ಸಾರಾಂಶ
ಶಿಗ್ಗಾಂವಿ:ದಾನಧರ್ಮ ದತ್ತಿಗಳನ್ನು ಮಾಡಿ ಸತ್ಕಾರ್ಯಕ್ಕೆ ಹೋಗಬೇಕಾದರೆ ದುಡಿದು ದಾಸೋಹ ಮಾಡಬೇಕು, ಅದು ಶ್ರೇಷ್ಠವಾದದ್ದು ಎಂದು ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಧರ್ಮಸಭೆ ಸಾನಿಧ್ಯವಹಿಸಿ ಮಾತನಾಡಿದರು. ವಿಶಾಲವಾದ ಹೃದಯ ನಮ್ಮದಾಗಿರಬೇಕು ಮತ್ತು ವಿಶಾಲ ವೈಶಾಲ್ಯತೆಯೊಂದಿಗೆ ಹೃದಯ ವಾತ್ಸಲ್ಯ ಅಳವಡಿಸಿಕೊಂಡು ತನು ಮನವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು. ಸೀತಾಗಿರಿ ಡಾ.ಎ.ಸಿ. ವಾಲಿ ಮಹಾರಾಜರು ಮಾತನಾಡಿ, ಸರ್ವ ಜನಾಂಗದವರು ಸೇರಿ ಸಂಘಟನೆ ಮಾಡಿ ಮತ್ತೊಮ್ಮೆ ವಿವಿಧ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಇದರಿಂದ ನಮಗೆಲ್ಲ ಅರ್ಥವಾಗುವುದು ಧರ್ಮ ಇನ್ನೂ ಜೀವಂತವಿದೆ ಎಂದರು.ಗುಳೇದಗುಡ್ಡ ಡಾ. ನೀಲಕಂಠ ಶಿವಾಚಾರ್ಯ ಅಮರೇಶ್ವರ ಬ್ರಹ್ಮನಠ ಶ್ರೀಗಳು ಮಾತನಾಡಿ, ೨೧ನೇ ಶತಮಾನದಲ್ಲಿ ಧರ್ಮ ಅಳಿವಿನ ಅಂಚಿಗೆ ಹೋಗುತ್ತಿರುವ ಕಾರಣ ಈ ಧರ್ಮಸಭೆ ಕಾರ್ಯಕ್ರಮ ಯಶಸ್ವಿಯಾಗಿದೆ. ಸಮಾಜದಲ್ಲಿ ಅನೇಕ ಸಂಬಂಧಗಳಿವೆ. ಆ ಸಂಬಂಧಗಳ ಕೊಂಡಿ ಕಳಚದಂತೆ ನಾವೆಲ್ಲರೂ ಕಾಪಾಡಿಕೊಳ್ಳಬೇಕು ಮತ್ತು ದೇವರು ಎಲ್ಲಿದ್ದಾನೆ ನಮ್ಮ ಆತ್ಮವೇ ದೇವಾಲಯ ಅನ್ನು ಶುದ್ಧ ಹಾಗೂ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.
ಮಹಾಂತ ಶರಣರು, ಪುರಸಭೆ ಸದಸ್ಯ ಪರಶುರಾಮ ಸೊನ್ನದ, ದೇವರಾಜ ಸುಣಗಾರ ಮಾತನಾಡಿದರು. ಪುರಾಣ ಪ್ರವಚನವನ್ನು ಪ್ರಭಯ್ಯ ಶಾಸ್ತ್ರೀ ಹಿರೇಮಠ, ಶಿವಾನಂದ ಮಂದೇವಾಲ, ಬಸವರಾಜ ಚಳಗೇರಿ ಸಂಗೀತ ಸೇವೆ ಜರುಗಿತು. ದಾನಿಗಳನ್ನು ಸನ್ಮಾನಿಸಲಾಯಿತು. ನಟರಾಜ ನಾಟ್ಯ ಕಲಾ ಸಂಸ್ಥೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.ಮಲ್ಲೇಶಪ್ಪಅತ್ತಿಗೇರಿ, ಶಿದ್ರಾಮಪ್ಪ ಯಲಿಗಾರ, ಉಮೇಶ ಗೌಳಿ, ಮಂಜುನಾಥ ದುಭೆ, ರಾಮಣ್ಣ ಅಂದಲಗಿ, ಹೊನ್ನಪ್ಪ ಹಾಳಿ, ಗುಡ್ಡಪ್ಪ ಸುಣಗಾರ, ವೀರೇಂದ್ರ ಬಳಿಗಾರ, ರಾಜಣ್ಣ ಕೊಪ್ಪಳ, ಪಕ್ಕೀರಪ್ಪ ಕಾಂಬಳೆ, ಸದಾಶಿವಯ್ಯ ಹಿರೇಮಠ, ವಿರೂಪಾಕ್ಷಪ್ಪ ನೀರಲಗಿ, ಸುಶೀಲ ಹಿರೇಮಠ ಸೇರಿದಂತೆ ಸದ್ಬಕ್ತರು ಉಪಸ್ಥಿತರಿದ್ದರು. ಸುಭಾಸ ಚವ್ಹಾಣ ಸ್ವಾಗತಿಸಿದರು. ಪ್ರೊ. ಶಶಿಕಾಂತ ರಾಠೋಡ, ಶಿಕ್ಷಕಿ ಗಂಗೂಬಾಯಿ ದೇಸಾಯಿ ಕಾರ್ಯಕ್ರಮ ನಿರ್ವಹಿಸಿದರು.ಪಟ್ಟಣದ ಶವ ಸಂಸ್ಕಾರ ಮಾಡುವ ಪಕ್ಕೀರಪ್ಪಕಟ್ಟಿಮನಿ ಅವರನ್ನು ಮೈಲಾರಲಿಂಗೇಶ್ವರ ಸಮಿತಿ ವತಿಯಿಂದ ಗೌರವ ಸನ್ಮಾನ ಮಾಡಲಾಯಿತು.