ಈ ಹಿಂದೆ ಮಹಿಳೆ ನಾಲ್ಕು ಗೋಡೆಗಳ ಮಧ್ಯದ ಬದುಕಿಗೆ ಮಾತ್ರ ಸೀಮಿತವಾಗಿದ್ದಳು. ಪ್ರಸ್ತುತ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಗಮನಾರ್ಹ ಸಾಧನೆ ಮೆರೆಯುತ್ತ, ವಿಶೇಷ ಛಾಪು ಮೂಡಿಸುತ್ತಿದ್ದಾರೆ. ಮಹಿಳೆಯರ ರಕ್ಷಣೆಗಾಗಿಯೇ ಹಲವಾರು ಕಾನೂನುಗಳಿದ್ದು, ಇಂತಹ ಕಾನೂನುಗಳ ರಕ್ಷಣೆಯಿಂದ ಮಹಿಳೆ ಎಲ್ಲ ಕ್ಷೇತ್ರಗಳಲ್ಲಿಯೋ ಸದೃಢವಾಗಿ ಬೆಳೆಯಲು ಸಹಕಾರಿಯಾಗಿದೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶೆ ಸೌಭಾಗ್ಯ ಭೂಷೇರ್ ಹೇಳಿದ್ದಾರೆ.

- ಚನ್ನಗಿರಿಯಲ್ಲಿ ಮಹಿಳಾ ದಿನಾಚರಣೆಯಲ್ಲಿ ನ್ಯಾ.ಸೌಭಾಗ್ಯ ಭೂಷೇರ್‌

- - -

ಚನ್ನಗಿರಿ: ಈ ಹಿಂದೆ ಮಹಿಳೆ ನಾಲ್ಕು ಗೋಡೆಗಳ ಮಧ್ಯದ ಬದುಕಿಗೆ ಮಾತ್ರ ಸೀಮಿತವಾಗಿದ್ದಳು. ಪ್ರಸ್ತುತ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಗಮನಾರ್ಹ ಸಾಧನೆ ಮೆರೆಯುತ್ತ, ವಿಶೇಷ ಛಾಪು ಮೂಡಿಸುತ್ತಿದ್ದಾರೆ. ಮಹಿಳೆಯರ ರಕ್ಷಣೆಗಾಗಿಯೇ ಹಲವಾರು ಕಾನೂನುಗಳಿದ್ದು, ಇಂತಹ ಕಾನೂನುಗಳ ರಕ್ಷಣೆಯಿಂದ ಮಹಿಳೆ ಎಲ್ಲ ಕ್ಷೇತ್ರಗಳಲ್ಲಿಯೋ ಸದೃಢವಾಗಿ ಬೆಳೆಯಲು ಸಹಕಾರಿಯಾಗಿದೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶೆ ಸೌಭಾಗ್ಯ ಭೂಷೇರ್ ಹೇಳಿದರು.

ಪಟ್ಟಣದ ಮಠದ ಬೀದಿಯ ಶ್ರೀ ರಾಘವೇಂದ್ರ ಸ್ವಾಮಿ ಸಮುದಾಯ ಭವನದಲ್ಲಿ ಭಾನುವಾರ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯ ವಾದಿಗಳ ಸಂಘ, ವಿಪ್ರ ಮಹಿಳಾ ಮೈತ್ರಿಕೂಟ ಆಶ್ರಯದಲ್ಲಿ ನಡೆದ ಅಂತರ ರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ಸಮಾಜದ ಪ್ರಮುಖ ಶಕ್ತಿಯಾಗಿದ್ದಾರೆ. ತಾಯಿ, ಸಹೋದರಿ, ಮಗಳು, ಅಕ್ಕ, ತಂಗಿ ಹೀಗೆ ವಿವಿಧ ರೂಪಗಳಲ್ಲಿ ತಮ್ಮ ಮಹತ್ವದ ಪಾತ್ರವನ್ನು ಜೀವನದಲ್ಲಿ ನಿರ್ವಹಿಸುತ್ತಿದ್ದಾರೆ. ತನ್ನ ಕುಟುಂಬ ಮಾತ್ರವಲ್ಲದೇ, ಸಮಾಜ ಮತ್ತು ದೇಶದ ಅಭಿವೃದ್ಧಿಯಲ್ಲೂ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.

ಭಾರತ ದೇಶದಲ್ಲಿ ಅನೇಕ ಮಹಿಳೆಯರು ಇತಿಹಾಸ ನಿರ್ಮಿಸಿದವರಾಗಿದ್ದಾರೆ. ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಅಂತರಿಕ್ಷಯಾನಿ ಕಲ್ಪನಾ ಚಾವ್ಲಾ, ವಿಶ್ವಮಾತೆ ಮದರ್ ತೆರೆಸಾ ಸೇರಿದಂತೆ ಇನ್ನು ಅನೇಕ ಜನ ವೀರವನಿತೆಯರು ಅಸಾಧ್ಯವಾದ ಸಾಧನೆಗಳ ಮೆರೆದು ವಿಶ್ವದ ಇತಿಹಾಸದ ಪುಟಗಳಲ್ಲಿ ಹೆಸರುಗಳ ದಾಖಲಿಸಿದ್ದಾರೆ ಎಂದರು.

ಅತಿಥಿ ಉಪನ್ಯಾಸವನ್ನು ಪ್ಯಾನೆಲ್‌ ವಕೀಲರಾದ ಕೆ.ಎಸ್.ಪ್ರತಿಭಾ ಮಹಿಳಾ ದಿನದ ಮಹತ್ವ ಕುರಿತು ಮಾತನಾಡಿದರು. ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಎಚ್.ಮೋಹನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಧಾನ ಅಧಿಕ ಸಹಾಯಕ ಸರ್ಕಾರಿ ಅಭಿಯೋಜಕರಾದ ಎಂ.ಸರಿತಾ, ವಕೀಲರ ಸಂಘದ ಕಾರ್ಯದರ್ಶಿ ಜಿ.ಎಸ್. ಮೋಹನ್, ವಕೀಲರಾದ ಜಿ.ಎಚ್. ಉಷಾ, ವರ್ಷಿತಾ, ಪವಿತ್ರ, ಉಲ್ಮೆಸಲ್ಮಾ, ವಿಪ್ರ ಸಮಾಜದ ಹಿರಿಯ ಮಹಿಳೆ ಅಂಬುಜಮ್ಮ, ವಿಪ್ರ ಮಹಿಳೆಯರು ಭಾಗವಹಿಸಿದ್ದರು.

- - -

-8ಕೆಸಿಎನ್‌ಜಿ1.ಜೆಪಿಜಿ:

ಸಮಾರಂಭವನ್ನು ಹಿರಿಯ ಸಿವಿಲ್ ನ್ಯಾಯಾಧೀಶೆ ಸೌಭಾಗ್ಯ ಭೂಷೇರ್ ಉದ್ಘಾಟಿಸಿದರು.