ಮುಸ್ಲಿಂ ತುಷ್ಟೀಕರಣದಿಂದ ಕರ್ನಾಟಕ ಮುಂದೊಂದು ದಿನ ಕಾಶ್ಮೀರ ಆದೀತು: ಆಂದೋಲಾ ಶ್ರೀ

| Published : Apr 23 2024, 12:52 AM IST

ಮುಸ್ಲಿಂ ತುಷ್ಟೀಕರಣದಿಂದ ಕರ್ನಾಟಕ ಮುಂದೊಂದು ದಿನ ಕಾಶ್ಮೀರ ಆದೀತು: ಆಂದೋಲಾ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಆರ್‌ಎಸ್ಸೆಸ್‌ ತೆಗಳುವ ಈ ಕೂಗುಮಾರಿ ಸಚಿವ ಜೋಡಿಗೆ ದಮ್‌ ಇದ್ದರೆ ಹುಬ್ಬಳ್ಳಿ ನೇಹಾ ಹತ್ಯೆಯ ಹಂತಕ ಫಯಾಜ್‌ನನ್ನು ಉಗ್ರ ಎನ್ನಲಿ, ಉಗ್ರ ಪಟ್ಟ ಕಟ್ಟಿರೆಂದು ಹೇಳಿಕೆ ಕೊಡಲಿ, ಇದೊಂದು ಭೀಭತ್ಸ ಕತ್ಯವೆಂದು ಹತ್ಯೆಯನ್ನು ಖಂಡಿಸಲಿ ನೋಡೋಣ.

ಕನ್ನಡಪ್ರಭ ವಾರ್ತೆ ಕಲಬುರಗಿ

ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಹತ್ಯೆ ಖಂಡಿಸಿ ಕಲಬುರಗಿಯಲ್ಲಿ ಭಾರತೀಯ ಜನತಾ ಪಕ್ಷ ಬೀದಿಗೆ ಇಳಿದು ಸೋಮವಾರ ಭಾರಿ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರ ಹಾಗೂ ಸಾರ್ವಜನಿಕರ ಗಮನ ಸೆಳೆಯಿತು.

ಬೆಳಗ್ಗೆ 11 ಗಂಟೆಯಿಂದಲೇ ಇಲ್ಲಿನ ಜನ ಹಾಗೂ ವಾಹನ ಸಂಚಾರ ದಟ್ಟಣೆಯಿರುವ ಸರ್ದಾರ್‌ ಪಟೇಲ್‌ ವೃತ್ತದಲ್ಲಿ ಸೇರಿದ ಬಿಜಪಿ ಮುಖಂಡರು ರಸ್ತೆ ತಡೆದು ಮಾನವ ಸರಪಳಿ ನಿರ್ಮಿಸಿ ಹೋರಾಟ ಶುರು ಮಾಡಿದಾಗ ನಗರದಲ್ಲಿ ಮುಕ್ಯ ರಸ್ತೆ ಸಂಚಾರ ಸ್ತಬ್ದವಾಗಿತ್ತು. ಉರಿ ಬಿಸಿಲಲ್ಲೇ 3 ಗಂಟೆಗೂ ಹೆಚ್ಚು ಅವಧಿ ನಡೆದ ಹೋರಾಟದಲ್ಲಿ ಸಾವಿರಾರು ಜನ ಬಿಸಿಲನ್ನೂ ಲೆಕ್ಕಿಸದೆ ಪಾಲ್ಗೊಂಡಿದ್ದರು.

