ಇನ್ನು 3 ವರ್ಷ ಅಷ್ಟೇ, ಕೌಂಟ್ ಮಾಡಿಕೊಳ್ಳಿ: ಸವಾಲು

| Published : May 13 2025, 01:36 AM IST

ಇನ್ನು 3 ವರ್ಷ ಅಷ್ಟೇ, ಕೌಂಟ್ ಮಾಡಿಕೊಳ್ಳಿ: ಸವಾಲು
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ: ಕಾಲಚಕ್ರ ಹೀಗೆ ಇರಲ್ಲ. ಜನ ಎಲ್ಲ ನೋಡುತ್ತಿದ್ದಾರೆ, ಇವತ್ತು ಮೇಲಿದ್ದಾರೆ, ನಾಳೆ ಕೆಳಗೆ ಬರಬೇಕು. ಇನ್ನು 3 ವರ್ಷ ಅಷ್ಟೇ, ಕೌಂಟ್ ಮಾಡಿಕೊಳ್ಳಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟಾಂಗ್ ನೀಡಿದರು.

ಚನ್ನಪಟ್ಟಣ: ಕಾಲಚಕ್ರ ಹೀಗೆ ಇರಲ್ಲ. ಜನ ಎಲ್ಲ ನೋಡುತ್ತಿದ್ದಾರೆ, ಇವತ್ತು ಮೇಲಿದ್ದಾರೆ, ನಾಳೆ ಕೆಳಗೆ ಬರಬೇಕು. ಇನ್ನು 3 ವರ್ಷ ಅಷ್ಟೇ, ಕೌಂಟ್ ಮಾಡಿಕೊಳ್ಳಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟಾಂಗ್ ನೀಡಿದರು.

ತಾಲೂಕಿನ ಅಮ್ಮಳ್ಳಿದೊಡ್ಡಿ ಗ್ರಾಮದಲ್ಲಿ ಶ್ರೀ ವಿನಾಯಕ ದೇವಸ್ಥಾನ, ಉರಿಬತ್ತಿ ಆಂಜನೇಯಸ್ವಾಮಿ ದೇವಸ್ಥಾನ ಹಾಗೂ ಮುನೇಶ್ವರಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ರಾಮನಗರಕ್ಕೆ ಕುಮಾರಸ್ವಾಮಿ ಕೊಡುಗೆ ಏನು ಇಲ್ಲ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ನಿಖಿಲ್‌, ಜಿಲ್ಲೆಯಲ್ಲಿ ಜೆಡಿಎಸ್ ಸದೃಢವಾಗಿದೆ. ಹಾಗಾಗಿ ನಮ್ಮ ಬಗ್ಗೆ ಮಾತನಾಡದೆ ಇನ್ಯಾರನ್ನು ದೂರುತ್ತಾರೆ. ಯಾವ ಕಾಲಘಟ್ಟದಲ್ಲಿ ಯಾವ ನಿರ್ಧಾರ ಮಾಡಬೇಕೋ ಜನರು ಮಾಡ್ತಾರೆ. ದೇವೇಗೌಡರು, ಕುಮಾರಣ್ಣ ಜಿಲ್ಲೆಗೆ ಏನೇನು ಕೆಲಸ ಮಾಡಸಿದ್ದಾರೆ. ಸರ್ವತೋಮುಖ ಅಭಿವೃದ್ಧಿಗೆ ಏನು ಮಾಡಿದ್ದಾರೆ. ಅದು ಜನರಿಗೂ ಗೊತ್ತಿದೆ ಎಂದು ಹೇಳಿದರು.

ಅವರು ಸರ್ಕಾರ ಇದೇ ಮಾತನಾಡುತ್ತಿದ್ದಾರೆ. ಮಾತನಾಡಲಿ. ಇದೇ ರೀತಿ ಇರಲ್ಲ, ಕಾಲಚಕ್ರ ಉರುಳಲಿದೆ. ಈಗ ನೀವು ಅಧಿಕಾರದಲ್ಲಿ ಇದ್ದೀರಿ, ಜನರ ಕೆಲಸ ಮಾಡಿ, ನಮ್ಮ ಮೇಲೆ ಯಾಕೆ ಗೂಬೆ ಕೂರಿಸುತ್ತೀರಿ ಎಂದು ಪ್ರಶ್ನಿಸಿದರು.

ಅಧಿಕಾರ ಇನ್ನು 2-3 ವರ್ಷ ಇರಬಹುದು, ನೋಡೋಣ ಏನು ಕಡಿದು ದಬ್ಬಾಕುತ್ತೀರಿ. ಅವರು ಜನರಿಗೆ ಸೈಟ್ ಕೊಡಲಿ, ಕೇವಲ ಮಾತಾಗಿ ಉಳಿಯುವುದು ಬೇಡ. ಕಡತಗಳಲ್ಲಿ ಕೆಲಸ ಮಾಡಲಿ, ಮಾತಿನಂತೆ ನಡೆದುಕೊಳ್ಳಲಿ. ಜಿಲ್ಲೆ ಬಿಟ್ಟು ನಾವು ಎಲ್ಲೂ ಹೋಗಿಲ್ಲ. ಇಲ್ಲಿಯೇ ಇದ್ದೇವೆ, ಅದಕ್ಕೆ ಬಂದಿರೋದು ಎಂದು ಟಾಂಗ್ ನೀಡಿದರು.

ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ. ಜಯಮುತ್ತು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮು, ಡಿ.ಎಂ.ಕೆ ಕುಮಾರ್, ಮಂಜುನಾಥ್ ಇತರರಿದ್ದರು.

ಪೊಟೋ೧೨ಸಿಪಿಟಿ೪:

ಚನ್ನಪಟ್ಟಣ ತಾಲೂಕಿನ ಅಮ್ಮಳ್ಳಿದೊಡ್ಡಿ ಗ್ರಾಮದಲ್ಲಿ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಿಖಿಲ್ ಕುಮಾರಸ್ವಾಮಿ ಅವರನ್ನು ಸನ್ಮಾನಿಸಲಾಯಿತು.