ಒಂದು ಕೊಲೆ ಪ್ರಕರಣದಿಂದ ಮತ್ತೊಂದು ಕೊಲೆಯ ಪ್ರಕರಣ ಪತ್ತೆ !

| Published : Aug 29 2024, 12:46 AM IST

ಒಂದು ಕೊಲೆ ಪ್ರಕರಣದಿಂದ ಮತ್ತೊಂದು ಕೊಲೆಯ ಪ್ರಕರಣ ಪತ್ತೆ !
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಹೂಜಗಲ್ ಗ್ರಾಮದ ಉಮೇಶ್ ಬೆಂಗಳೂರಿನ ಮಾದನಾಯಹಳ್ಳಿಯ ಹೆಂಡತಿ ದಿವ್ಯ ರವರನ್ನು ಮಾಗಡಿ ತಾಲೂಕಿನ ಚೀಳೂರು ಬೆಟ್ಟದ ಹತ್ತಿರ ದೇವಸ್ಥಾನಕ್ಕೆ ಎಂದು ಕರೆದುಕೊಂಡು ಹೋಗಿ ಆ. 12ರಂದು ಕೊಲೆ ಮಾಡಿ ಹೂತು ಹಾಕಿದ ಪ್ರಕರಣದ ಆರೋಪಿ ಕಿರಣ್ ಆರೋಪಿಯ ಹೆಂಡತಿ ಪೂಜಾ ರವರನ್ನು 5 ವರ್ಷದ ಹಿಂದೆ ಅದೇ ಜಾಗದಲ್ಲಿ ಕೊಲೆ ಮಾಡಿ ಹೂತು ಹಾಕಿದ್ದ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಮಾಗಡಿ ಪೋಲೀಸರು ಯಶಸ್ವಿಯಾಗಿದ್ದಾರೆ.

ಮಾಗಡಿ: ತಾಲೂಕಿನ ಹೂಜಗಲ್ ಗ್ರಾಮದ ಉಮೇಶ್ ಬೆಂಗಳೂರಿನ ಮಾದನಾಯಹಳ್ಳಿಯ ಹೆಂಡತಿ ದಿವ್ಯ ರವರನ್ನು ಮಾಗಡಿ ತಾಲೂಕಿನ ಚೀಳೂರು ಬೆಟ್ಟದ ಹತ್ತಿರ ದೇವಸ್ಥಾನಕ್ಕೆ ಎಂದು ಕರೆದುಕೊಂಡು ಹೋಗಿ ಆ. 12ರಂದು ಕೊಲೆ ಮಾಡಿ ಹೂತು ಹಾಕಿದ ಪ್ರಕರಣದ ಆರೋಪಿ ಕಿರಣ್ ಆರೋಪಿಯ ಹೆಂಡತಿ ಪೂಜಾ ರವರನ್ನು 5 ವರ್ಷದ ಹಿಂದೆ ಅದೇ ಜಾಗದಲ್ಲಿ ಕೊಲೆ ಮಾಡಿ ಹೂತು ಹಾಕಿದ್ದ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಮಾಗಡಿ ಪೋಲೀಸರು ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ತಾವರೆಕೆರೆ ನಿವಾಸಿ ಪೂಜಾ (28), 2019 ಮೇ ನಲ್ಲಿ ಮಾಗಡಿ ತಾಲೂಕಿನ ಹೂಜಗಲ್ ಗ್ರಾಮದ ಗಂಡ ಕಿರಣ್ ನಿಂದ ಕೊಲೆಯಾದ ಗೃಹಿಣಿ ಎಂದು ತಿಳಿದು ಬಂದಿದೆ. ಕಿರಣ್ ಮತ್ತು ಪೂಜಾ ಇಬ್ಬರೂ 2018 ರಲ್ಲಿ ಮದುವೆಯಾಗಿ 2019ರಲ್ಲಿ ಪೂಜಾ ಕಾಣೆಯಾಗಿರುವ ಬಗ್ಗೆ ಮಾಹಿತಿ ಬಂದಿದ್ದು ಕಿರಣ್ ಮತ್ತು ಪೂಜಾ ದಂಪತಿಗಳಿಗೆ ಆರು ವರ್ಷದ ಮಗಳಿದ್ದು ಪೂಜಾ ಬೇರೆಯವರ ಜತೆ ಅಕ್ರಮ ಸಂಬಂಧ ಇಟ್ಟುಕೊಂಡು ಕಿರಣ್ ನಿಂದ ದೂರವಾಗಿ ಮತ್ತೆ ಕಿರಣ ಜತೆ ವಾಸವಾದ ಸಮಯದಲ್ಲಿ ಕಿರಣ್ ಮತ್ತೆ ಅಕ್ರಮ ಸಂಬಂಧ ಇಟ್ಟುಕೊಂಡಿರುವನ ಜತೆ ಹೋಗಬಾರದೆಂದು 2019ರಲ್ಲಿ ಕೊಲೆ ಮಾಡಿರುವುದಾಗಿ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.ತನಿಖೆ ವೇಳೆ ಪೊಲೀಸರು ಪೂಜಾ ರವರ ತಾಯಿ ಗೌರಮ್ಮ ನವರಿಂದ ಆ.26ರಂದು ಮಾಗಡಿ ಪೊಲೀಸ್ ಠಾಣೆಯಲ್ಲಿ ಪೂಜಾ ಕಾಣೆಯಾಗಿರುವ ಬಗ್ಗೆ ದೂರು ಪಡೆದುಕೊಂಡು ಆ. 27ಕ್ಕೆ ಮತ್ತೆ ಕಿರಣ್ ರನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿದಾಗ ಪೂಜಾ ಕೊಲೆಯ ಬಗ್ಗೆ ಪೊಲೀಸರಿಗೆ ವಿಚಾರಣೆ ವೇಳೆ ತಿಳಿದು ಬಂದಿದೆ.