ಬಿಜೆಪಿ ಸಂಸತ್‌ ಚುನಾವಣೆಯ ಹುರಿಯಾಳು ಡಾ. ಉಮೇಶ ಜಾಧವ್‌, ವಿಜಯಪುರ ಶಾಸಕ ಬಸವನಗೌಡ ಪಾಟೀಲ್‌ ಯಾತ್ನಾಳ್‌, ಮಾಜಿ ಶಾಸಕ ರಾಜಕುಮಾರ್‌ ಪಾಟೀಲ್‌ ತೇಲ್ಕೂರ್‌, ದತ್ತಾತ್ರೇಯ ರೇವೂರ್‌, ಬಿಜೆಪಿ ನಗರಾಧ್ಯಕ್ಷ ಶಿವರಾಜ ರದ್ದೇವಾಡಗಿ, ನಗರಾಧ್ಯಕ್ಷ ಚಂದು ಪಾಟೀಲ್‌, ಶ್ರೀರಾಮ ಸೇನೆ ಮುಖ್ಯಸ್ಥರಾದ ಆಂದೋಲಾ ಕರುಣೇಶ್ವರ ಮಠದ ಸಿದ್ದಲಿಂಗ ಶ್ರೀಗಳು ಸೇರಿದಂತೆ ಅನೇಕ ಮಠಾಧೀಶರು ಹೋರಾಟದಲ್ಲಿ ಬಿಜೆಪಿ ಜೊತೆ ಕೈಜೋಡಿಸಿದ್ದರು. ಬಿಜೆಪಿಯ ಮಹಿಳಾ ಮೋರ್ಚಾದಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ನಗರವಾಸಿ ಮಹಿಳೆಯರು, ಯುವತಿಯರು ಹೋರಾಟದಲ್ಲಿ ಪಾಲ್ಗೊಂಡಿದ್ದರು.

ಕೂಗುಮಾರಿ ಜೋಡಿ ಫಯಾಜ್‌ಗೆ ಉಗ್ರ ಅನ್ನಲಿ ನೋಡೋಣ: ಕಲಬುರಗಿಯಿಂದ ಸಿದ್ದರಾಮಯ್ಯ ಸಂಪುಟದಲ್ಲಿರುವ ಆರ್‌ಡಿಆರ್‌ ಸಚಿವ ಪ್ರಿಯಾಂಕ್‌ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಇವರನ್ನು ಕೂಗುಮಾರಿ ಸಚಿವರು ಎಂದು ಗೇಲಿ ಮಾಡಿದ ಆಂದೋಲಾ ಶ್ರೀಗಳು ವಿಶ್ವದ ಎಲ್ಲೇ ಏನೇ ನಡೆದರೂ ನಮ್ಮದೊಂದಿರಲಿ ಎಂದು ಹೇಳಿಕೆ ಕೊಡುತ್ತಾರೆಯೇ ವಿನಹಃ ನಯಾಪೈಸೆ ಸ್ಥಳೀಯವಾಗಿ ಇವರ ಹಳಿಕೆ ಪ್ರಯೋಜನಕ್ಕಿಲ್ಲ ಎಂದರು.

ಆರ್‌ಎಸ್ಸೆಸ್‌ ತೆಗಳುವ ಈ ಕೂಗುಮಾರಿ ಸಚಿವ ಜೋಡಿಗೆ ದಮ್‌ ಇದ್ದರೆ ಹುಬ್ಬಳ್ಳಿ ನೇಹಾ ಹತ್ಯೆಯ ಹಂತಕ ಫಯಾಜ್‌ನನ್ನು ಉಗ್ರ ಎನ್ನಲಿ, ಉಗ್ರ ಪಟ್ಟ ಕಟ್ಟಿರೆಂದು ಹೇಳಿಕೆ ಕೊಡಲಿ, ಇದೊಂದು ಭೀಭತ್ಸ ಕತ್ಯವೆಂದು ಹತ್ಯೆಯನ್ನು ಖಂಡಿಸಲಿ ನೋಡೋಣ ಎಂದು ಆಂದೋಲಾ ಶ್ರೀಗಳು ಸಚಿವದ್ವಯರಿಗೆ ಸವಾಲು ಹಾಕಿದರು.

ಕೇರಳ ಸ್ಟೋರಿ, ಕಾಶ್ಮೀರ ಫೈಲ್‌ಗಳನ್ನೆಲ್ಲ ಕಟ್ಟುಕತೆ ಎಂದವರು ಹುಬ್ಬಳ್ಳಿ ಘಟನೆಗೆ ಏನು ಹಳುತ್ತಾರೆ. ಮನೆಯಂಗಳದಲ್ಲೇ ಲವ್‌ ಜಿಹಾದಿಗಳು ರಕ್ತ ಸುರಿಸುತ್ತಿದ್ದಾರೆ. ಇನ್ನೂ ಮುಸ್ಲಿಂರನ್ನೇ ಓಲೈಸುತ್ತ ಕೂಡುವ ಕಾಂಗ್ರೆಸ್ಸಿಗರ ಬಗ್ಗೆ ಹಿಂದುಗಳು ಎಚ್ಚರದಿಂದ ಇರಬೇಕಂದು ಆಂದೋಲಾ ಶೀಗಳು ಹೇಳಿದರು.

