ಗುರುವಿನ ಮನೆಯಲ್ಲಿ ಶಾಂತಿ, ನೆಮ್ಮದಿ ಕಾಣಲು ಸಾಧ್ಯ: ವಿರೂಪಾಕ್ಷಪ್ಪ ಹೇಳಿಕೆ

| Published : Aug 06 2025, 01:15 AM IST

ಗುರುವಿನ ಮನೆಯಲ್ಲಿ ಶಾಂತಿ, ನೆಮ್ಮದಿ ಕಾಣಲು ಸಾಧ್ಯ: ವಿರೂಪಾಕ್ಷಪ್ಪ ಹೇಳಿಕೆ
Share this Article
  • FB
  • TW
  • Linkdin
  • Email

ಸಾರಾಂಶ

12ನೇ ಶತಮಾನದ ಶರಣರು ನಮಗಾಗಿ ಮಾಡಿಕೊಂಡ ಕೆಲಸ ನಾವು ಇರುವವರೆಗೆ ಮಾತ್ರ. ನಾವು ಬೇರೆಯವರಿಗಾಗಿ ಸಮಾಜಕ್ಕೆ ಮಾಡುವ ಸೇವೆ ಶಾಶ್ವತ ಎಂದು ಶರಣರು ಪ್ರತಿಪಾದಿಸಿದ ವಚನಗಳಲ್ಲಿವೆ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದ್ದಾರೆ.

- ಮನೆಯಂಗಳದಲ್ಲಿ ಶ್ರಾವಣ ಬಂತು ಅನುಭಾವ ತಂತು ಕಾರ್ಯಕ್ರಮ

- - -

ಚನ್ನಗಿರಿ: 12ನೇ ಶತಮಾನದ ಶರಣರು ನಮಗಾಗಿ ಮಾಡಿಕೊಂಡ ಕೆಲಸ ನಾವು ಇರುವವರೆಗೆ ಮಾತ್ರ. ನಾವು ಬೇರೆಯವರಿಗಾಗಿ ಸಮಾಜಕ್ಕೆ ಮಾಡುವ ಸೇವೆ ಶಾಶ್ವತ ಎಂದು ಶರಣರು ಪ್ರತಿಪಾದಿಸಿದ ವಚನಗಳಲ್ಲಿವೆ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.

ಸೋಮವಾರ ಸಂಜೆ ತಾಲೂಕಿನ ಪಾಂಡೋಮಟ್ಟಿ ಗ್ರಾಮದ ಸಿ.ಆರ್.ನಾಗರಾಜ್ ಕುಟುಂಬದವರ ಮತ್ತು ಜಾಗತಿಕ ಲಿಂಗಾಯಿತ ಮಹಾಸಭಾ ವತಿಯಿಂದ ಏರ್ಪಡಿಸಿದ್ದ ಮನೆಯಂಗಳದಲ್ಲಿ ಶ್ರಾವಣ ಬಂತು ಅನುಭಾವ ತಂತು ಎಂಬ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಇಂದು ಅರಮನೆಗಿಂತ ಗುರುವಿನ ಮನೆಯಲ್ಲಿ ಶಾಂತಿ, ನೆಮ್ಮದಿಯನ್ನು ಕಾಣಲು ಸಾಧ್ಯವಾಗಿದೆ. ಧಾರ್ಮಿಕ ಮನೋಭಾವನೆಗಳು ಪ್ರತಿಯೊಬ್ಬರಲ್ಲಿಯೋ ಬರಬೇಕು. ಮಾನವ ದಾನವನಾಗದೇ, ದೇವನಾಗಬೇಕು ಎನ್ನುವುದೇ ಶ್ರಾವಣ ಬಂತು ಅನುಭಾವ ತಂತು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.

ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಮಹಾಸ್ವಾಮೀಜಿ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ, ಶರಣರು ಬರೆದ ವಚನ ಸಾಹಿತ್ಯದ ನಿತ್ಯ ಅಧ್ಯಯನದಿಂದ ಬದುಕು ಅರಿಯಬೇಕು. ವಚನಗಳಲ್ಲಿ ಅಡಗಿರುವ ಸಾರವನ್ನು ಮೈಗೂಡಿಸಿಕೊಂಡು ಮುನ್ನಡೆದಾಗ ಕಲ್ಯಾಣ ರಾಜ್ಯ ನಮ್ಮದಾಗಲಿದೆ ಎಂದು ವಚನ ಸಾಹಿತ್ಯದ ಮಹತ್ವ ತಿಳಿಸಿದರು.

ವಚನಗಳಲ್ಲಿ ಶರಣ ಸಾಹಿತ್ಯ ಎಂಬ ವಿಷಯ ಕುರಿತಂತೆ ಹಿರೇಕೋಗಲೂರು ಶರಣಪ್ಪ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮಹಾಸಭಾದ ಮಹಿಳಾ ಘಟಕ ಅಧ್ಯಕ್ಷೆ ಮಂಜುಳಾ ಟಿ.ವಿ.ರಾಜು, ಚಿತ್ರದುರ್ಗದ ಹಾಸ್ಯಸಾಹಿತಿ ಜಗನ್ನಾಥ್, ಮಹಾಸಭಾದ ಕಾರ್ಯದರ್ಶಿ ಕೆ.ಜಿ. ಶಿವಮೂರ್ತಿ, ನಾಗರಾಜ್, ಮುಗಳಿಹಳ್ಳಿ ಧನಂಜಯ, ಎಂ.ಯು.ಚನ್ನಬಸಪ್ಪ, ಟಿ.ವಿ.ಚಂದ್ರಪ್ಪ ಉಪಸ್ಥಿತರಿದ್ದರು.

- - -

-5ಕೆಸಿಎನ್‌ಜಿ1.ಜೆಪಿಜಿ:

ಶ್ರಾವಣ ಬಂತು ಅನುಭಾವ ತಂತು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ನೆರವೇರಿಸಿದರು. ಪಾಂಡೋಮಟ್ಟಿ ಶ್ರೀ ಮತ್ತಿತರ ಗಣ್ಯರು ಇದ್ದರು.