ಸಾರಾಂಶ
ಸಕಲೇಶಪುರ: ರಾಜ್ಯ ಹೆದ್ದಾರಿಯ ಬಿಸಿಲೆ ಘಾಟ್ ಸಮೀಪ ಮದುವೆ ದಿಬ್ಬಣ ಸಾಗುತ್ತಿದ್ದ ವಾಹನ ಮುಗುಚಿ ಬಿದ್ದು ಒರ್ವ ಸಾವನ್ನಪ್ಪಿದ್ದರೆ ವಾಹನದಲ್ಲಿದ್ದ 20 ಜನರು ತೀವ್ರ ಗಾಯಗೊಂಡಿದ್ದಾರೆ. ತಾಲೂಕಿನ ವನಗೂರು ಎಸ್ಟೇಟ್‌ನ ಶಿವರಾಜ್ (57) ಮೃತವ್ಯಕ್ತಿ. ಗುರುವಾರ ವನಗೂರು ಗ್ರಾಪಂ ವ್ಯಾಪ್ತಿಯ ಕುಣಿಕೆರೆ ಗ್ರಾಮದ ಬಸವೇಗೌಡರ ಪುತ್ರ ಯೋಗೇಶ್ ಎಂಬುವವರ ವಿವಾಹಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕುಲಕುಂದ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಬಿಸಿಲೆ ಘಾಟ್ ಸಮೀಪದ ಹೇರ್‌ಪಿನ್ ತಿರುವು ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ವಾಹನ ಮುಗುಚಿ ಮತ್ತೊಂದು ರಸ್ತೆಗೆ ಬಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಶಿವರಾಜ್ ಪುತ್ತೂರು ಆಸ್ಪತ್ರೆಯಲ್ಲಿ ಮೃತಪಟ್ಟರೆ, ಮಂಜುಳಾ, ದೇವರಾಜ್, ಪ್ರವೀಣ್, ವೆಂಕಟೇಶ್ ಎಂಬುವವರು ಗಂಭೀರವಾಗಿ ಗಾಯಗೊಂಡರು. ಇವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೆ, ಮತ್ತಷ್ಟು ಗಾಯಾಳುಗಳನ್ನು ಕಡಬ, ಸುಬ್ರಹ್ಮಣ್ಯ ಹಾಗೂ ಪುತ್ತೂರು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಯಸಳೂರು ಠಾಣೆಯಲ್ಲಿ ದೂರು ದಾಖಲಾಗಿದೆ.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))