ಕಳೆದ 2 ತಿಂಗಳಲ್ಲೇ ರಾಜ್ಯದ್ಯಂತ 1, 400 ಕ್ಕೂ ಹೆಚ್ಚು ಮಹಿಳೆ ಮೇಲೆ ಲೈಂಗಿಕ ಕಿರುಕುಳ, ಮಕ್ಕಳ ಮೇಲಿನ ಕಿರುಕುಳ ಸೇರಿದಂತೆ ಮಹಿಳೆಯರ ಪ್ರತಿ ಅನೇಕ ತೊಂದರೆಯ ಕೇಸ್‌ಗಳು ದಾಖಲಾಗಿವೆ, ಕಾನೂನು- ಸುವ್ಯವಸ್ಥೆ ಕುಸಿದಿದೆ ಎನ್ನಲು ಇದು ಸಾಕಲ್ಲವೆ? ಇನ್ನೂ ಏನೂ ಆಗಿಲ್ಲವೆಂದು ಗೃಹ ಸಚಿವ, ಸಿಎಂ, ಡಿಸಿಎಂ ಹೇಳುತ್ತಾರೆ, ಇವರು ಎಲ್ಲವನ್ನು ಗೂಟಕ್ಕೆ ಸುತ್ತಿ ಬಂದಿದ್ದಾರೆಂದು ಜರಿದರು.

ಕರ್ನಾಟಕ ಕಾಶ್ಮೀರವಾದೀತು: ಕಾಂಗ್ರೆಸ್ ಸದಾ ಮುಸ್ಲಿಂ ಪರ ನಿಲ್ಲುತ್ತೆ. ಹಿಂದೂ ಹಾಗೂ ಮುಸ್ಲಿಂ ಮಧ್ಯೆ ಆಯ್ಕೆ ವಿಷಯ ಬಂದಾಗ ಮುಸ್ಲಿಂ ಪರ, ದಲಿತ ಹಾಗೂ ಮುಸ್ಲಿಂ ಬಂದಾಗ ಮುಸ್ಲಿಂ ಪರ ಎಂದು ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಕೊಳ್ಳಿ ಇಟ್ಟ ಮುಸ್ಲಿಂಮರ ಉದ್ಧಟತನದ ಘಟನೆಯನ್ನು ವಿವರಿಸುತ್ತ ಹುಬ್ಬಳ್ಳಿಯಲ್ಲಿಯೂ ಅವರ ಪಕ್ಷದ ಪಾಲಿಕೆ ಸದಸ್ಯನ ಪುತ್ರಿಯೆ ಹತ್ಯೆಯಾಗಿದ್ದರೂ ಕಾಂಗ್ರಸ್ಸಿಗರು ಬೇಕಾಬಿಟ್ಟಿ ಹೇಳುತ್ತಿರೋದು ನೋಡಿದರೆ ಅವರ ಮುಸ್ಲಿಂ ಪರ ಓಲೈಕೆ ನೀತಿ ಅದೆಷ್ಟೆಂಬುದು ಗೊತ್ತಾಗುತ್ತದೆ ಎಂದರು.

