ಹೆಚ್ಚಿನ ಮಳೆಯಿಂದ ಈರುಳ್ಳಿ ಬೆಳೆಗೆ ಮಚ್ಚೆ ರೋಗ

| Published : Aug 04 2024, 01:22 AM IST

ಸಾರಾಂಶ

ಹೊಸದುರ್ಗ ತಾಲೂಕಿನ ಕಸಬಾ ಹೋಬಳಿ ಬಾಗೂರಿನ ಸುತ್ತಮುತ್ತ ಬಿತ್ತನೆ ಮಾಡಲಾಗಿರುವ ಈರುಳ್ಳಿ ಬೆಳೆಗೆ ಹೆಚ್ಚಿನ ಮಳೆಯ ತೇವಾಂಶದಿಂದ ನೇರಳೆ ಮಚ್ಚೆ ರೋಗ ಕಂಡು ಬಂದಿದ್ದು ತೋಟಗಾರಿಕೆ ಇಲಾಖೆ ಅಧಿಕಾರಿಗಳು, ವಿಜ್ಞಾನಿಗಳು ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ತಾಲೂಕಿನ ಕಸಬಾ ಹೋಬಳಿ ಬಾಗೂರಿನ ಸುತ್ತಮುತ್ತ ಬಿತ್ತನೆ ಮಾಡಲಾಗಿರುವ ಈರುಳ್ಳಿ ಬೆಳೆಗೆ ಹೆಚ್ಚಿನ ಮಳೆ ತೇವಾಂಶದಿಂದ ನೇರಳೆ ಮಚ್ಚೆ ರೋಗ ಕಂಡು ಬಂದಿದ್ದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಬಬ್ಬೂರಿನ ಕೃಷಿಕೇಂದ್ರದ ವಿಜ್ಞಾನಿಗಳು ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶರಣ ಬಸಪ್ಪ ಭೋಗಿ ರೈತರ ಸಮಸ್ಯೆ ಆಲಿಸಿ ಮಾತನಾಡಿ, ಕಳೆದ ಹತ್ತು ದಿನಗಳಿಂದ ಸತತವಾಗಿ ಬಿಡದೆ ಮಳೆಯು ಸುರಿಯುತ್ತಿರುವದಿಂದ ತೇವಾಂಶ ಹೆಚ್ಚಳದಿಂದ ನೇರಳೆ ಮಚ್ಚೆ ರೋಗ ಕಂಡು ಬಂದಿದೆ. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಔಷಧ ಸಿಂಪಡಣೆ ಬಗ್ಗೆ ಮಾಹಿತಿ ನೀಡಲಿದ್ದಾರೆ. ಮೋಡ ಮರೆಯಾಗಿ ಬಿಸಿಲು ಬಂದರೆ ರೋಗ ನಿಯಂತ್ರಣ ಬರಲಿದೆ ಎಂದು ತಿಳಿಸಿದರು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಓಂಕಾರಪ್ಪ ಮಾತನಾಡಿ, ಭೂಮಿಯಲ್ಲಿನ ತೇವಾಂಶ ಹೆಚ್ಚಾಗಿ ನೇರಳೆ ಮಚ್ಚೆ ರೋಗ (ಪರ್ಪಲ್ ಬ್ಲಾಚ್ ರೋಗ) ಹೆಚ್ಚಾಗಿದೆ. ಇದಕ್ಕೆ ರೈತರು propiconozole 1 ಮೀ.ಲೀ. ಅಥವಾ hexaconozol 1 ಮೀ.ಲೀ ಪ್ರತೀ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ತಿಳಿಸಿದರು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಮಹಾಂತೇಶ್ ಪಿ.ಎಸ್. ಇದರ ಕುರಿತು ಮಾಹಿತಿ ನೀಡಿದರು. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ವೆಂಕಟೇಶ್ ಮೂರ್ತಿ, ಸಹಾಯಕ ನಿರ್ದೇಶಕ ಶೋಭಾ, ಹೋಬಳಿ ಅಧಿಕಾರಿ ಪುಟ್ಟಣ್ಣ ಸಿ, ನರಸಿಂಹಮೂರ್ತಿ ಎಚ್.ನಿರಂಜನ್, ರಂಗನಾಥ್ ಬಿ. ರೈತರಾದ ವೆಂಕಟೇಶ, ಕೇಶವಮೂರ್ತಿ, ಅಶೋಕ್, ಮತ್ತಿತರರು ಇದ್ದರು.