಗಾಗಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಭಯಪಡದೆ ಪರೀಕ್ಷೆ ಬರೆದು ಉತ್ತಮ ಫಲಿತಾಂಶ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಬೆಳ್ಳೂರು ಪ.ಪಂ. ಅಧ್ಯಕ್ಷೆ ಲಕ್ಷ್ಮಮ್ಮ, ಉಪಾಧ್ಯಕ್ಷ ಮಹಮ್ಮದ್ ಯಾಸೀನ್, ಸ್ಥಾಯಿ ಸಮಿತಿ ಅಧ್ಯಕ್ಷ ಆಕರ್ಷ್‌ ಜೈನ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮೂಡ್ಲೀಗೌಡ, ತಹಸೀಲ್ದಾರ್ ಜಿ. ಆದರ್ಶ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಚಲುವಯ್ಯ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಜೆ.ಕೆ. ರಮೇಶ್‌ಗೌಡ, ಉಪನ್ಯಾಸಕ ಸಿ.ಆರ್. ಚಂದ್ರಶೇಖರ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೆ.ವೈ. ಮಂಜುನಾಥ್, ಸಿಪಿಐ