ಹಲ್ಲು, ಕೂದಲು, ಮೂಳೆ ಪತ್ತೆ : ಮಾಗಡಿ ಪೋಲೀಸರು ಬೆಂಗಳೂರಿನ ಎಫ್ ಎಸ್ ಎಲ್ ತಂಡ ತಹಶೀಲ್ದಾರ್ ಶರತ್ ಕುಮಾರ್ ತಾಲೂಕು ಆರೋಗ್ಯ ಅಧಿಕಾರಿ ಚಂದ್ರಶೇಖರ್ ನೇತೃತ್ವದಲ್ಲಿ ಬುಧವಾರ ತಾಲೂಕಿನ ಚೀಳೂರು ಬೆಟ್ಟದಲ್ಲಿ ಕಿರಣ್ ಎಂಬುವನು ತನ್ನ ಹೆಂಡತಿಯನ್ನು ಕೊಲೆ ಮಾಡಿ ಹೂತು ಹಾಕಿದ್ದ ಸ್ಥಳಕ್ಕೆ ಹೋಗಿ ಮಣ್ಣನ್ನು ಆಗಿದಾಗ ಎರಡು ಹಲ್ಲು, ಕೂದಲು, ಮೂಳೆ ಪತ್ತೆಯಾಗಿದ್ದು ಇದನ್ನು ಬೆಂಗಳೂರಿನ ಎಫ್ ಎಸ್ ಎಲ್ ತಂಡಕ್ಕೆ ನೀಡಿ ತಾಯಿ ಗೌರಮ್ಮ ರವರ ಡಿಎನ್ಎ ಪರೀಕ್ಷೆ ಮಾಡಿ ಪೂಜಾ ದೇಹವೇ ಎಂಬುದನ್ನು ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತದೆ ಎಂದು ಮಾಗಡಿ ಪೊಲೀಸ್ ಇನ್ಸ್ ಪೆಕ್ಟರ್‌ ಗಿರಿರಾಜ್ ತಿಳಿಸಿದ್ದಾರೆ.

ಕೊಲೆ ಆರೋಪದ ಅಡಿ ಭರತ್, ಕುಮಾರ್, ರವರನ್ನು ಬಂಧಿಸಿ ವಿಚಾರಣೆ ಕೈಗೊಳ್ಳಲಾಗಿದೆ ಎಂದು ಮಾಗಡಿ ಪೋಲೀಸರು ತಿಳಿಸಿದ್ದಾರೆ.