ಹಿಂದುಗಳು ಇನ್ನಾದರೂ ಎಚ್ಚರವಾಗಲಿ, ನರೇಂದ್ರ ಮೋದಿ 3 ನೇ ಬಾರಿ ಪ್ರಧಾನಿಯಾಗಲು ಬೆಂಬಲಿಸಲಿ, ಇಲ್ಲದೆ ಹೋದಲ್ಲಿ ಕರ್ನಾಟಕದಲ್ಲಿ ಪರಿಸ್ಥಿತಿ ಹದಗೆಡುವ ಲಕ್ಷಣಗಳಿವೆ ಎಂದರು. ಮಾತನಾಡಿದ ಅನೇಕ ಮಠಾಧೀಶರು, ಹಿಂದುಗಳೇ ಎಚ್ಚರ, ಮೋದಿ ಇದ್ರೇನೆ ಕಾಂಗ್ರೆಸ್ ಮುಸ್ಲಿಂ ತುಷ್ಟೀಕರಣ ನಿಲ್ಲುತ್ತೆ, ಹಿಂದೂಗಳು ಸುರಕ್ಷಿತ ಇರುತ್ತಾರೆ, ಇಲ್ಲಾಂದ್ರೆ ಕರ್ನಾಟಕ ಕೂಡಾ ಮುಂದೊಂದು ದಿನ ಕಾಶ್ಮೀರ ರೀತಿ ಆಗೋದು ನಿಶ್ಚಿತ ಎಂದು ಎಚ್ಚರಿಕೆ ಮಾತು ಹೇಳಿದರು.

ಬುದ್ದಿ ಜೀವಿಗಳಲ್ಲ, ಲದ್ದಿ ಜೀವಿಗಳು: ವಿಜಯಪುರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್‌ ಯಾತ್ನಾಳ್‌ ಮಾತನಾಡುತ್ತ ಹತ್ಯೆ ವಿಚಾರದಲ್ಲಿನ ಬುದ್ದಿ ಜೀವಿಗಳ ಧೋರಣೆಯನ್ನು ಖಂಡಿಸುತ್ತ ಲದ್ದಿ ಜೀವಿಗಳೆಂದು ಜರಿದರು. ಹಿಂದುಯೇತರರು ಹತ್ಯೆಯಾದಲ್ಲಿ ರ್ಯಾಲಿ ಮಾಡುವ ಇವರು ಹಂದುಗಳ ಹತ್ಯೆಯಾದಾಗ ಮೌನಿಯಾಗುತ್ತಾರೆ, ಇವರ ಇಂತಹ ಧೋರಣೆ ಖಂಡಿಸಬೇಕಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಮುಸ್ಲಿಂ ಪರ ನೀತಿಯೇ ಇಂತಹ ಘಟನೆಗಳಿಗೆ ಕಾರಣವಾಗಿದೆ. ಬರುವ ಚುನಾವಣೆಯಲ್ಲಿ ಹಿಂದುಗಳು ಎಚ್ಚತ್ತು ಮೋದಿಪರವಾಗಿ ನಿಲ್ಲುವ ಮೂಲಕ ಬಿಜೆಪಿ ಗೆಲ್ಲಿಸಿ ಸುರಕ್ಷಿತ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಬೇಕಿದೆ ಎಂದರು.

ಹೋರಾಟದಲ್ಲಿ ಬಿಜೆಪಿ ಸಂಸತ್‌ ಚುನಾವಣೆ ಹುರಿಯಾಳು, ಡಾ. ಉಮೇಶ ಜಾಧವ್‌, ಮಾಜಿ ಶಾಸಕ ರಾಜಕುಮಾರ್ ತೇಲ್ಕೂರ್‌, ಜಿಲ್ಲಾಧ್ಯಕ್ಷ ಶಿವರಾಜ ರದ್ದೇವಾಡಗಿ, ನಗರಾಧ್ಯಕ್ಷ ಚಂದು ಪಾಟೀಲ್‌, ದತ್ತಾತ್ರೇಯ ಪಾಟೀಲ್‌ ರೇವೂರ್‌, ಮೇಯರ್‌ ವಿಶಾಲ ಧರ್ಗಿ, ಉಪ ಮೇಯರ್‌ ಶಿವಾನಂದ ಪಿಸ್ತಿ, ಬಿಜೆಪಿ ಓಬಿಸಿ ಮೋರ್ಚಾದ ಮುಖಡರಾದ ಶೋಭಾ ಬಾಣಿ, ಅವ್ವಣ್ಣ ಮ್ಯಾಕೇರಿ ಸೇರಿದಂತೆ ಅನೇಕರು ಭಾಗವಹಿಸಿ ಮಾತನಾಡಿದರು.