ಕನ್ನಡದಲ್ಲಿ ನಾಮಫಲಕ ಬರೆಸಲು ಒಂದು ವಾರದ ಗಡವು

| Published : Dec 23 2023, 01:45 AM IST / Updated: Dec 23 2023, 01:46 AM IST

ಸಾರಾಂಶ

ರಾಮದುರ್ಗ ತಾಲೂಕು ಆಡಳಿತಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣದ ಕಾರ್ಯಕರ್ತರು ಕನ್ನಡದಲ್ಲಿ ನಾಮಫಲಕ ಬರೆಸಲು ಒಂದು ವಾರದ ಗಡವು ನೀಡಿ ಮನವಿ ಸಲ್ಲಿಕೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ರಾಮದುರ್ಗ

ಪುರಸಭೆ ವ್ಯಾಪ್ತಿಯ ಮತ್ತು ತಾಲೂಕಿನ ಗ್ರಾಮೀಣ ಪ್ರದೇಶ ಸೇರಿದಂತೆ ಎಲ್ಲ ಅಂಗಡಿ ಮುಂಗಟ್ಟುಗಳ ನಾಮಫಲಕವನ್ನು ಕನ್ನಡದಲ್ಲಿ ಬರೆಸಲು ಒಂದು ವಾರದ ಗಡವು ನೀಡಿ ತಾಲೂಕು ಆಡಳಿತಕ್ಕೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯನಗೌಡ ಬಣದ ಕಾರ್ಯಕರ್ತರು ಮನವಿ ಅರ್ಪಿಸಿದರು.

ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಬೈಕ್‌ ರ್‍ಯಾಲಿಯಲ್ಲಿ ಮೂಲಕ ತಹಸೀಲ್ದಾರ್‌ಗೆ, ಪುರಸಭೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ರಕ್ಷಣಾ ವೇದಿಕೆಯ ಕಾರ್ಯಕರ್ತರು, ಅಂಗಡಿ ಮುಂಗಟ್ಟುಗಳ ನಾಮಫಲಕದಲ್ಲಿ ಶೇ.60 ರಷ್ಟ ಕನ್ನಡ ಭಾಷೆಯಲ್ಲಿರಬೇಕೆಂದು ಆದೇಶವಿದ್ದರೂ ಸಹಿತ ವ್ಯಾಪಾರಸ್ಥರು, ಉದ್ಯೋಗಿಗಳು ತಮ್ಮ ನಾಮಫಲಕವನ್ನು ಇಂಗ್ಲಿಷ್‌ ಭಾಷೆಯಲ್ಲಿ ರಾರಾಜಿಸುವಂತೆ ಮಾಡಿದ್ದು ನಾಮಫಲಕದಲ್ಲಿ ಒಂದು ವಾರದೋಳಗೆ ಶೇ.60 ರಷ್ಟ ಕನ್ನಡ ಭಾಷೆಯಲ್ಲಿ ಬರೆಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು.

ಒಂದು ವಾರದಲ್ಲಿ ನಾಮಫಲಕದಲ್ಲಿ ಕನ್ನಡ ಭಾಷೆ ಬಳಸದಿದ್ದರೇ ಆಂಗ್ಲ ಭಾಷೆಯಲ್ಲಿನ ನಾಮಫಲಕವನ್ನು ತೆರವುಗೊಳಿಸಲಾಗುವುದು.ಈ ಸಂಭದ ಮುಂದೆ ನಡೆಯುವ ಆಗುಹೋಗುಗಳಿಗೆ ತಾಲೂಕು ಆಡಳಿತ ಹೊಣೆ ಹೊರಬೇಕಾಗುತ್ತದೆ ಎಂದು ಮನವಿ ಮೂಲಕ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ವಿಜಯಕುಮಾರ ರಾಠೋಡ, ಉಪಾಧ್ಯಕ್ಷ ಕೃಷ್ಣಾ ಬಡಿಗೇರ, ಚೇತನ ದೇಸಾಯಿ, ಕಾರ್ಯದರ್ಶಿ ಆನಂದ ಲಮಾಣಿ, ಸದಸ್ಯರಾದ ಹನಮಂತ ಕುಲಗೋಡ, ಮಹಾಂತೇಶ ಪಾಶ್ಚಾಪೂರ, ಈರಣ್ಣ ಕಲ್ಯಾಣಿ, ಗಾಯತ್ರಿ ದೇವಾಂಗಮಠ, ಕಲ್ಪನಾ ಗುಡಮಿ, ಮಂಜುಳಾ ಬೇಲೂರ, ಮಾದೇವಿ ಪಾಟೀಲ ಸೇರಿದಂತೆ ಹಲವರು ಇದ್ದರು.